ಶ್ರೀರಂಗಪಟ್ಟಣ, ಜ.೬(ವಿನಯ್ ಕಾರೇಕುರ)- ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿP್ಷÀಕಿಯೊಬ್ಬರು ಕೊಠಡಿಯಲ್ಲಿ ಕೂಡಿ ಹಾಕಿ ಶಿಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಅಮಾನ ವೀಯ ಘಟನೆ ವಾರದ ಹಿಂದೆ ನಡೆದಿದೆ ಎನ್ನಲಾಗಿದೆ. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ತರಗತಿಗೆ ಮೊಬೈಲ್ ತಂದಿದ್ದಳೆನ್ನಲಾಗಿದೆ. ಇದನ್ನು ಗಮನಿಸಿದ ಶಿಕ್ಷಕಿ, ವಿದ್ಯಾರ್ಥಿ ನಿಯನ್ನು ಬೇರೊಂದು ಕೊಠಡಿಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ ಎಂದು ಗ್ರಾಮಸ್ಥರು, ಪೋಷಕರು ಆರೋಪಿ ಸಿದ್ದಾರೆ. ಮೊಬೈಲ್ ಪರಿಶೀಲಿಸಲು ಮುಖ್ಯ ಶಿಕ್ಷಕಿ ಸ್ನೇಹಲತಾ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ವರ್ತಿಸಿ ದ್ದಾರೆಂದು ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿ, ಶಿಕ್ಷಕಿಯನ್ನು ಅಮಾನತು ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ತºಸೀಲ್ದಾರ್ ಶ್ವೇತಾ ಅವರು ಗ್ರಾಮಸ್ಥರು ಹಾಗೂ ಪೋಷಕರ ದೂರು ಸ್ವೀಕರಿಸಿ ಶಾಲೆಗೆ ಭೇಟಿ ನೀಡಿ ಬಾಲಕಿಯಿಂದ ಮಾಹಿತಿ ಪಡೆದಿದ್ದಾರೆ. ಈ ಕುರಿತು ಮಾತನಾಡಿದ ತಹಸೀಲ್ದಾರ್ ಶ್ವೇತಾ, ಕ್ಷೇತ್ರ ಶಿಕ್ಷಣಾಧಿ ಕಾರಿಗಳೊಂದಿಗೆ ಚರ್ಚೆ ಮಾಡಿ ಪರಿಶೀಲಿ ಸಿz್ದೆÃನೆ. ಈಗಾಗಲೇ ಮಂಡ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರಿನ ವಿಷಯ ತಿಳಿಸಿ, ಶಿಕ್ಷಕಿಯ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿz್ದÉÃನೆ ಎಂದು ಹೇಳಿ ದರು. ಕಳೆದ ಒಂದು ವಾರದ ಹಿಂದೆ ನೊಂದ ವಿದ್ಯಾರ್ಥಿನಿಯ ಪೋಷಕರು ಪ್ರಕರಣದ ಬಗ್ಗೆ ದೂರು ನೀಡಿದರು. ತಕ್ಷಣ ಶಾಲೆಗೆ ಭೇಟಿ ನೀಡಿ ಶಾಲೆಯ ಪ್ರತಿ ಮಕ್ಕಳನ್ನು ಪ್ರಕರಣದ ಬಗ್ಗೆ ಪ್ರತ್ಯೇಕ ವಾಗಿ ವಿಚಾರಿಸಿ ಮಕ್ಕಳ ಅಭಿಪ್ರಾಯ ತಿಳಿದುಕೊಂಡೆ. ಮಕ್ಕಳು ಹೇಳುವಂತೆ ಆ ನೊಂದ ಯುವತಿಗೆ ಮುಖ್ಯ ಶಿಕ್ಷಕಿ ಸ್ನೇಹಲತಾ ಬಟ್ಟೆ ಬಿಚ್ಚಿಸಿ ಮೊಬೈಲ್ ಶೋಧ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಾನು ಸ್ಥಳಕ್ಕೆ ಹೋದಾಗ ಮಕ್ಕಳ ಪೋಷಕರು ತುಂಬಾ ಗಲಾಟೆ ಮಾಡುತ್ತಿದ್ದರು. ತಕ್ಷಣ ಮಕ್ಕಳನ್ನು ಸಮಾಧಾನ ಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮುಖ್ಯ ಶಿಕ್ಷಕಿ ಸ್ನೇಹಲತಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲು ಸಲಹೆ ನೀಡಿದೆ. ಮುಂದಿನ ಕ್ರಮವನ್ನು ಡಿಡಿಪಿಐ ತೆಗೆದು ಕೊಳ್ಳುತ್ತಾರೆ ಎಂದು ಹೇಳಿದರು. ಪೋಷಕರು ದೂರು ನೀಡಿದ ತಕ್ಷಣಪ್ರಾಥಮಿಕ ತನಿಖೆ ನಡೆಸಿ ಮುಖ್ಯ ಶಿಕ್ಷಕಿ ಹಾಗೂ ಮಕ್ಕಳ ಹೇಳಿಕೆಯನ್ನು ಮೇಲಧಿಕಾರಿ ಗಳಿಗೆ ನೀಡಿದ್ದೇನೆ. ಒಬ್ಬ ಮುಖ್ಯ ಶಿಕ್ಷಕಿಯ ಮೇಲೆ ಕ್ರಮವಹಿಸಲು ಬಿಇಓಗೆ ಅಧಿಕಾರವಿರು ವುದಿಲ್ಲ. ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಕಾರ್ಯಪ್ರವೃತ್ತರಾಗಿ ಮೇಲಧಿ ಕಾರಿಗಳಿಗೆ ವಿವರವಾಗಿ ವರದಿ ನೀಡಿರುವುದಾಗಿ ಬಿಇಓ ಅನಂತರಾಜು ತಿಳಿಸಿದರು.
ವಿದ್ಯಾರ್ಥಿನಿಗೆ ನೀಡಿರುವ ಕಿರುಕುಳ ಖಂಡನೀಯ. ಮುಖ್ಯ ಶಿಕ್ಷಕಿ ಕೃತ್ಯದ ಬಗ್ಗೆ ಶಿಸ್ತಿನ ಕ್ರಮಕ್ಕೆ ಕಮಿಷನರ್ ಅವರಿಗೆ ಶಿಫಾರಸು ಮಾಡಿದ್ದೇವೆ ಎಂದು ಡಿಡಿಪಿಐ ಜವರೇಗೌಡ ತಿಳಿಸಿದರು. ತಾಪಂ ಸದಸ್ಯ ರಾಮಕೃಷ್ಣ, ಗ್ರಾಪಂ ಸದಸ್ಯೆ ಬೃಂದಾ, ಎಸ್‌ಡಿಎಂಸಿ ಅದ್ಯಕ್ಷೆ ಪ್ರತಿಭಾ, ಜನವಾದಿ ಸಂಘದ ಜಯಮ್ಮ, ಸುಜಾತ, ಪುರುಷೋತ್ತಮ, ಮಂಜುನಾಥ ಸೇರಿದಂತೆ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.