ವೀಕೆಂಡ್ ಕರ್ಫ್ಯೂ: ಮೈಸೂರಲ್ಲಿ ಪೊಲೀಸರು ಸರ್ವ ಸನ್ನದ್ಧ
ಮೈಸೂರು

ವೀಕೆಂಡ್ ಕರ್ಫ್ಯೂ: ಮೈಸೂರಲ್ಲಿ ಪೊಲೀಸರು ಸರ್ವ ಸನ್ನದ್ಧ

January 7, 2022

ಮೈಸೂರು, ಜ.೬ (ಆರ್‌ಕೆ) -ಕೊರೊನಾ ಮಹಾಮಾರಿ ಸೋಂಕು ಹರಡದಂತೆ ತಡೆಯಲು ನೈಟ್ ಕರ್ಫ್ಯೂ ಜೊತೆಗೆ ವಾರಾಂತ್ಯ ಕರ್ಫ್ಯೂ ನಿರ್ಬಂಧ ಕಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿ ಸಲು ಮೈಸೂರು ನಗರ ಪೊಲೀಸರು ಸರ್ವ ರೀತಿಯಲ್ಲಿ ಸಜ್ಜಾಗಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳನ್ನು ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತಂತೆ ಬುಧವಾರ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ದೇವ ರಾಜ ಸಂಚಾರ ಠಾಣೆ, ಕಾನೂನು-ಸುವ್ಯವಸ್ಥೆ ಠಾಣೆ ಸೇರಿದಂತೆ ಮೈಸೂರು ನಗರದ ಎಲ್ಲಾ ಠಾಣಾ ಇನ್ಸ್ಪೆಕ್ಟರ್‌ಗಳು ಇಂದು ಸಬ್‌ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗೆ ಕರ್ಫ್ಯೂ ಜಾರಿಯಲ್ಲಿ ರುವಾಗ ಕರ್ತವ್ಯ ನಿರ್ವಹಿಸುವ ಕುರಿ ತಂತೆ ಬ್ರೀಫಿಂಗ್ (ರೋಲ್‌ಕಾಲ್) ಮೂಲಕ ತಿಳುವಳಿಕೆ ಮೂಡಿಸಿದರು.
ಶುಕ್ರವಾರ ರಾತ್ರಿ ೮ ಗಂಟೆಯಿAದ ಸೋಮವಾರ ಮುಂಜಾನೆ ೫ ಗಂಟೆವರೆಗೆ ವಾರಾಂತ್ಯ ಕರ್ಫ್ಯೂ ನಿರ್ಬಂಧ ಜಾರಿ ಯಲ್ಲಿರುವುದರಿಂದ ಸರ್ಕಾರ ಹೊರಡಿಸಿ ರುವ ಮಾರ್ಗಸೂಚಿಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಗೊಂದಲ ವಿಲ್ಲದಂತೆ ನಿಯಮಗಳ ಬಗ್ಗೆ ಸ್ಪಷ್ಟಪಡಿಸಿ ಕೊಳ್ಳಬೇಕು ಎಂದು ಇನ್ಸ್ಪೆಕ್ಟರ್‌ಗಳು ಅಧೀನಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಲಹೆ ನೀಡಿದರು.

ಠಾಣಾ ಸರಹದ್ದಿನ ಪ್ರಮುಖ ಸರ್ಕಲ್, ರಸ್ತೆ, ಜಂಕ್ಷನ್, ವಾಹನ ದಟ್ಟಣೆ ಪ್ರದೇಶ ಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ನಿಯೋ ಜಿತ ಸಿಬ್ಬಂದಿಗಳು ಅನಗತ್ಯವಾಗಿ ಓಡಾ ಡುವವರನ್ನು ತಡೆದು ಪ್ರಶ್ನಿಸಬೇಕು. ಯಾವುದೇ ನಿಖರ ಪ್ರಯಾಣ ದಾಖ ಲಾತಿಗಳಿಲ್ಲದಿದ್ದರೆ, ಅವರ ವಾಹನ ಜಪ್ತಿ ಮಾಡಬೇಕೆಂಬ ಸೂಚನೆ ನೀಡಲಾಯಿತು.
ಮಾಸ್ಕ್ ಧರಿಸದಿರುವುದು, ಗುಂಪಾಗಿ ಸೇರುವುದು, ಕದ್ದು-ಮುಚ್ಚಿ ಅಂಗಡಿ ತೆರೆದು ವ್ಯಾಪಾರ ಮಾಡುವುದು, ಸಾರ್ವ ಜನಿಕ ಸ್ಥಳದಲ್ಲಿ ಮದ್ಯಪಾನ ಮಾಡು ವಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ವಹಿಸ ಬೇಕು. ಅಂತಹ ಕಾರ್ಯಾಚರಣೆ ವೇಳೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳ ಬೇಕೆಂದು ತಾಕೀತು ಮಾಡಲಾಗಿದೆ.
ಸರ್ಕಾರ ಅನುಮತಿಸಿರುವ ಅಗತ್ಯ ಸೇವೆಗಳಿಗೆ ಅನಗತ್ಯ ಅಡ್ಡಿಪಡಿಸಬಾರದು. ಆದರೆ ಅಂತಹ ಸ್ಥಳದಲ್ಲಿ ತಪ್ಪದೇ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಗಮನಿಸಿ ತಿಳುವಳಿಕೆ ಹೇಳಬೇಕು. ಆದಾಗ್ಯೂ ನಿಯಮ ಉಲ್ಲಂ ಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಯಡಿ ಪ್ರಕರಣ ದಾಖಲಿಸಬೇಕೆಂದು ಪೊಲೀಸರಿಗೆ ಸೂಚಿಸಲಾಯಿತು.

ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿ, ಮಾಂಸ, ಮೀನು ಮಾರಾಟ ಕೇಂದ್ರಗಳAತಹ ಅಗತ್ಯ ಸೇವೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವು ದನ್ನು ಕಡ್ಡಾಯಗೊಳಿಸಿರುವ ಕಾರಣ, ಪಬ್ಲಿಕ್ ಅಡ್ರಸ್ ಸಿಸ್ಟಂ ಮೂಲಕ ತಿಳು ವಳಿಕೆ ಮೂಡಿಸುವುದು ಅತ್ಯಗತ್ಯ. ಆದರೆ, ಕರ್ಫ್ಯೂ ಜಾರಿ ಹೆಸರಲ್ಲಿ ಯಾರಿಗೂ ಅನಗತ್ಯ ತೊಂದರೆ ಕೊಡಬಾರದೆಂದು ಪೊಲೀಸ ರಿಗೆ ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.

ಔಷಧಿ ಖರೀದಿ, ಆಸ್ಪತ್ರೆಗೆ ಹೋಗುವ ರೋಗಿಗಳು, ಕೊರೊನಾ ಪರೀಕ್ಷೆ, ಲಸಿಕೆ ಪಡೆಯುವವರಿಗೆ ಪರಿಶೀಲಿಸಿ ಅವಕಾಶ ನೀಡಿ, ತುರ್ತು ಸೇವೆ, ಆಂಬುಲೆನ್ಸ್, ಮನೆ-ಮನೆಗೆ ಆಹಾರ ಪಾರ್ಸಲ್ ಪೂರೈಸುವವರು, ಔಷಧಿ ಸಪ್ಲೆöÊ ಮಾಡು ವವರು, ಉದ್ದಿಮೆ, ಕಾರ್ಖಾನೆ, ಖಾಸಗಿ ಸಂಸ್ಥೆಗಳ ಕಚೇರಿಗೆ ತೆರಳುವವರಿಗೆ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಪರಿಶೀಲಿಸಿ ಸಂಚರಿಸಲು ಅನುವು ಮಾಡಿ ಕೊಡಬೇಕು. ರೈಲು, ವಿಮಾನ, ಬಸ್ಸು ಗಳಲ್ಲಿ ಪ್ರಯಾಣ ಸಿದವರು ಮನೆಗೆ ಹಿಂದಿ ರುಗಲು ಅವಕಾಶ ಕಲ್ಪಿಸಿರುವುದರಿಂದ ಅವರ ಪ್ರಯಾಣದ ಟಿಕೆಟ್ ಪರಿಶೀಲಿಸಿ ಎಂದು ಸಲಹೆ ನೀಡಲಾಗಿದೆ.

Translate »