ರೋಹಿಣಿ ಸಿಂಧೂರಿಯಿಂದ ಮೈಸೂರಿಗೆ ಕೆಟ್ಟ  ಹೆಸರು: ಮಾಜಿ ಶಾಸಕ ವಾಸು ಆರೋಪ
ಮೈಸೂರು

ರೋಹಿಣಿ ಸಿಂಧೂರಿಯಿಂದ ಮೈಸೂರಿಗೆ ಕೆಟ್ಟ ಹೆಸರು: ಮಾಜಿ ಶಾಸಕ ವಾಸು ಆರೋಪ

June 9, 2021

ಮೈಸೂರು, ಜೂ.8(ಆರ್‍ಕೆಬಿ)- ಚಾಮ ರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಯಿಂದ ಆಗಿರುವ ಸಾವು ನೋವುಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಇತ್ತೀ ಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿ ದಾಡುತ್ತಿರುವ ಜಿಲ್ಲಾಧಿಕಾರಿಯವರು ಮಾತ ನಾಡಿದ್ದಾರೆ ಎನ್ನಲಾದ ಧ್ವನಿಸುರಳಿಯ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಅವರು ಎಷ್ಟೇ ದೊಡ್ಡವರಾದರೂ ತಪ್ಪಿ ತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ವಾಸು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಘಟನೆಯ ತನಿಖೆಗೆ ಏಕ ಸದಸ್ಯ ಆಯೋಗ ರಚನೆಯಾಗಿದ್ದು, ನ್ಯಾಯ ಮೂರ್ತಿಗಳು ವರದಿ ಕೊಡಬಹುದು. ಆದರೆ ಅದರ ಮೇಲೆ ಸರ್ಕಾರ ಕ್ರಮ ಕೈಗೊಳ್ಳ ಬೇಕು. ಧ್ವನಿಸುರಳಿಯನ್ನು ಫೋರೆನ್ಸಿಕ್ ಲ್ಯಾಬ್‍ಗೆ ಕಳಿಸಿ, ತನಿಖೆ ನಡೆಸಬೇಕು ಎಂದರು.

ವರ್ಗಾವಣೆ ವೇಳೆ ರೋಹಿಣಿ ಸಿಂಧೂರಿ ಮೈಸೂರಿಗೆ ಕಳಂಕ ತಂದಿಟ್ಟಿದ್ದಾರೆ. ಮೈಸೂ ರಿನ ರಾಜಕಾರಣಿಗಳ ಮೇಲೆ ಆರೋಪ ಮಾಡಿದ್ದಾರೆ. ಭೂ ಮಾಫಿಯಾ ತಮ್ಮ ವರ್ಗಾವಣೆಗೆ ಕಾರಣ ಎಂದಿದ್ದಾರೆ. ಈ ಮೂಲಕ ಐತಿಹಾಸಿಕ ಮತ್ತು ಸಾಂಸ್ಕøತಿಕ ರಾಜಧಾನಿ ಮೈಸೂರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನುಮಾನದಿಂದ ನೋಡುವ ರೀತಿಯಲ್ಲಿ ಕಳಂಕ ಹೊರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೋಹಿಣಿ ಸಿಂಧೂರಿ ಇಲ್ಲಿಗೆ ಜಿಲ್ಲಾಧಿ ಕಾರಿಯಾಗಿ ಹೇಗೆ ಬಂದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶರತ್ ಜಿಲ್ಲಾಧಿಕಾರಿಯಾಗಿ ಬಂದ 28 ದಿನಕ್ಕೆ ಇವರು ಜಿಲ್ಲಾಧಿಕಾರಿಯಾಗಿ ಬರುತ್ತಾರೆಂ ದರೆ ಇದರ ಹಿಂದೆ ಯಾರ ಒತ್ತಡ ಕೆಲಸ ಮಾಡುತ್ತಿದೆ ಎಂಬುದನ್ನು ಸರ್ಕಾರವೇ ಬಹಿ ರಂಗಪಡಿಸಬೇಕು ಎಂದು ಆಗ್ರಹಿಸಿದರು.

ನನಗೆ ಅನ್ಯಾಯ ಆಯಿತು. ನನಗೆ ಇಲ್ಲಿಂದ ವರ್ಗಾವಣೆ ಮಾಡಿಸಿದರು ಎಂದು ಭಾವುಕರಾಗಿ ಹೇಳಿದ್ದಾರೆ. 8 ತಿಂಗಳಿಂದ ಇಲ್ಲದೆ ಈಗ ಏಕಾಏಕಿ ಭೂ ಮಾಫಿಯಾ ದಿಂದ ನನ್ನ ವರ್ಗಾವಣೆ ಆಯಿತು ಎಂದು ಹೇಗೆ ಹೇಳಿದರು ಎಂದು ಪ್ರಶ್ನಿಸಿದರು.

ಸರ್ವೆ ನಂಬರ್ 4 ಕುರುಬಾರಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 44 ಜನ ಅರ್ಜಿದಾರರ ಪರ ತೀರ್ಪು ನೀಡಿದ್ದ ಹೈಕೋರ್ಟ್ ಅವರೆಲ್ಲರಿಗೆ ಖಾತೆ ಮಾಡಿಕೊಡಲು ಸೂಚಿಸಿದ್ದರೂ ಖಾತೆ ಮಾಡಿಕೊಡದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಅರ್ಜಿದಾರರು ಸುಪ್ರಿಂಕೋರ್ಟ್ ಮೆಟ್ಟಲೇರಿದ್ದರು.

ಆದರೆ ಸುಪ್ರೀಂಕೋರ್ಟ್‍ಗೆ ಸರ್ಕಾರದ ಪರವಾಗಿ ವಾದ ಮಂಡಿಸಬೇಕಿದ್ದ ಜಿಲ್ಲಾ ಧಿಕಾರಿಗಳು ಎಸ್‍ಎಲ್‍ಪಿಗಾಗಿ ಮುಡಾ ದವರ ಮೂಲಕ 50 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ನ್ಯಾಯಾಲಯಕ್ಕೆ ಹೋಗಿ ದ್ದಾರೆ. ಇಲ್ಲಿ ತಮ್ಮದೇ ತಪ್ಪಿರುವಾಗ ಅನ ಗತ್ಯವಾಗಿ ತಮ್ಮ ಸ್ವಾರ್ಥಕ್ಕಾಗಿ ಭೂ ಮಾಫಿಯಾ ನನ್ನ ವರ್ಗಾವಣೆ ಮಾಡಿ ಸಿತು ಎಂಬ ಬಾಲಿಶ ಹೇಳಿಕೆ ನೀಡುವ ಮೂಲಕ ಮೈಸೂರಿಗೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಆರೋಪಿಸಿದರು.

Translate »