ನವದೆಹಲಿ, ಮೇ 17-ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನ 5ನೇ ಭಾಗದ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಪ್ರಕಟಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಆರ್ಥಿಕ ನೆರವಿನ ಬಗ್ಗೆ ವಿವರ ನೀಡಿದರು.
ಆನ್‍ಲೈನ್ ತರಗತಿಗಾಗಿ 12 ಹೆಚ್ಚುವರಿ ಚಾನೆಲ್‍ಗಳನ್ನು ಸೇರ್ಪಡೆ ಗೊಳಿಸಲಾಗಿದೆ. ‘ಪಿಎಂ ಇ-ವಿದ್ಯಾ’ ಯೋಜನೆ ತಕ್ಷಣದಲ್ಲೇ ಜಾರಿಗೆ ಬರಲಿದ್ದು, ಆನ್‍ಲೈನ್ ತರಗತಿಗಳಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ 100 ವಿವಿಗಳಿಗೆ ಆನ್‍ಲೈನ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದರು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3,950 ಕೋಟಿ ಹಾಗೂ ‘ಜನ್‍ಧನ್’ ಖಾತೆಗಳ ಮೂಲಕ 10,025 ಕೋಟಿ ನೀಡಲಾಗಿದೆ. ಗರೀಬ್ ಕಲ್ಯಾಣ್ ಪ್ಯಾಕೇಜ್‍ನಡಿ ಬಡವರಿಗೆ ಆಹಾರ ಪದಾರ್ಥ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನರೇಗಾ, ಆರೋಗ್ಯ ಸೇವೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೋವಿಡ್ ಸಂದರ್ಭ ದಲ್ಲಿ ಉದ್ಯಮ ನಡೆಸಲು ಉದ್ಯಮಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಉದ್ಯಮ ನೀತಿ ಸರಳಗೊಳಿಸಲಾಗಿದೆ. ಶ್ರಮಿಕ್ ವಿಶೇಷ ರೈಲುಗಳ ಸಂಚಾರದ ಶೇ.85ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಿದೆ. ಕೊರೊನಾ ಟೆಸ್ಟಿಂಗ್ ಕಿಟ್‍ಗಳಿಗಾಗಿ 550 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೊರೊನಾ ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯಗಳಿಗೆ 4113 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 300ಕ್ಕೂ ಹೆಚ್ಚು ಪಿಪಿಇ ತಯಾ ರಿಕರಿಂದ ಈವರೆಗೆ 51 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿಸಿ, ರಾಜ್ಯಗಳಿಗೆ ಸರಬ ರಾಜು ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.