ಬಲವಂತದ ಮತಾಂತರಕ್ಕೆ ಒಪ್ಪದ ಹಿನ್ನೆಲೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ
ಮೈಸೂರು

ಬಲವಂತದ ಮತಾಂತರಕ್ಕೆ ಒಪ್ಪದ ಹಿನ್ನೆಲೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

January 7, 2022

ಸುದ್ದಿಗೋಷ್ಠಿಯಲ್ಲಿ ಕುಟುಂಬದ ಅಳಲು

ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಪೊಲೀಸರು; ಆರೋಪ

ಮೈಸೂರು, ಜ.೬(ಆರ್‌ಕೆಬಿ)- ಬಲವಂತದ ಮತಾಂತರಕ್ಕೆ ಒಪ್ಪದಿದ್ದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಅಣ್ಣ ಮತ್ತು ಅತ್ತಿಗೆ ಮೇಲೆ ಕಿರುಕುಳ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಮಗೆ ಜೀವ ಭಯ ಇರುವುದರಿಂದ ರಕ್ಷಣೆ ನೀಡುವಂತೆ ಎಚ್.ಡಿ.ಕೋಟೆ ತಾಲೂಕು ಟೈಗರ್ ಬ್ಲಾಕ್‌ನ ಕೆ.ಯದುನಂದನ ಮತ್ತು ಅವರ ಕುಟುಂಬ ಮನವಿ ಮಾಡಿದೆ.
ಹಲ್ಲೆಯಿಂದ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಗುರುವಾರ ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ, ಹಲ್ಲೆಯಿಂದ ಆಗಿರುವ ದೈಹಿಕ ಗಾಯಗಳನ್ನು ಪ್ರದರ್ಶಿಸಿದರು. ಆರೋಪಿ ವಿರುದ್ಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ನನಗೆ ಕ್ರೆöÊಸ್ತ ಧರ್ಮಕ್ಕೆ ಮತಾಂತರ ಆಗುವಂತೆ ನನ್ನ ಸಹೋ ದರನೇ ಒತ್ತಡ ಹೇರಿದ್ದಾನೆ. ಕ್ರೆöÊಸ್ತ ಧರ್ಮಕ್ಕೆ ಮತಾಂತರ ವಾಗು, ನಿನ್ನ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ ಎಂದು ಒತ್ತಾಯಿಸಿದ. ಆದರೆ ನಾನು ಯಾವುದೇ ಧರ್ಮಕ್ಕೂ ಮತಾಂತರ ವಾಗುವುದಿಲ್ಲ ಎಂದು ಅವನಿಗೆ ಸ್ಪಷ್ಪ ಪಡಿಸಿದೆ. ಇದರಿಂದ ಅಸಮಾಧಾನ ಗೊಂಡ ಆತ, ಆತನ ಪತ್ನಿ ಮತ್ತು ಇತರೆ ಸಹಚರರೊಂದಿಗೆ ಕೂಡಿ, ಡಿ.೩೦ರಂದು ಮನೆಯಲ್ಲಿದ್ದ ನಾನು ಮತ್ತು ನನ್ನ ಪತ್ನಿ ಯೊಂದಿಗೆ ಅನಗತ್ಯವಾಗಿ ಕ್ಯಾತೆ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಮ್ಮಿಬ್ಬರ ಮೇಲೆ ದೊಣ್ಣೆ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆ ಯತ್ನದ ಬೆದರಿಕೆ ನೀಡಿ ದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಾವು ಕೂಗಿಕೊಂಡಾಗ ಅವರೆಲ್ಲರೂ ಓಡಿ ಹೋಗಿದ್ದಾರೆ. ನಂತರ ನಾವೇ ಆಂಬುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಂತರ ನಾನು ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿವೆ. ಕ್ರಮ ಕೈಗೊಳ್ಳದ ಬಗ್ಗೆ ಪೊಲೀಸರನ್ನು ವಿಚಾರಿಸಲಾಗಿ ನಿಮ್ಮ ಮೇಲೂ ದೂರು ಮತ್ತು ಎಫ್‌ಐಆರ್ ಆಗಿದೆ. ಇಬ್ಬರೂ ರಾಜೀ ಮಾಡಿಕೊಳ್ಳಿ ಎಂದಿದ್ದಾರೆ. ಪೊಲೀ ಸರ ಮೇಲೆ ಪ್ರಭಾವ ಬೀರಿ, ಸುಳ್ಳು ದೂರು ದಾಖಲಿಸಿ, ದೌರ್ಜನ್ಯಕ್ಕೆ ಒಳಗಾದ ನನ್ನ ಮೇಲೆಯೇ ಎಫ್‌ಐಆರ್ ದಾಖ ಲಾಗುವಂತೆ ಮಾಡಿದ್ದಾರೆ. ನಮ್ಮ ಕುಟುಂ ಬಕ್ಕೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡ ಬೇಕು. ಆರೋಪಿಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಯದುನಂದನರ ಪತ್ನಿ ಸುಧಾರಾಣ , ಪುತ್ರಿ ರಶ್ಮಿ, ಅಳಿಯ ಚಂದ್ರಶೇಖರ್ ಉಪಸ್ಥಿತರಿದ್ದರು.

Translate »