ಮೈಸೂರು, ನ.10(ಆರ್‍ಕೆಬಿ)- ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ನಿಷೇಧ ಮಾಡುವ ಬದಲಿಗೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಮದ್ಯ ಮಾರಾಟ ಮತ್ತು ಜೂಜಾಟದ ಮೇಲೆ ನಿಷೇಧ ಹೇರಲಿ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ಇಂದಿಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಮೈಸೂರಿನ ಬನ್ನಿಮಂಟಪದ ಅಪ್ನಾಘರ್ ಅನಾ ಥಾಶ್ರಮದಲ್ಲಿ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಅವರ 271ನೇ ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತಾವು ಹಠ ಮಾಡುವುದಿಲ್ಲ. ಸರ್ಕಾರದೊಂದಿಗೆ ಸಂಘ ರ್ಷಕ್ಕೂ ಇಳಿಯುವುದಿಲ್ಲ. ಇತಿಹಾಸವನ್ನು ಯಾರಿಂ ದಲೂ ತಿರುಚಲು ಸಾಧ್ಯವಿಲ್ಲ ಎಂದರು.
ಟಿಪ್ಪುವಿನ ಹೆಸರಿನಲ್ಲಿ ಮುಸಲ್ಮಾನರನ್ನು ದ್ವೇಷಿ ಸುವ ರಾಜಕಾರಣ ಮಾಡುತ್ತಿರುವ ಸರ್ಕಾರದ ಧೋರಣೆ ಯನ್ನು ಖಂಡಿಸುವುದಾಗಿ ಹೇಳಿದರು. ಅವರಿಗೆ ದ್ವೇಷ ಬಿತ್ತುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಜನರ ಮಧ್ಯೆ ದ್ವೇಷ ಬಿತ್ತುವ ರಾಜಕಾರಣ ಮಾಡು ತ್ತಿದ್ದಾರೆ. ನಾವು ತಿನ್ನುವ ಆಹಾರ, ಉಡುವ ಬಟ್ಟೆ ಬಗ್ಗೆ ಟೀಕೆ ಮಾಡುತ್ತಾರೆ. ಇದು ನಾಚಿಗೇಡಿನ ವಿಚಾರ. ಜನರ ಮನಸ್ಸನ್ನು ಹಾಳು ಮಾಡುವಂತಹ ರಾಜ ಕಾರಣ ಸರಿಯಲ್ಲ. ಇತರರ ಭಾವನೆಗಳಿಗೆ ನೋವುಂಟು ಮಾಡುವ ಅವಕಾಶ ಯಾರಿಗೂ ಇಲ್ಲ.
ಟಿಪ್ಪುವಿನ ಇತಿಹಾಸ ತಿಳಿಯದೆ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಶ್ರೀರಂಗಪಟ್ಟಣದಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ದಾಳಿಕೋರ ರಿಂದ ರಕ್ಷಿಸಿದ್ದು ಟಿಪ್ಪು. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಹರಕೆ ತೀರಿಸಲು ಪಚ್ಚೆಕಲ್ಲನ್ನು ನೀಡಿ ದವರೇ ಟಿಪ್ಪು. ಕೋಲಾರದ ಗ್ರಾಮವೊಂದರ ದೇವ ಸ್ಥಾನದಲ್ಲಿ ಇಂದಿಗೂ ಟಿಪ್ಪು ಹೆಸರಿನಲ್ಲಿ ನಿತ್ಯವೂ ಮುಂಜಾನೆ ಪೂಜೆ ನಡೆಯುತ್ತಿದೆ. ಇದೆಲ್ಲವೂ ಟಿಪ್ಪು ಹಿಂದೂ ದೇವಾಲಯಗಳ ಮೇಲೆ ಇಟ್ಟಿರುವ ಭಕ್ತಿ ಮತ್ತು ನಂಬಿಕೆಗೆ ದ್ಯೋತಕವಾಗಿವೆ. ಟಿಪ್ಪು ಈ ರಾಷ್ಟ್ರದ ವೀರಪುತ್ರ, ಅವರ ಜಯಂತಿ ಮಾಡು ವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪ ಮೇಯರ್ ಸಿ.ಶ್ರೀಧರ್, ರಮ್ಮನಹಳ್ಳಿ ಬಸವಮಠದ ಬಸವಲಿಂಗ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಗಳಾದ ಮೌಲಾನಾ ಜಕಾವುಲ್ಲಾ, ಮೌಲಾನಾ ಇನಾಯತ್-ಉಲ್-ರೆಹಮಾನ್, ಮೌಲಾನಾ ಅಬ್ದುಲ್ ಸಲಾಂ, ಮೌಲಾನಾ ಅಬ್ದುಲ್ ಸುಬಾನಿ, ಸೈಯ್ಯದ್ ಅಲಿ ರೈeóÁ, ನಗರಪಾಲಿಕೆ ಸದಸ್ಯೆ ಪುಷ್ಪ ಲತಾ ಜಗನ್ನಾಥ್, ಮಾಜಿ ಸದಸ್ಯ ಶೌಕತ್ ಪಾಷಾ, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಇನ್ನಿತರರು ಉಪಸ್ಥಿತರಿದ್ದರು.