ಕೆವೈಸಿ ಮಾಡಿಸಿಲ್ಲದವರಿಗೆ ಬ್ಯಾಂಕ್ ಖಾತೆ ಸ್ಥಗಿತ ಭೀತಿ
ಮೈಸೂರು

ಕೆವೈಸಿ ಮಾಡಿಸಿಲ್ಲದವರಿಗೆ ಬ್ಯಾಂಕ್ ಖಾತೆ ಸ್ಥಗಿತ ಭೀತಿ

February 29, 2020

ನವದೆಹಲಿ,ಫೆ.28-‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ (ಎಸ್‍ಬಿಐ)ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೇ ಇರುವವರಿಗೆ ಖಾತೆ ಸ್ಥಗಿತ ಭೀತಿ ಎದುರಾಗಿದೆ. ಫೆ.28ರೊಳಗೆ ಖಾತೆದಾರರು ಬ್ಯಾಂಕಿಗೆ ಕೆವೈಸಿ ವಿವರ ನೀಡದಿದ್ದರೆ ಖಾತೆ ಸ್ಥಗಿತಗೊಶಿಸುವುದಾಗಿ ಬ್ಯಾಂಕ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬ್ಯಾಂಕ್ ನೀಡಿದ್ದ ಗಡುವು ಶುಕ್ರವಾರಕ್ಕೆ ಮುಗಿದಿದೆ. ಖಾತೆಗಳು ಸ್ಥಗಿತಗೊಳ್ಳಲಿವೆಯೇ ಎಂಬುದು ಶನಿವಾರ ತಿಳಿಯಲಿದೆ.

ಇತ್ತೀಚೆಗೆ ಎಲ್ಲ ಬ್ಯಾಂಕುಗಳು ಕೆವೈಸಿ ವಿಚಾರ ದಲ್ಲಿ ಹೆಚ್ಚು ಕಟ್ಟುನಿಟ್ಟಾಗಿವೆ. ಬ್ಯಾಂಕುಗಳು ತಮ್ಮ ಎಲ್ಲಾ ಗ್ರಾಹಕರ ಕೆವೈಸಿಯನ್ನು ನಿಯತಕಾಲಿಕ ವಾಗಿ ನವೀಕರಿಸಬೇಕಾಗುತ್ತದೆ. ಮನಿಲಾಂಡ ರಿಂಗ್ ತಡೆ ಕಾಯ್ದೆ 2002 ಮತ್ತು ಮನಿಲಾಂಡರಿಂಗ್ ತಡೆ (ದಾಖಲೆಗಳ ನಿರ್ವಹಣೆ) ನಿಯಮಗಳು, 2005ರ ಪ್ರಕಾರ, ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‍ಬಿಐ) ವೆಬ್ ಸೈಟ್‍ನಲ್ಲಿ ತಿಳಿಸಿರು ವಂತೆ, ಖಾತೆ ಆಧಾರಿತ ಸಂಬಂಧ (ಕೆವೈಸಿ) ಸ್ಥಾಪಿಸಬೇಕು. ಈ ಮೂಲಕ ಅವರ ವಹಿವಾಟುಗಳನ್ನು ಮೇಲ್ವಿಚಾರಣೆ ಸುಲಭವಾಗುತ್ತದೆ. ಆರ್‍ಬಿಐ ಮಾರ್ಗಸೂಚಿಯಂತೆ 2020ರ ಫೆ.28ರೊಳಗೆ ಎಲ್ಲಾ ಭಾರತೀಯ ಬ್ಯಾಂಕುಗಳು ಕೆವೈಸಿ ನವೀ ಕರಿಸಬೇಕಿದೆ. ಇಲ್ಲವಾದರೆ ಬ್ಯಾಂಕುಗಳೂ ಆರ್‍ಬಿಐಗೆ ಭಾರಿ ದಂಡ ತೆರಬೇಕಾಗುತ್ತದೆ.

Translate »