ಪೂರ್ಣ ಬೆಂಬಲ ಘೋಷಿಸಿದ ಬೆಳವಾಡಿ ಶಿವಮೂರ್ತಿ
ಮೈಸೂರು

ಪೂರ್ಣ ಬೆಂಬಲ ಘೋಷಿಸಿದ ಬೆಳವಾಡಿ ಶಿವಮೂರ್ತಿ

December 6, 2022

ಮೈಸೂರು, ಡಿ. 5- ಚಾಮುಂಡೇ ಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರ ವಿರುದ್ಧ ಬಂಡಾಯ ವೆದ್ದಿದ್ದ ಜೆಡಿಎಸ್‍ನ ಪಂಚ ಮುಖಂಡರ ಪೈಕಿ ಓರ್ವರು ಇಂದು ಜಿ.ಟಿ. ದೇವೇಗೌಡರಿಗೆ ಬೆಂಬಲ ಸೂಚಿ ಸುವ ಮೂಲಕ ಉಳಿದ ಬಂಡಾಯ ಗಾರರಿಗೆ ಶಾಕ್ ನೀಡಿದ್ದಾರೆ.

ಐವರು ಮುಖಂಡರ ಪೈಕಿ ಬೆಳ ವಾಡಿ ಶಿವಮೂರ್ತಿಯವರು ಇಂದು ಶಾಸಕ ಜಿ.ಟಿ. ದೇವೇಗೌಡರನ್ನು ಭೇಟಿ ಮಾಡಿ, ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದರು. ಈ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಶಿವಮೂರ್ತಿ ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ. ಜಿ.ಟಿ.ದೇವೇಗೌಡರು ಕಾಂಗ್ರೆಸ್ ಅಥವಾ ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಬಂದಾಗ ನಾವು ಪಕ್ಷವನ್ನು ಕಟ್ಟಲೇಬೇಕು ಎಂದು ನಿರ್ಧರಿಸಿದ್ದೆವು. ನನ್ನನ್ನು ಸೇರುವಂತೆ ಮಾವಿನಹಳ್ಳಿ ಸಿದ್ದೇಗೌಡ, ಬೀರಿ ಹುಂಡಿ ಬಸವಣ್ಣ, ಮಾದೇಗೌಡ ಮತ್ತು ಕೆಂಪನಾಯಕ ಅವ ರನ್ನು ಕರೆಸಿಕೊಂಡ ಹೆಚ್.ಡಿ. ಕುಮಾರ ಸ್ವಾಮಿಯವರು, ಈಗ ಜಿ.ಟಿ. ದೇವೇ ಗೌಡರು ತಟಸ್ಥವಾಗಿದ್ದಾರೆ. ಅವರು ಪಕ್ಷದಲ್ಲಿ ಉಳಿಯುವುದು ಕೂಡ ಅನು ಮಾನ. ಹೀಗಾಗಿ ನೀವು ಪಕ್ಷ ಸಂಘಟನೆ ಮಾಡಿ ನಿಮ್ಮ ಐವರಲ್ಲಿ ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಹೇಳಿ ದ್ದರು. ಆಗ ನಾವು ಸಂಘಟನೆಯಲ್ಲಿ ತೊಡಗಿಕೊಂಡಿದ್ದೆವು ಎಂದರು.

ಮತ್ತೆ ಜಿಟಿಡಿ ಪಕ್ಷಕ್ಕೆ ಬಂದಾಗಲೂ ಕೂಡ ನಮ್ಮ ಐವರಲ್ಲಿ ಯಾರಾದರೂ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಮಾತು ಕತೆ ನಡೆದಿತ್ತು. ಆದರೆ, ಪಕ್ಷ ಜಿಟಿಡಿ ಅವ ರನ್ನು ಅಭ್ಯರ್ಥಿ ಎಂದು ತೀರ್ಮಾನಿಸಿ ದರೆ, ನಾವು ಅದಕ್ಕೆ ಬದ್ಧರಾಗಬೇಕಾಗುತ್ತದೆ ಎಂದು ನಾನು ಹೇಳಿದ್ದೆ. ಸ್ನೇಹಿತರು ಕಾಂಗ್ರೆಸ್‍ಗೆ ಹೋಗಲು ತೀರ್ಮಾನಿಸಿದರು. ನನ್ನನ್ನೂ ಕರೆದರು. ಆದರೆ, ನಾನು ಜೆಡಿಎಸ್ ಬಿಡುವುದಿಲ್ಲ ಎಂದು ಹೇಳಿದ್ದೇನೆ. ಅವರನ್ನೂ ಕೂಡ ಪಕ್ಷಕ್ಕೆ ಬರುವಂತೆ ಕರೆಯುತ್ತಿದ್ದೇನೆ. ಕುಮಾರಸ್ವಾಮಿ ಯವರು ಕೂಡ ಅವರನ್ನು ಮರಳಿ ಪಕ್ಷಕ್ಕೆ ಕರೆತರುವಂತೆ ನನಗೆ ಹೇಳಿದ್ದಾರೆ ಎಂದರು.

ಜಿ.ಟಿ.ದೇವೇಗೌಡರಿಂದ ನನಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಶಿವಮೂರ್ತಿ, ನನ್ನ ಪತ್ನಿಯನ್ನು ಜಿಪಂ ಅಧ್ಯಕ್ಷರನ್ನಾಗಿ ಮಾಡಿದ್ದರು. ನಾನು ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಜಿಟಿಡಿ, ಅವರ ಪುತ್ರ ಹರೀಶ್‍ಗೌಡ, ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಆದರೆ ಜನರು ನನಗೆ ಮತ ಕೊಡಲಿಲ್ಲ. ಹೀಗಾಗಿ ಸೋತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರಿಗೆ ಹ್ಯಾಟ್ರಿಕ್ ಗೆಲುವು ತಂದು ಕೊಡುವುದು ನನ್ನ ಉದ್ದೇಶ ಎಂದರು.

ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಬೇಕಿರಬಹುದು: ಇದೇ ವೇಳೆ ಸುದ್ದಿಗಾರರೊಂದಿಗೆ ಜಿ.ಟಿ. ದೇವೇಗೌಡರು, ನಾನು ಶಿವಮೂರ್ತಿ ಅವರನ್ನು ಸೆಳೆದಿಲ್ಲ. ಅವರು ಕಳೆದ 40 ವರ್ಷದಿಂದ ಜೆಡಿಎಸ್‍ನಲ್ಲಿದ್ದಾರೆ. ಅದೇ ರೀತಿ ಈಗಲೂ ಇದ್ದಾರೆ ಎಂದರು. ನನ್ನ ವಿರುದ್ಧ ಅವರು ಗುಂಪು ಕಟ್ಟಲಿಲ್ಲ. ನಾನು ತಟಸ್ಥವಾಗಿದ್ದಾಗ ಪಕ್ಷ ಸಂಘಟನೆ ಮಾಡಲೇಬೇಕಾದ ಅನಿವಾರ್ಯತೆ ಇದ್ದುದ್ದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಶಿವಮೂರ್ತಿ ಪಕ್ಷ ಸಂಘಟನೆಗಾಗಿ ತಂಡ ಕಟ್ಟಿದರು.

ಹೆಚ್.ಡಿ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರುಗಳು ನಮ್ಮ ಮನೆಗೆ ಬಂದರು. ಹೆಚ್.ಡಿ. ದೇವೇಗೌಡರು ಅನಾರೋಗ್ಯದ ಸಂದರ್ಭದಲ್ಲೂ ನನ್ನ ಮನೆಗೆ ಬಂದು ಪಕ್ಷದಲ್ಲಿ ಮುಂದುವರಿಯುವಂತೆ ಹೇಳಿದಾಗ ಚಕಾರವೆತ್ತದೆ ನಾನು ಒಪ್ಪಿಕೊಂಡೆ. ಜೆಡಿಎಸ್‍ನಿಂದ ಯಾರನ್ನೂ ನಾನು ಹೊರ ಹಾಕುವುದಿಲ್ಲ. ನನ್ನ ವಿರುದ್ಧ ಎಷ್ಟೇ ಕೆಲಸ ಮಾಡಿದ್ದರೂ ಅವರನ್ನು ಪಕ್ಷದಿಂದ ತೆಗೆದಿಲ್ಲ ಎಂದರು. ಪಕ್ಷದ ಮೇಲೆ ಪ್ರೀತಿ, ಹೆಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಮೇಲೆ ನಂಬಿಕೆ ಇರುವವರು ಹೈಕಮಾಂಡ್ ನನ್ನ ಮನೆಗೆ ಬಂದಾಗಲೇ ಮನೆಗೆ ಬರಬೇಕಾಗಿತ್ತು. ಆದರೆ, ಬರಲಿಲ್ಲ. ಅವರು ಅಧಿಕಾರ ಅನುಭವಿಸಿದ್ದಾರೆ. ಇನ್ನೂ ಹೆಚ್ಚಿನ ಅಧಿಕಾರ ಬೇಕೆಂದು ಅವರಿಗೆ ಅನ್ನಿಸಿರಬಹುದು. ಎಂಎಲ್‍ಎ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಅವರ ಬಳಿಗೆ ಹೋಗಿದ್ದಾರೆ. ಅವರು ನನ್ನ ವಿರುದ್ಧ ಸ್ಪರ್ಧಿಸಲೂಬಹುದು. ಆದರೆ, ಜನರು ತೀರ್ಮಾನ ಮಾಡುತ್ತಾರೆ ಎಂದರಲ್ಲದೇ, ಈಗಲೂ ಕೂಡ ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಾಗಿದ್ದೇನೆ ಎಂದರು. ಪ್ರಶ್ನೆಯೋಂದಕ್ಕೆ ಉತ್ತರಿಸಿದ ಗೌಡರು, ಅವರುಗಳು ಮೀಡಿಯಾದಲ್ಲಿದ್ದಾರೆಯೇ ಹೊರತು, ಜನರೊಂದಿಗಿಲ್ಲ ಎಂದರು.

Translate »