ಡಿ.ಬಿ.ಕುಪ್ಪೆ, ನಂದಿನಾಥಪುರ ಪಿಹೆಚ್‍ಸಿಗಳಿಗೆ  15 ಲಕ್ಷ ರೂ. ವೈದ್ಯಕೀಯ ಉಪಕರಣ ಕೊಡುಗೆ
ಮೈಸೂರು

ಡಿ.ಬಿ.ಕುಪ್ಪೆ, ನಂದಿನಾಥಪುರ ಪಿಹೆಚ್‍ಸಿಗಳಿಗೆ 15 ಲಕ್ಷ ರೂ. ವೈದ್ಯಕೀಯ ಉಪಕರಣ ಕೊಡುಗೆ

June 9, 2021

ಮೈಸೂರು,ಜೂ.8(ಎಂಟಿವೈ)- ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯ ಡಿ.ಬಿ.ಕುಪ್ಪೆ ಹಾಗೂ ಪಿರಿಯಾಪಟ್ಟಣದ ನಂದಿನಾಥಪುರದ ಪ್ರಾಥ ಮಿಕ ಆರೋಗ್ಯ ಕೇಂದ್ರಗಳಿಗೆ 15 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಯನ್ನು ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಕೊಡುಗೆಯಾಗಿ ನೀಡಿರುವುದಾಗಿ ಸುಜೀವ್ ಸಂಸ್ಥೆಯ ರಾಜಾರಾಂ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಆರೋಗ್ಯ ಸೌಲಭ್ಯಗಳಿಂದ ವಂಚಿತರಾದವರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಈ ನೆರವು ನೀಡಲಾಗುತ್ತಿದ್ದು, ಮಂತ್ರ ಫಾರ್ ಚೇಂಜ್, ಸೂರ್ಯ ಫೌಂಡೇಷನ್, ಸುಜೀವ್ ಸಂಸ್ಥೆ ಹಾಗೂ ಇನ್ಫೋಸಿಸ್‍ನ ಶಿಬುಲಾಲ್ ಅವರ ಸಹ ಕಾರದಿಂದ ಇದು ಸಾಧ್ಯವಾಗಿದೆ. ಈ 2 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ತಲಾ 5 ಮಂಚ-ಹಾಸಿಗೆ, 10 ಲೀ. ಸಾಮಥ್ರ್ಯದ 5 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್, 10 ಲೀ. ಸಾಮಥ್ರ್ಯದ 5 ಆಮ್ಲಜನಕ ಸಿಲಿಂಡರ್ ನೀಡಲಾಗುತ್ತಿದೆ ಎಂದರು.

ಕೋವಿಡ್ 2ನೆ ಅಲೆ ವೇಳೆ ಎಲ್ಲೆಡೆ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ತೀವ್ರ ಉಸಿ ರಾಟ ಸಮಸ್ಯೆಯಿಂದಲೇ ಹಲವು ಸೋಂಕಿ ತರು ಬಲಿಯಾಗಿದ್ದಾರೆ. ಗ್ರಾಮೀಣ ಪ್ರದೇಶ ಹಾಗೂ ಅರಣ್ಯ ಪ್ರದೇಶದ ನಡುವಿನ ಹಾಡಿಗಳ ಆದಿವಾಸಿಗಳಿಗೆ ನೆರವಾಗ ಲೆಂದೇ ಈ ಪರಿಕರಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಮಂತ್ರ ಫೌಂಡೇ ಷನ್ ಪುನೀತ್, ಸೂರ್ಯ ಫೌಂಡೇಶನ್ ಶರವಣ ಮತ್ತಿತರರು ಉಪಸ್ಥಿತರಿದ್ದರು.

Translate »