ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನರಾಗಿ  ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ
ಮೈಸೂರು

ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನರಾಗಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ

March 22, 2021

ಮೈಸೂರು,ಮಾ.21(ಎಂಟಿವೈ)- ಮಹಿಳೆ ಯರು ಈ ಹಿಂದೆ ಒಳಗಾಗಿದ್ದ ಕಟ್ಟುಪಾಡು ಗಳಿಂದ ಹೊರ ಬಂದು ಎಲ್ಲಾ ಕ್ಷೇತ್ರ ಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಡಿ.ದೇವರಾಜ ಅರಸ್ ಹಿಂದು ಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲಾ ಸಭಾಂಗಣದಲ್ಲಿ ಕೀರ್ತಿ ಯುವತಿ ಮಹಿಳಾ ಮಂಡಳಿ, ಶ್ರೀ ಮಲ್ಲಿ ಗಮ್ಮ ಮಾಚೀದೇವ ಮಡಿವಾಳ ಪ್ರದೇಶ ಮಟ್ಟದ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ವಿಶ್ವ ಮಹಿಳಾ ದಿನ’ ಹಾಗೂ ಸಾಧಕ ಮಹಿಳೆಯರ ಸನ್ಮಾನ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಮಹಿಳಾ ದಿನದ ಅಂಗ ವಾಗಿ ಎಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಸನ್ಮಾನಿ ಸುವ ಮೂಲಕ ಹೊಸ ಸಾಧಕಿಯರನ್ನು ಹುಟ್ಟು ಹಾಕುವ ಹಾಗೂ ಸಾಧನೆ ಮಾಡಲು ಪ್ರೇರಣೆ ನೀಡುವ ಚಟುವಟಿಕೆ ನಡೆಯು ತ್ತಿರುವುದು ಶ್ಲಾಘನೀಯ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿ ಸಮಾಜದ ಏಳಿಗೆಯಲ್ಲಿ ಮಹಿಳೆ ಯರ ಪಾತ್ರ ಏನೆಂಬುದನ್ನು ತೋರ್ಪ ಡಿಸಿದೆ. ಈ ಹಿಂದೆ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಕಟ್ಟುಪಾಡುಗಳಿಂದ ಹೊರಬಂದ ಎಲ್ಲಾ ಕ್ಷೇತ್ರಗಳಿಗೂ ಪಾದಾರ್ಪಣೆ ಮಾಡಿದ್ದಾರೆ. ಗಗನಯಾತ್ರೆ, ವೈದ್ಯಕೀಯ, ವಿಜ್ಞಾನ ಸೇರಿ ದಂತೆ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಮಹಿಳೆಯರು ಸೇವೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಸಾಧನೆಗೈಯ್ದ ಮಹಿಳೆಯರನ್ನು ಸನ್ಮಾನಿ ಸುವ ಸಂಪ್ರದಾಯ ಇರುವುದು ಮತ್ತಷ್ಟು ಮಂದಿಗೆ ಸಾಧನೆ ಮಾಡಬೇಕು ಎಂಬ ಛಲ ಹುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ ಮಾತನಾಡಿ, ಈಗಾಗಲೇ ಪುರುಷರಿಗೆ ಸರಿಸಮಾನರಾಗಿ ಎಲ್ಲಾ ಕ್ಷೇತ್ರ ಗಳಲ್ಲೂ ಮಹಿಳೆಯರು ಸಾಧನೆ ಮಾಡು ತ್ತಿದ್ದಾರೆ. ಆದರೂ ಸಂಕೋಚ, ಮುಜುಗರ ತೊರೆದು ಮತ್ತಷ್ಟು ಮಂದಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಮುಂದಾ ಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾವಂತರಾದರೆ ಮಹಿಳೆಯರು ಸಾಧನೆ ಮಾಡಲು ಸುಲಭ. ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಪ್ರಮಾಣದಲ್ಲಿ ಕಡಿಮೆ ಇದೆ. ಈ ಹಿನ್ನೆಲೆ ಸಂಘ-ಸಂಸ್ಥೆಗಳು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವತ್ತ ಗಮನ ಹರಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿ ಸ್ವೀಕರಿಸಿದ ಮಹಿಳೆಯರ ಜವಾಬ್ದಾರಿ ಇನ್ನು ಹೆಚ್ಚಿದಂತಾಗಿದೆ. ಮತ್ತಷ್ಟು ಮಂದಿಗೆ ಪ್ರೇರಕಶಕ್ತಿಯಾಗಿ ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ `ರಾಣಿ ಲಕ್ಷ್ಮೀ ಬಾಯಿ’ ಪ್ರಶಸ್ತಿ ನೀಡಿ ಗೌರವಿಸಲಾ ಯಿತು. ಪುಷ್ಪಲತಾ, ಡಾ.ಎ.ಎಂ.ಸಿ.ದಾಕ್ಷಾ ಯಿಣಿ ಉಮೇಶ್, ಸಾಹಿತ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಿ.ವಾಣಿ ರಾಘವೇಂದ್ರ, ನೃತ್ಯ ಕಲೆಯಲ್ಲಿ ಮಹಿಮ, ಚಿತ್ರಕಲೆಯಲ್ಲಿ ಎಸ್.ಜಿಲಿಯನ್, ಸಂಘಟನೆ ಮತ್ತು ಸಮಾಜ ಸೇವೆ ಪದ್ಮಾವತಿ, ಸಾಹಿತಿ ರತ್ನ ಚಂದ್ರಶೇಖರ್, ಸಾಹಿತ್ಯ ಮತ್ತು ಸಮಾಜಸೇವೆ ವೈ.ವಿ. ಯಶೋಧ ರಾಮಕೃಷ್ಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಎನ್.ಸಿ.ಮಮತ, ಸಂಘ ಟನೆ ಮತ್ತು ಸಮಾಜಸೇವೆ ಸಾಜಿದ್ ಎಂ. ಖಾನ್, ಹಿರಿಯ ಸಾಹಿತಿ ಚಂಪಾವತಿ ಶಿವಣ್ಣ, ಸಮಾಜಸೇವೆ ಪದ್ಮ ಬಿ.ನಾಗರಾಜು, ಸಂಘ ಟಕರು, ಸಮಾಜಸೇವೆ ಶಿವರತ್ನಮ್ಮ, ಯೋಗ ತರಬೇತುದಾರರಾದ ಭಾರತಿ, ರಮ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೀರ್ತಿ ಯುವತಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ರಮೇಶ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಪಿ.ವೆಂಕಟರಾಮಯ್ಯ, ಪಾಲಿಕೆ ಸದಸ್ಯೆ ಸಿ.ವೇದಾವತಿ, ಶಿಕ್ಷಕ ಮುತ್ತುಸ್ವಾಮಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »