ಸ್ಕೂಟರ್ ಉರುಳಿ ಬಿದ್ದಿದ್ದ ವಾಟರ್‍ವಾಲ್ವ್ ಗುಂಡಿಗೆ ಬ್ಯಾರಿಕೇಡ್ ಜೋಡಣೆ
ಮೈಸೂರು

ಸ್ಕೂಟರ್ ಉರುಳಿ ಬಿದ್ದಿದ್ದ ವಾಟರ್‍ವಾಲ್ವ್ ಗುಂಡಿಗೆ ಬ್ಯಾರಿಕೇಡ್ ಜೋಡಣೆ

August 27, 2020

ಮೈಸೂರು, ಆ.26(ಎಂಕೆ)- ಮೈಸೂರಿನ ರಾಜ್‍ಕುಮಾರ್ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಇರುವ 6 ಅಡಿ ಆಳದ ವಾಟರ್‍ವಾಲ್ವ್ ಗುಂಡಿಗೆ ಆ.24ರ ಸೋಮ ವಾರ ರಾತ್ರಿ ಸ್ಕೂಟರ್ ಉರುಳಿಬಿದ್ದು, ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಮುಂಜಾಗ್ರತಾ ಕ್ರಮವಾಗಿ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ಬುಧವಾರ ವಾಟರ್‍ವಾಲ್ವ್ ಗುಂಡಿಗೆ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದಾರೆ.

ಕಳೆದ ಐದಾರು ತಿಂಗಳಿಂದ ರಾಜ್‍ಕುಮಾರ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇಲ್ಲಿನ ಬಿಎಸ್‍ಎನ್‍ಎಲ್ ಕಚೇರಿ ಸಮೀಪದ ರಸ್ತೆಬದಿಯಲ್ಲಿ ವಾಟರ್ ವಾಲ್ವ್ ಗುಂಡಿ ಮಾಡಲಾಗಿದ್ದು, ಅದನ್ನಿನ್ನೂ ಮುಚ್ಚಿಲ್ಲ. ಆದ್ದರಿಂದ ವಾಹನ ಸವಾರರು ರಾತ್ರಿ ವೇಳೆ ಬಿದ್ದು, ಅನಾಹುತ ಉಂಟಾಗದಂತೆ ಗುಂಡಿಯ ಸುತ್ತ ಹೆಚ್ಚಿನ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ ಎಂದು ಸಿದ್ದಾರ್ಥನಗರ ಠಾಣೆ ಪೊಲೀಸರು ತಿಳಿಸಿದರು.

Translate »