ಮೇ 31ರವರೆಗೆ ಲಾಕ್‍ಡೌನ್ ವಿಸ್ತರಣೆ ನಿರ್ಬಂಧದ ನಡುವೆಯೂ ನಿರಾಳ
ಮೈಸೂರು

ಮೇ 31ರವರೆಗೆ ಲಾಕ್‍ಡೌನ್ ವಿಸ್ತರಣೆ ನಿರ್ಬಂಧದ ನಡುವೆಯೂ ನಿರಾಳ

May 18, 2020

ನವದೆಹಲಿ, ಮೇ17-ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಘೋಷಿಸಲಾಗಿರುವ ಲಾಕ್‍ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಹಲವು ಚಟು ವಟಿಕೆಗಳಿಗೆ ವಿನಾಯಿತಿ ನೀಡಿರುವುದ ರಿಂದ ದೇಶದ ಜನತೆ ನಿರ್ಬಂಧದ ನಡು ವೆಯೂ ನಿರಾಳರಾಗುವಂತಾಗಿದೆ.

ಭಾನುವಾರ 3ನೇ ಲಾಕ್‍ಡೌನ್ ಮುಕ್ತಾಯ ಗೊಂಡಿರುವ ಹಿನ್ನೆಲೆಯಲ್ಲಿ 4ನೇ ಲಾಕ್ ಡೌನ್‍ನ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ್ದು, ಏನೇನು ಸೌಲಭ್ಯಗಳು ಇರಲಿವೆ ಹಾಗೂ ಯಾವು ದಕ್ಕೆಲ್ಲಾ ನಿರ್ಬಂಧವಿದೆ ಎಂದು ವಿಸ್ತøತ ವಾಗಿ ಮಾರ್ಗಸೂಚಿಯನ್ನು ಉಲ್ಲೇಖಿಸ ಲಾಗಿದೆ. ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್‍ಗಳನ್ನು ನಿರ್ಧರಿಸುವ ಜವಾಬ್ದಾರಿ ಯನ್ನು ರಾಜ್ಯ ಸರ್ಕಾರಗಳಿಗೆ ನೀಡಲಾ ಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡುವ ಮಾಹಿತಿ ಗಣನೆಗೆ ತೆಗೆದುಕೊಂಡ ನಂತರ ರಾಜ್ಯ ಸರ್ಕಾರಗಳು ಜೋನ್‍ಗಳನ್ನು ನಿರ್ಧರಿಸಲಿವೆ. ಅದರಂತೆ ಆಯಾ ರಾಜ್ಯಗಳ ಜಿಲ್ಲಾಡಳಿತವು ಜೋನ್ ಗಳನ್ನು ಘೋಷಿಸಬಹುದಾಗಿದೆ. ರಾಜ್ಯ ದಲ್ಲಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್‍ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದ ಎಲ್ಲಾ ಕಡೆ ಬಸ್ ಸಂಚಾರ, ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳನ್ನು ತೆರೆಯಬಹುದಾಗಿದ್ದು, ಪಾರ್ಸಲ್‍ಗೆ ಮಾತ್ರ ಅವಕಾಶವಿದೆ. ಅಂತರ ರಾಜ್ಯ ಬಸ್ ಸಂಚಾರಕ್ಕೆ ಉಭಯ ರಾಜ್ಯಗಳು ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು. ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಅಂತರ ರಾಜ್ಯ ಪ್ರಯಾ ಣಕ್ಕೆ ನಿರ್ಬಂಧ ವಿಧಿಸುವಂತಿಲ್ಲ. ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಅಂತರ ರಾಜ್ಯ ಪ್ರಯಾಣಕ್ಕೆ ಎಲ್ಲಾ ರಾಜ್ಯಗಳು ಅನುಮತಿ ನೀಡಬೇಕು. ಖಾಲಿ ಟ್ರಕ್‍ಗಳ ಸಂಚಾ ರಕ್ಕೂ ಅನುಮತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಹಾರಾಟ, ಮೆಟ್ರೋ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವಂತಿಲ್ಲ. ಚಿತ್ರಮಂದಿರ, ಮಾಲ್, ಜಿಮ್, ಈಜುಕೊಳ, ಬಾರ್, ಸಲೂನ್, ಬ್ಯೂಟಿಪಾರ್ಲರ್ ಮುಂತಾದವುಗಳಿಗೆ ನಿರ್ಬಂಧ ವಿಧಿಸಲಾಗಿದೆ. ಧಾರ್ಮಿಕ ಕೇಂದ್ರಗಳನ್ನು ತೆರೆಯುವಂತಿಲ್ಲ. ಹಾಗೂ ಧಾರ್ಮಿಕ ಕೇಂದ್ರಗಳಿಗೆ ಯಾರೂ ಪ್ರವೇಶಿಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಕಂಟೇನ್ಮೆಂಟ್ ಜೋನ್‍ಗಳಲ್ಲಿ ಯಾವುದೇ ವಿನಾಯಿತಿ ನೀಡುವ ಹಾಗಿಲ್ಲ. ತುರ್ತು ಚಿಕಿತ್ಸೆ ಹಾಗೂ ಅಗತ್ಯ ವಸ್ತು ಮತ್ತು ಔಷಧಿ ಪಡೆಯಲು ಮಾತ್ರ ಜನರು ಮನೆಯಿಂದ ಹೊರ ಬರಬಹುದು. ಈ ಜೋನ್‍ಗಳಲ್ಲಿ ಜನರ ಚಲನ-ವಲನದ ಮೇಲೆ ನಿಗಾ ಇಡಬೇಕು. ಮನೆಯಿಂದ ಮನೆಗೆ ಕಣ್ಗಾವಲಿಡಬೇಕು. ಅಲ್ಲದೇ ಔಷಧ ಅಂಗಡಿಗಳ ಮೇಲೂ ತೀವ್ರ ನಿಗಾ ವಹಿಸಬೇಕು ಎಂದು ಮಾರ್ಗಸೂಚಿಯನ್ನು ತಿಳಿಸಲಾಗಿದೆ.

ರಾತ್ರಿ 7ರಿಂದ ಬೆಳಿಗ್ಗೆ 7 ಗಂಟೆವರೆಗೆ ಕಫ್ರ್ಯೂ ಮುಂದುವರೆಯಲಿದ್ದು, ಈ ವೇಳೆಯಲ್ಲಿ ಆರೋಗ್ಯ ಸಮಸ್ಯೆ ಮುಂತಾದ ಅತ್ಯಗತ್ಯ ಕೆಲಸ ಕಾರ್ಯಕ್ಕೆ ಹೊರತುಪಡಿಸಿ ವೈಯಕ್ತಿಕ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಗಳಿಗೆ ಕೇಂದ್ರ ಸೂಚಿಸಿದೆ. ಸುರಕ್ಷಿತ ದೃಷ್ಟಿಯಿಂದ 65 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಆರೋಗ್ಯ ಸಮಸ್ಯೆ ಇರುವವರು ತುರ್ತು ಸಂದರ್ಭ ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲೂ ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಸ್ತೆಯಲ್ಲಿ ಉಗುಳುವಂತಿಲ್ಲ. ಲಾಕ್‍ಡೌನ್ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಆರೋಗ್ಯ ಸೇತು ಆ್ಯಪ್ ಅನ್ನು ಪ್ರತಿಯೊಬ್ಬರು ಬಳಸಬೇಕು. ಉದ್ಯೋಗಿಗಳ ಆರೋಗ್ಯ ದೃಷ್ಟಿಯಿಂದ ಕಂಪನಿಗಳು ತಮ್ಮ ಎಲ್ಲಾ ನೌಕರರಿಗೂ ಆರೋಗ್ಯ ಸೇತು ಆ್ಯಪ್ ಬಳಸುವಂತೆ ಸೂಚಿಸಬೇಕು. ಪ್ರತಿಯೊಬ್ಬರೂ ಈ ಆ್ಯಪ್‍ನಲ್ಲಿ ತಮ್ಮ ಆರೋಗ್ಯದ ಮಾಹಿತಿಯನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.

Translate »