ಮೀಟರ್ ಬಡ್ಡಿ ಕಡಿವಾಣಕ್ಕೆ ‘ಬಡವರ ಬಂಧು’ ಯೋಜನೆ
ಮೈಸೂರು

ಮೀಟರ್ ಬಡ್ಡಿ ಕಡಿವಾಣಕ್ಕೆ ‘ಬಡವರ ಬಂಧು’ ಯೋಜನೆ

September 5, 2018

ಬೆಂಗಳೂರು: ಮೀಟರ್ ಬಡ್ಡಿಗೆ ಕಡಿವಾಣ ಹಾಕಿ, ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ‘ಬಡವರ ಬಂಧು’ ಹೊಸ ಕಾರ್ಯ ಕ್ರಮ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ ನಂತರ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಹೊಸ ಪ್ರಾಯೋಗಿಕ ಯೋಜನೆ ತರಲಾ ಗುತ್ತಿದ್ದು, ಈಗಾಗಲೇ ಈ ಯೋಜನೆಗೆ ರೂಪು ರೇಷೆಗಳನ್ನು ತಯಾರಿಸಲಾಗುತ್ತಿದೆ ಎಂದರು.

ಆದ್ದರಿಂದ ಬೀದಿ ಬದಿಯ ವ್ಯಾಪಾರ ಸಮಸ್ಯೆ ಗಳನ್ನು ತಿಳಿಯಲು ಈ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಬಡವರಿಗೆ ಈ ಯೋಜನೆ ತುಂಬಾ ಅನುಕೂಲವಾಗುವಂತೆ ತಯಾರಿಸುತ್ತಿದ್ದೇವೆ. ಈ ಯೋಜನೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳ ಒಂದು ದಿನದ ವ್ಯಾಪಾರಕ್ಕೆ ಬೇಕಾಗುವ ಹಣವನ್ನು ಬೆಳಿಗ್ಗೆ ನೀಡಿ ಮತ್ತೆ ರಾತ್ರಿ ಹಣ ವಾಪಸು ಪಡೆಯಲಾಗುತ್ತದೆ. ಇದರಿಂದ ಖಾಸಗಿ ಯವರು ನೀಡುವ ಅತೀ ಹೆಚ್ಚು ಬಡ್ಡಿ ಸಾಲಕ್ಕೆ ಕಡಿವಾಣ ಹಾಕುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.

ಬಡವರ ಬಂಧು ಎನ್ನುವ ಶೀರ್ಷಿಕೆ ಅಡಿಯಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆದಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ವ್ಯಾಪಾರಿ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಅವರ ಅಭಿಪ್ರಾಯ ಪಡೆದು, ಸಮಾಜದ ಕೆಳಸ್ತರದಲ್ಲಿರುವ ಎಲ್ಲಾ ವರ್ಗಕ್ಕೂ ಅನುಕೂಲ ಮಾಡಿಕೊಡುವ ಮತ್ತು ತಮ್ಮ ಕಾಲ ಮೇಲೆ ತಾವು ನಿಂತು ಜೀವನ ಸಾಗಿಸಲು ಅನುಕೂಲವಾಗುವಂತೆ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದರು.

Translate »