ಮನೆ ಮನೆಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಿದ ಮಾಜಿ ಶಾಸಕ ಎಂಕೆಎಸ್
ಮೈಸೂರು

ಮನೆ ಮನೆಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಿದ ಮಾಜಿ ಶಾಸಕ ಎಂಕೆಎಸ್

June 9, 2021

ಮೈಸೂರು,ಜೂ.8(ಪಿಎಂ)- ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮ ಶೇಖರ್ ಮಂಗಳವಾರ ಮನೆ ಮನೆಗೆ ಭೇಟಿ ನೀಡಿ, ಕೋವಿಡ್ ಸೋಂಕು ಸಂಬಂಧ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ದರಲ್ಲದೆ, ತಪ್ಪದೇ ಎಲ್ಲರೂ ಕೋವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿದರು.

ನಗರದ ಕುರುಬಾರಹಳ್ಳಿ, ಜೆಸಿ ನಗರ ಮತ್ತು ಸಿದ್ದಾರ್ಥ ನಗರದಲ್ಲಿ ಮನೆ ಮನೆಗೆ ಇಂದು ಮುಂಜಾನೆಯೇ ಭೇಟಿ ನೀಡಿದ ಅವರು, ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಪ್ಪದೇ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಕೋರಿದರು.

ಬಳಿಕ ಸಿದ್ದಾರ್ಥನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಎಂ.ಕೆ.ಸೋಮ ಶೇಖರ್, ಕೋವಿಡ್ ಲಸಿಕೆ ಪ್ರಕ್ರಿಯೆ ಸಂಬಂಧ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಲ್ಲದೆ, ಇಲ್ಲಿನ ವೈದ್ಯರು ಮತ್ತು ವೈದ್ಯ ಕೀಯ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮ ಶೇಖರ್, ಕಾಂಗ್ರೆಸ್ ಮುಖಂಡರಾದ ಸೋಮು, ಪ್ರದೀಪ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »