ಬೆಂಗಳೂರು, ನ.10- ಕರ್ನಾಟಕದ ಉಪಚುನಾವಣೆಯಲ್ಲಿ ಗೆಲುವು ಹಾಗೂ ಬಿಹಾರ ವಿಧಾನಸಭಾ ಚುನಾವಣೆ ಯಲ್ಲಿ ಮುನ್ನಡೆ ಸಾಧಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಳು ಪ್ರಚಂಡ ದಿಗ್ವಿಜಯ ಸಾಧಿಸಿರುವುದು ಅತ್ಯಂತ ಸಂತಸವನ್ನುಂಟುಮಾಡಿದೆ. ಈ ಸಂದರ್ಭದಲ್ಲಿ ರಾಜೇಶ್ ಗೌಡ ಹಾಗೂ ಮುನಿರತ್ನ ಅವರಿಗೆ ನನ್ನ ಅಭಿನಂದನೆಗಳು. ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಜಯದ ಹಾದಿಯಲ್ಲಿದ್ದು, ಇದು ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ಶಿಸ್ತುಬದ್ಧ ಹಾಗೂ ಅಭಿವೃದ್ಧಿಪರ ಆಡಳಿತಕ್ಕೆ ಜನರ ಪ್ರತಿಕ್ರಿಯೆಯಾಗಿದೆ. ಕೊರೊನಾದಂತಹ ಸಂಕಷ್ಟ ಸಮಯದಲ್ಲಿ ಮೋದಿಯವರ ದೃಢ ನಿರ್ಧಾರಗಳನ್ನು ಸ್ವಾಗತಿಸಿ, ಅವರ ಮೇಲೆ ವಿಶ್ವಾಸವಿಟ್ಟಿರುವುದು ಬಿಜೆಪಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿದೆ. ಜನರ ವಿಶ್ವಾಸವನ್ನು ಇಮ್ಮಡಿಗೊಳಿಸಲು ಬಿಜೆಪಿ ಸರ್ಕಾರ ಸದಾ ಸಿದ್ಧವಾ ಗಿರುತ್ತದೆ ಎಂದು ಅಚಲ ನಂಬಿಕೆಯನ್ನಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.