ಬೆಂಗಳೂರು, ಜ. 5(ಕೆಎಂಶಿ)-ಕೋವಿಡ್-19 3ನೇ ಅಲೆಯ ಸೋಂಕಿಗೆ ಸಿಲುಕುವವರು ಗಾಬರಿ ಗೊಂಡು ಆಸ್ಪತ್ರೆಗೆ ಧಾವಿ ಸುವ ಅಗತ್ಯವಿಲ್ಲವೆಂದು ಆರೋಗ್ಯ ಸಚಿವ ಡಾ. ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿಗೆ ಸಿಲುಕಿದವರು ಗಾಬರಿಗೊಳ್ಳುವ ಇಲ್ಲವೇ ಆತಂಕಗೊಳ್ಳುವ ಅಗತ್ಯವಿಲ್ಲ. ಪ್ರಾಥಮಿಕ ಚಿಕಿತ್ಸೆಯಲ್ಲೇ ಗುಣವಾಗುತ್ತಾರೆ. ಎರಡೂ ಲಸಿಕೆ ಪಡೆದವರ ಮೇಲೆ ಈ 3ನೇ ಅಲೆ ದುಷ್ಪರಿ ಣಾಮ ಬೀರುವುದಿಲ್ಲ. ಆದರೂ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದಾರೆ. ಈ ಸೋಂಕು ಮೂಗಿನಿಂದ ಗಂಟ ಲಿಗೆ ಹೋಗಿ ಅಂತ್ಯವಾ ಗುತ್ತದೆ. ಹೀಗಾಗಿ ಶ್ವಾಸಕೋಶದ ಮೇಲೆ ಇಲ್ಲವೇ ಯಾವುದೇ ಅಂಗಾಂಗಳ ಮೇಲೆ ದುಷ್ಪರಿಣಾಮ ಬೀರು ವುದಿಲ್ಲ. ಸೋಂಕು ತಗುಲಿದವರು ಆಸ್ಪತ್ರೆಯಲ್ಲಿ ದಾಖಲಾಗಿ ಆಕ್ಸಿಜನ್ ಪಡೆದು ಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ ಎಂದು ಸ್ಪಷ್ಟಪಡಿ ಸಿದ್ದಾರೆ. ಯಾರು ಎರಡು ಲಸಿಕೆ ಪಡೆದಿಲ್ಲವೋ ಅಂತಹ ವರು ರೋಗಕ್ಕೆ ತುತ್ತಾದರೆ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಈ ಸೋಂಕು ದೀರ್ಘಕಾಲ ಇರುವುದಿಲ್ಲ. ಅತ್ಯಂತ ವೇಗವಾಗಿ ಹರಡಿ, ಅದೇ ಧಾಟಿಯಲ್ಲಿ ಕೊನೆಗೊಳ್ಳುತ್ತದೆ. 4 ರಿಂದ 5 ವಾರಗಳ ಕಾಲ ಈ ಸೋಂಕು ಹರಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಈ ಸಮಯ ಎಚ್ಚರಿಕೆಯಿಂದ ಇರುವಂತೆ ಸಚಿವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ ನಂತರ ಎರಡನೇ ಡೋಸ್‍ಅನ್ನು 28 ದಿನಗಳ ನಂತರ ಪಡೆದುಕೊಳ್ಳಬೇಕು. ಈ ಬಗ್ಗೆ ಕೇಂದ್ರದ ಮಾರ್ಗಸೂಚಿ ಬಂದಿದ್ದು, ಅದನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತದೆ. ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‍ಅನ್ನು ನೀಡಲಾಗುವುದು. ಬಹು ಅಂಗಾಂಗಗಳ ಸಮಸ್ಯೆಯುಳ್ಳ ಈ ವಯೋಮಿತಿಯವರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಆರೋಗ್ಯ ಸೇವೆಯ ವೈದ್ಯರು ಮತ್ತು ಇತರೆ ಸಿಬ್ಬಂದಿ ಹಾಗೂ ಕೋವಿಡ್-19 ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಸಚಿವರು ತಿಳಿಸಿದರು.