ಬಸವ ವಸತಿ ಯೋಜನೆ   ಫಲಾನುಭವಿ ಕಂಗಾಲು
ಮೈಸೂರು ಗ್ರಾಮಾಂತರ

ಬಸವ ವಸತಿ ಯೋಜನೆ  ಫಲಾನುಭವಿ ಕಂಗಾಲು

May 19, 2020

ತಿ.ನರಸೀಪುರ, ಮೇ 18(ಎಸ್‍ಕೆ)-ತಾಲೂಕಿನ ಕುಪ್ಯ ಗ್ರಾಮದಲ್ಲಿ ವಸತಿ ಯೋಜನೆ ಯಡಿ ಮನೆ ನಿರ್ಮಾಣಕ್ಕೆ ಮಂಜೂ ರಾತಿ ದೊರಕಿದ್ದರೂ ತಾಂತ್ರಿಕ ಸಮಸ್ಯೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದ ರಿಂದ ವೃದ್ಧೆ ಫಲಾನುಭವಿಯೊಬ್ಬರು ಸೂರಿಲ್ಲದೆ, ನೆರೆ ಮನೆಯವರ ಜಗಲಿ ಯಲ್ಲಿ ದಿನದೂಡುವಂತಾಗಿದೆ.

ಗ್ರಾಮದ ನಿವಾಸಿ ನಿಂಗಮ್ಮ 2017- 18ರ ಸಾಲಿನಲ್ಲಿ ಬಸವ ವಸತಿ ಯೋಜನೆ ಯಡಿ ಫಲಾನುಭವಿಯಾಗಿ ಆಯ್ಕೆ ಯಾಗಿದ್ದರು. ಅದರಂತೆ ಮೊದಲ ಹಂತದಲ್ಲಿ ನಿವೇಶನ ಜಿಪಿಎಸ್(ಕೋಡ್ ನಂ.71062) ಆಗಿ, ತಳಪಾಯ ಪೂರ್ಣಗೊಂಡಿದೆ. ಗೋಡೆಗಳು ನಿರ್ಮಾಣ ಹಂತದಲ್ಲಿವೆ. ಸದ್ಯ ಅನು ದಾನ ಇಲ್ಲದೆ ವಸತಿ ಕಾಮಗಾರಿ ಸ್ಥಗಿತಗೊಂಡಿದೆ. ಈ ಹಂತದ ಮಾಹಿತಿಯನ್ನು ಯೋಜನೆ ಯಡಿ ಕಂಪ್ಯೂಟರ್‍ನಲ್ಲಿ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಅಪ್‍ಲೋಡ್ ಮಾಡಿ ದರೂ ವಿಫಲವಾಗಿದ್ದು, ಮುಂದಿನ ಹಂತದ ಅನುದಾನ ಪಡೆಯಲು ತೊಡಕುಂಟಾಗಿದೆ. ಸದ್ಯ ಇರಲು ಸೂರಿಲ್ಲದೆ ನೆರೆ ಮನೆಯವರ ಜಗಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ಜಿಪಂನಿಂದ ರಾಜೀವ್ ಗಾಂಧಿ ವಸತಿ ನಿರ್ಮಾಣ ನಿಗಮ ಯೋಜನೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದ್ದು, ಫಲಾನುಭವಿಯ ನಿವೇಶನ ಜಿಪಿಎಸ್ ಮಾಡಿದರೂ ಅಪ್‍ಡೇಟ್ ಆಗದ ಕಾರಣ ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೂಡಲೇ ಸಮಸ್ಯೆಯನ್ನು ಸರಿಪಡಿಸಿ ನಿಂಗಮ್ಮರಿಗೆ ಮನೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಆದರೆ ಈವರೆವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸೂರು ಕಲ್ಪಿಸುವಂತೆ ವೃದ್ಧೆ ನಿಂಗಮ್ಮ ಮನವಿ ಮಾಡಿದ್ದಾರೆ.

 

Translate »