ಮೈಸೂರಿನ ೧೨ ಬ್ಲಾಕ್ ಸ್ಪಾಟ್‌ಗಳಲ್ಲಿ ಅಪಘಾತ ತಡೆಗೆ ಸರ್ವ ಪ್ರಯತ್ನ ವಾಹನ ಚಾಲಕರಲ್ಲೂ ಎಚ್ಚರವಿರಬೇಕಲ್ಲವೆ…
News, ಮೈಸೂರು

ಮೈಸೂರಿನ ೧೨ ಬ್ಲಾಕ್ ಸ್ಪಾಟ್‌ಗಳಲ್ಲಿ ಅಪಘಾತ ತಡೆಗೆ ಸರ್ವ ಪ್ರಯತ್ನ ವಾಹನ ಚಾಲಕರಲ್ಲೂ ಎಚ್ಚರವಿರಬೇಕಲ್ಲವೆ…

January 7, 2022

ಮೈಸೂರು, ಜ.೬- ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಜನಸಂಖ್ಯೆಗನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರೀ ಪ್ರಮಾಣದಲ್ಲಿ ವಾಹನ ಸಂಚಾರದಿAದಾಗಿ ರಸ್ತೆ ಅಪಘಾತಗಳೂ ಜಾಸ್ತಿಯಾಗುತ್ತಿವೆ.

ಅತಿ ಹೆಚ್ಚು ಅಪಘಾತಗಳು ಸಂಭವಿಸುವ ೧೨ ಸ್ಥಳಗಳನ್ನು ‘ಬ್ಲಾಕ್ ಸ್ಪಾಟ್’ಗಳೆಂದು ಗುರುತಿಸಿ ರುವ ಸಂಚಾರ ಪೊಲೀಸರು, ಅಲ್ಲಿ ಆಕ್ಸಿಡೆಂಟ್ ತಡೆಯಲು ಹಲವು ವರ್ಷಗಳಿಂದ ನಾನಾ ಕ್ರಮ ಕೈಗೊಂಡರೂ ಅಪಘಾತ ತಪ್ಪಿಸಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಅಮಾಯಕರ ಅಮೂಲ್ಯ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲ.
ಬ್ಲಾಕ್ ಸ್ಪಾಟ್‌ಗಳಿವು: ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಅಪಘಾತ, ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಾರದ ಮೈಸೂರಿನ ೧೨ ಸ್ಥಳ ಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಲಾಗಿದೆ.

ನಂಜನಗೂಡು ರಸ್ತೆಯ ಬಂಡೀಪಾಳ್ಯ ಎಪಿ ಎಂಸಿ ಮಾರುಕಟ್ಟೆ ಮೇನ್ ಗೇಟ್ ಬಳಿ ಗಣಪತಿ ಸಚ್ಚಿದಾನಂದ ಆಶ್ರಮದ ಸಮೀಪ, ಮೈಸೂರು-ಬೆಂಗಳೂರು ಹೆದ್ದಾರಿಯ ಕೆ.ಆರ್.ಮಿಲ್ ಕಾಲೋನಿ ಸಮೀಪ ಶ್ರೇಯಾ ಕಂಫರ್ಟ್ ಬಳಿ, ರಿಂಗ್ ರಸ್ತೆಯ ದೇವೇಗೌಡ ಸರ್ಕಲ್, ತಿ.ನರಸೀಪುರ ರಸ್ತೆಯ ತಿರುಮಲ ಟವರ್‌ನಿಂದ ಸರ್ದಾರ್ ವಲ್ಲಭಬಾಯ್ ಪಟೇಲ್‌ನಗರದವರೆಗೆ, ರಿಂಗ್ ರೋಡ್ ಜಂಕ್ಷನ್ ನಿಂದ ತಿರುಮಲ ಟ್ರಸ್ಟ್ವರೆಗೆ ದೊಡ್ಡ ಆಲದಮರ ದಿಂದ ಕುಮಾರ್ ಫಾರಂವರೆಗೆ, ಹುಣಸೂರು ರಸ್ತೆಯ ಪ್ರೆöÊಂ ರೆಸಿಡೆನ್ಸಿಯಿಂದ ದಕ್ಷ ಪಿಯು ಕಾಲೇಜುವರೆಗೆ, ಹೂಟಗಳ್ಳಿ ಜಂಕ್ಷನ್, ಎನ್‌ಆರ್‌ಎಸ್ ಕಾಲೋನಿ ಜಂಕ್ಷನ್‌ನಿAದ ಯಶಸ್ವಿನಿ ಕಲ್ಯಾಣ ಮಂಟಪದವರೆಗೆ, ಕೆಆರ್‌ಎಸ್ ರಸ್ತೆಯ ರಿಂಗ್ ರೋಡ್ ಜಂಕ್ಷನ್ ಹಾಗೂ ಹುಣಸೂರು ರಸ್ತೆಯ ಬಾಲ ಏಸು ಚರ್ಚ್ನಿಂದ ದಿ ರೂಸ್ಟ್ ಹೋಟೆಲ್ ಜಂಕ್ಷನ್‌ವರೆಗಿನ ಸ್ಥಳವನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಲಾಗಿದೆ.
೬ ವರ್ಷದಲ್ಲಿ ೮೫ ಮಂದಿ ಬಲಿ: ಈ ಬ್ಲಾಕ್ ಸ್ಪಾಟ್ ಗಳಲ್ಲಿ ೨೦೧೬ರಿಂದೀಚೆಗೆ ೬ ವರ್ಷಗಳಲ್ಲಿ ಒಟ್ಟು ೩೧೫ ರಸ್ತೆ ಅಪಘಾತಗಳು ಸಂಭವಿಸಿದ್ದು, ಒಟ್ಟು ೮೫ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರೆ, ೩೪೮ ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷ ೨೦೨೧ರ ಜನವರಿ ೧ರಿಂದ ಡಿಸೆಂಬರ್ ೩೧ರವರೆಗೆ ಮೈಸೂರಿನ ೧೨ ಬ್ಲಾಕ್ ಸ್ಪಾಟ್‌ಗಳಲ್ಲಿ ಸಂಭವಿಸಿದ ೪೫ ಅಪ ಘಾತಗಳಲ್ಲಿ ನಾಲ್ವರು ಮೃತಪಟ್ಟು ೫೨ ಮಂದಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೆ.ಆರ್.ಸಂಚಾರ ಠಾಣೆ ವ್ಯಾಪ್ತಿಯ ೨ ಬ್ಲಾಕ್ ಸ್ಪಾಟ್‌ಗಳಲ್ಲಿ ಕಳೆದ ವರ್ಷ ೧೨ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದರೆ, ಎನ್‌ಆರ್ ಸಂಚಾರ ಠಾಣೆ ಸರಹದ್ದಿನಲ್ಲಿ ೬ ಅಪಘಾತಗಳು ಸಂಭವಿಸಿವೆಯಾ ದರೂ ಸದ್ಯ ಸಾವು ಸಂಭವಿಸಿಲ್ಲ. ಸಿದ್ದಾರ್ಥನಗರ ಸಂಚಾರ ಠಾಣೆ ವ್ಯಾಪ್ತಿಯ ೫ ಬ್ಲಾಕ್ ಸ್ಪಾಟ್‌ಗಳಲ್ಲಿ ೧೩ ಅಪಘಾತಗಳಾಗಿ ಒಬ್ಬರು ಮೃತಪಟ್ಟಿದ್ದಾರೆ.
ಉಳಿದಂತೆ ವಿವಿ ಪುರಂ ಸಂಚಾರ ಠಾಣಾ ಸರಹದ್ದಿನ ೫ ಬ್ಲಾಕ್ ಸ್ಪಾಟ್‌ಗಳಲ್ಲಿ ೧೫ ರಸ್ತೆ ಅಪಘಾತ ಗಳಾಗಿದ್ದು, ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ. ಆದರೆ ೨೦೨೦ನೇ ಸಾಲಿಗೆ ಹೋಲಿಕೆ ಮಾಡಿದಲ್ಲಿ ಕಳೆದ ವರ್ಷ ಅಪಘಾತಗಳ ಸಂಖ್ಯೆ ತುಸು ಕಡಿಮೆ ಯಾಗಿತ್ತಾದರೂ, ಸಾವಿನ ಸಂಖ್ಯೆ ಮಾತ್ರ ಶೇ.೫೦ ರಷ್ಟು ಹೆಚ್ಚಾಗಿದೆ. ೨೦೨೦ರಲ್ಲಿ ಒಟ್ಟು ೪೯ ಅಪಘಾತ ಗಳಲ್ಲಿ ೪ ಮಂದಿ ಸಾವನ್ನಪ್ಪಿ, ೫೪ ಮಂದಿ ಗಾಯ ಗೊಂಡಿದ್ದರು. ೨೦೧೯ನೇ ಸಾಲಿನಲ್ಲಿ ಸಂಭವಿಸಿದ ೬೨ ಅಪಘಾತಗಳಲ್ಲಿ ೩೨ ಮಂದಿ ಪ್ರಾಣ ಕಳೆದು ಕೊಂಡಿದ್ದರೆ, ೭೫ ಮಂದಿ ಗಾಯಗೊಂಡಿದ್ದರು. ಅದೇ ರೀತಿ ೨೦೧೬ರಿಂದ ೨೦೧೮ರವರೆಗೆ ೩ ವರ್ಷ ಗಳಲ್ಲಿ ಒಟ್ಟು ೧೬೯ ಅಪಘಾತಗಳು ಮೈಸೂರಿನ ಎಲ್ಲಾ ೧೨ ಬ್ಲಾಕ್ ಸ್ಪಾಟ್‌ಗಳಲ್ಲಿ ಸಂಭವಿಸಿದವು. ಅವುಗಳಲ್ಲಿ ೪೧ ಮಂದಿ ಸಾವನ್ನಪ್ಪಿದ್ದು, ೧೬೭ ಮಂದಿ ಗಾಯಗೊಂಡಿದ್ದಿಲ್ಲಿ ಗಮನಾರ್ಹ.

ಈ ಬ್ಲಾಕ್ ಸ್ಪಾಟ್‌ಗಳಲ್ಲಿ ರಾತ್ರಿ ವೇಳೆ ಹೆಚ್ಚು ಅಪ ಘಾತಗಳು ಸಂಭವಿಸುತ್ತಿವೆ. ಏಕೆಂದರೆ ಆ ಸ್ಥಳಗಳಲ್ಲಿ ತಿರುವುಗಳಿದ್ದು, ಮರದ ರೆಂಬೆಗಳು ರಸ್ತೆಗೆ ಚಾಚಿ ಕೊಂಡಿರುವುದು, ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಳಾಗಿ ರುವುದರಿಂದ ವಾಹನಗಳು ಅಪಘಾತಕ್ಕೀಡಾಗು ತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »