ದತ್ತಾತ್ರೆಯ ಪಾಟೀಲರ ಮಂತ್ರಿ ಮಾಡಿ, ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ
ಮೈಸೂರು

ದತ್ತಾತ್ರೆಯ ಪಾಟೀಲರ ಮಂತ್ರಿ ಮಾಡಿ, ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ

February 29, 2020

ಕಲಬುರಗಿ: ಬಿ.ಎಸ್.ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಬೇಕೆಂದರೆ ಶಾಸಕ ದತ್ತಾತ್ರೆಯ ಪಾಟೀಲರನ್ನು ಮಂತ್ರಿ ಮಾಡಬೇಕು ಇಲ್ಲದಿದ್ದರೆ 10 ಶಾಸಕರ ಕೈಯ್ಯಲ್ಲಿ ರಾಜೀನಾಮೆ ಕೊಡಿಸುತ್ತೇನೆ ಎಂದು ಶ್ರೀಶೈಲ ಸಾರಂಗಮಠದ ಸ್ವಾಮೀಜಿಗಳು ಬಹಿರಂಗ ವಾಗಿ ಧಮ್ಕಿ ಹಾಕಿದ್ದಾರೆ. ಕಲಬುರಗಿಯ ಸಾರಂಗದರ ದೇಶಿಕೇಂದ್ರ ಶೀಗಳು ಕಾರ್ಯಕ್ರಮ ವೊಂದರಲ್ಲಿ ಮಾತನಾಡಿ ಮಾತು ಕೊಟ್ಟಂತೆ ದತ್ತಾತ್ರೆಯ ಪಾಟೀಲ್‍ರನ್ನು ಮುಂದಿನ ವರ್ಷದೊಳಗೆ ಮಂತ್ರಿ ಮಾಡಬೇಕು. ಇಲ್ಲದಿದ್ದರೆ ಅವರಿಗೆ ರಾಜಿನಾಮೆ ನೀಡಿ ಮನೆಯಲ್ಲಿರುವಂತೆ ಹೇಳುತ್ತೇನೆ. ಇದೇ ವೇಳೆ ಶಾಸಕ ಅಪ್ಪುಗೌಡರಿಗೂ ರಾಜೀನಾಮೆ ನೀಡುವಂತೆ ಹೇಳುತ್ತೇನೆ ಎಂದರು. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತು ಶಾಸಕರಿದ್ದಾರೆ. ಅವರೆಲ್ಲರಿಗೂ ರಾಜೀನಾಮೆ ನೀಡುವಂತೆ ಹೇಳುತ್ತೇನೆ. ಅವರಿಂದ ರಾಜೀನಾಮೆ ಕೊಡಿಸುವ ಶಕ್ತಿ ನನಗಿದೆ ಎಂದು ಹೇಳಿದ್ದಾರೆ.

Translate »