ಬೆಂಗಳೂರು ಸ್ತಬ್ಧ
ಮೈಸೂರು

ಬೆಂಗಳೂರು ಸ್ತಬ್ಧ

July 16, 2020

ಬೆಂಗಳೂರು, ಜು. 15(ಕೆಎಂಶಿ)- ಕೊರೊನಾ ಸೋಂಕು ಮಹಾಮಾರಿಗೆ ಕಡಿ ವಾಣ ಹಾಕಲು ರಾಜ್ಯ ಸರ್ಕಾರ ಕರೆ ನೀಡಿದ್ದ ಲಾಕ್‍ಡೌನ್‍ನಿಂದ ರಾಜಧಾನಿ ಸಂಪೂರ್ಣ ಸ್ತಬ್ಧಗೊಂಡಿದೆ. ವಲಸಿಗರಿಂದ ರಾಜಧಾನಿ ಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದುದ್ದನ್ನು ತಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದರು. ಮಂಗಳ ವಾರ ರಾತ್ರಿ 8 ಗಂಟೆಯಿಂದ ಜಾರಿಗೊಂಡ ಈ ಲಾಕ್‍ಡೌನ್‍ಗೆ ಬೆಂಗಳೂರಿನ ಜನತೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಾಮಾರಿ ತೊಲಗಿ ದರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಿರುವ ಜನರು ಸರ್ಕಾರದ ಕರೆಗೆ ಯಾವುದೇ ವಿರೋಧವಿಲ್ಲದೆ, ಪೂರ್ಣ ಬೆಂಬಲ ವ್ಯಕ್ತಪಡಿಸಿ, ಮನೆಯಲ್ಲೇ ಉಳಿದಿದ್ದಾರೆ. ಸರ್ಕಾರಿ ಕಚೇರಿ, ಬ್ಯಾಂಕ್‍ಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಶೇ. 50ರಷ್ಟು ನೌಕರರು ಮಾತ್ರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅಗತ್ಯ ಸೇವೆಗಳು ಮಧ್ಯಾಹ್ನ 12 ಗಂಟೆವರೆಗೆ ಲಭ್ಯವಿರುವಂತೆ ವ್ಯವಸ್ಥೆ ಮಾಡಿದ್ದ ಸರ್ಕಾರ ಆಸ್ಪತ್ರೆ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆ ಸೇರಿದಂತೆ ಆಟೋ, ಟ್ಯಾಕ್ಸಿ ಹಾಗೂ ಸಾರ್ವಜನಿಕ ವಾಹನಗಳು ರಸ್ತೆಗಿಳಿಯಲಿಲ್ಲ. ಲಾಕ್‍ಡೌನ್‍ಗೆ ಹೆದರಿ ಶೇ.5ರಷ್ಟು ಮಂದಿ ಬೆಂಗಳೂರಿನಿಂದ ಕಾಲ್ಕಿತ್ತಿದ್ದರು. ರಾಜಧಾನಿಯಲ್ಲಿ ಸೋಂಕು ಹೆಚ್ಚಾಗುತ್ತಿದ್ದಂತೆ ಮಹಾ ಮಾರಿಗೆ ಹೆದರಿ, ಈಗಾಗಲೇ ಶೇ.15ರಿಂದ 20ರಷ್ಟು ಮಂದಿ ಮನೆಗಳನ್ನು ಖಾಲಿ ಮಾಡಿ, ಕುಟುಂಬಗಳ ಸಮೇತ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಹೊರ ರಾಜ್ಯದವರು ಸೋಂಕಿಗೆ ಹೆದರಿ ಬಹುತೇಕರು ರಾಜಧಾನಿ ತೊರೆದಿದ್ದಾರೆ. ಇಷ್ಟರ ನಡುವೆಯೂ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳ ವಾಗುತ್ತಿದ್ದಂತೆ ಆತಂಕಗೊಂಡ ಸರ್ಕಾರ ತಮ್ಮ ಅಧಿಕಾರವನ್ನು ಬಳಸಿ, ಒಂದು ವಾರದ ಮಟ್ಟಿಗೆ ಲಾಕ್‍ಡೌನ್ ಘೋಷಣೆ ಮಾಡಿದೆ.ಈ ಲಾಕ್‍ಡೌನ್ ಸಂದರ್ಭದಲ್ಲೇ ಸೋಂಕು ನಿಯಂತ್ರಿಸಲು ನಗರದ ಎಂಟು ಸಚಿವರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪೂರ್ಣ ಹೊಣೆ ವಹಿಸಿದ್ದಾರೆ. ಇದು ಎಷ್ಟು ಫಲಪ್ರದವಾಗುವುದೋ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಈ ಮಧ್ಯೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಗಳನ್ನು ಸಿಂಪಡಣೆ ಮಾಡಲಾಯಿತು. ಇದು ಕೇವಲ ರಸ್ತೆಗಷ್ಟೇ ಅಲ್ಲದೆ, ಪ್ರಮುಖ ಆಸ್ಪತ್ರೆಗಳ ಸರಹದ್ದಿನಲ್ಲೂ ಅಗ್ನಿ ಶಾಮಕದಳದ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದರು.

Translate »