ಹೆಚ್‍ಡಿ ಕೋಟೆ, ಸರಗೂರು ತಾಲೂಕುಗಳ ಕೆಲ ಗ್ರಾಪಂಗೆ ಜಿಪಂ ಸಿಇಓ ಭೇಟಿ  ಕೋವಿಡ್ ನಿರ್ವಹಣೆ ಸಂಬಂಧ ಪರಿಶೀಲನೆ
ಮೈಸೂರು

ಹೆಚ್‍ಡಿ ಕೋಟೆ, ಸರಗೂರು ತಾಲೂಕುಗಳ ಕೆಲ ಗ್ರಾಪಂಗೆ ಜಿಪಂ ಸಿಇಓ ಭೇಟಿ ಕೋವಿಡ್ ನಿರ್ವಹಣೆ ಸಂಬಂಧ ಪರಿಶೀಲನೆ

June 9, 2021

ಮೈಸೂರು,ಜೂ.8(ಪಿಎಂ)- ಹೆಚ್‍ಡಿ ಕೋಟೆ ಹಾಗೂ ಸರಗೂರು ತಾಲೂಕು ಗಳ ಕೆಲ ಗ್ರಾಪಂಗಳಿಗೆ ಮಂಗಳವಾರ ಭೇಟಿ ನೀಡಿದ ಜಿಪಂ ಸಿಇಓ ಎ.ಎಂ. ಯೋಗೀಶ್, ಕೋವಿಡ್ ನಿರ್ವಹಣೆ ಕುರಿತು ಪರಿ ಶೀಲನೆ ನಡೆಸಿದರು. ಹೆಚ್‍ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮ ಪಂಚಾ ಯಿತಿಯಲ್ಲಿ ಕೋವಿಡ್ ಅಂಕಿ-ಅಂಶ ಬಗ್ಗೆ ಮಾಹಿತಿ ಪಡೆದ ಎ.ಎಂ.ಯೋಗೀಶ್, ನರೇಗಾ ಯೋಜನೆ ಕಾಮಗಾರಿಗಳ ಬಗ್ಗೆಯೂ ಪರಿಶೀಲನೆ ನಡೆಸಿದರು.

ಸರಗೂರು ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಲ್ಲಿನ ಕೋವಿಡ್ ಅಂಕಿ-ಅಂಶ ಮಾಹಿತಿ ಪಡೆದರು. ಇದೇ ವೇಳೆ ಮುಂಬರುವ ಮಳೆಗಾಲದಲ್ಲಿ ಕಬಿನಿ ಜಲಾಶಯ ತುಂಬಿ ಪ್ರವಾಹ ಉಂಟಾದರೇ, ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.

ಎನ್.ಬೆಳ್ತೂರು ಗ್ರಾಮದಲ್ಲಿರುವ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಸೋಂಕಿತರ ಆರೋಗ್ಯ ವಿಚಾರಿಸಿದರು. ಜೊತೆಗೆ ಅಲ್ಲಿನ ಕುಂದು ಕೊರತೆ ಆಲಿಸಿದರು. ಈ ವೇಳೆ ಬೀಚನ ಹಳ್ಳಿ ಗ್ರಾಪಂ ಪಿಡಿಓ ಹೆಚ್.ಟಿ.ಪ್ರಭಾಕರ್, ಬಿದರಹಳ್ಳಿ ಗ್ರಾಪಂ ಪಿಡಿಓ ಜೆ.ಪರಮೇಶ್ ಸೇರಿದಂತೆ ಆಯಾಯ ಗ್ರಾಪಂ ಸದಸ್ಯರು ಮತ್ತು ಸ್ಥಳೀಯರು ಹಾಜರಿದ್ದರು.

Translate »