`ಬೆಲ್ ಬಾಟಮ್’ ಸಿನಿಮಾ ಸನ್ನಿವೇಶ ಶೈಲಿ ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಖತರ್ನಾಕ್ ಖದೀಮರ ಬಂಧನ
ಮೈಸೂರು

`ಬೆಲ್ ಬಾಟಮ್’ ಸಿನಿಮಾ ಸನ್ನಿವೇಶ ಶೈಲಿ ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಖತರ್ನಾಕ್ ಖದೀಮರ ಬಂಧನ

November 10, 2020

ಮೈಸೂರು, ನ.9(ಎಸ್‍ಬಿಡಿ)- ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸಿರುವ ಮೈಸೂರಿನ ಸಿಸಿಬಿ ಪೊಲೀಸರು, ಆರೋಪಿ ಗಳಿಂದ ಬರೋಬ್ಬರಿ 75 ಲಕ್ಷ ಮೌಲ್ಯದ 1 ಕೆಜಿ 439 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕುಣಿಗಲ್‍ನ ನೆಲಮಂಗಲ ಬೈಪಾಸ್ ರಸ್ತೆ ನಿವಾಸಿ ಲಿಂಗರಾಜು ಅಲಿಯಾಸ್ ಸೈಯದ್ ಶಾಹೀದ್(38) ಹಾಗೂ ಹುಬ್ಬಳ್ಳಿಯ ಪಂಚಾಕ್ಷರಿ ನಗರದ ಸೈಯದ್ ನವಾಬ್ ಅಲಿಯಾಸ್ ರಾಜು(40) ಬಂಧಿತರಾಗಿದ್ದು, ಇವರಿಬ್ಬರೂ ಸಂಬಂ ಧಿಕರು. ನ.1ರಂದು ಅಶೋಕ ರಸ್ತೆಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಚಿನ್ನದ ಕಾಸಿನ ಸರವನ್ನು ಅಡವಿಟ್ಟು, ಅನು ಮಾನಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅದು ಕಳ್ಳತನ ಮಾಡಿದ್ದೆಂದು ತಿಳಿಯಿತು. ಆರೋಪಿಗಳನ್ನು ಬಂಧಿಸಿ, ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿ, ಅವರ ಅನುಮತಿಯೊಂದಿಗೆ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಮೈಸೂ ರಿನ ಸರಸ್ವತಿಪುರಂ, ಬನ್ನಿಮಂಟಪ ಸೇರಿ ದಂತೆ ವಿವಿಧೆಡೆ ಕಳ್ಳತನ ನಡೆಸಿರುವುದು ಬಯಲಾಗಿದೆ. ಇವರೊಂದಿಗೆ ದುಷ್ಕøತ್ಯ ದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಗೆ ಶೋಧ ನಡೆಸಲಾಗುತ್ತಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸವಾಲಾಗಿದ್ದ ಪ್ರಕರಣ: ಮೈಸೂರಿನ ಸರಸ್ವತಿಪುರಂ 5ನೇ ಮುಖ್ಯ ರಸ್ತೆಯಲ್ಲಿ ರುವ ಉದ್ಯಮಿ ವಿಜಿ ಕುಮಾರ್ ಹಾಗೂ ವನಜಾಕ್ಷಿ ಅವರ ನಿವಾಸದಲ್ಲಿ ಕಳೆದ ಸೆಪ್ಟೆಂ ಬರ್ 1ರಂದು 2 ಕೆಜಿಯಷ್ಟು ಚಿನ್ನಾಭರಣ `ಬೆಲ್ ಬಾಟಮ್’ ಚಿತ್ರದಲ್ಲಿನ ಕಳವು ಸನ್ನಿ ವೇಶ ಮಾದರಿ ಕಳ್ಳತನವಾಗಿದ್ದ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಮನೆಯ ಬೀಗ ಒಡೆದಿರಲಿಲ್ಲ, ಬಾಗಿಲು, ಕಿಟಕಿಗಳನ್ನು ಮುರಿದಿರಲಿಲ್ಲ, ಮನೆಯ ವಸ್ತುಗಳೂ ಚೆಲ್ಲಾ ಪಿಲ್ಲಿಯಾಗಿರಲಿಲ್ಲ, ಬೀರುವಿನ ಬೀಗವನ್ನೂ ತೆರೆದಿರಲಿಲ್ಲ, ಆದರೆ ಅದರೊಳಗಿದ್ದ ಚಿನ್ನಾ ಭರಣ ಮಾತ್ರ ಇರಲಿಲ್ಲ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ವಿಜಿ ಕುಮಾರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು, ಡಿಸ್ಚಾರ್ಜ್ ಆಗಿದ್ದರು. ನಂತರ ಅವರ ತಾಯಿಗೂ ಕೊರೊನಾ ದೃಢ ಪಟ್ಟಿದ್ದರಿಂದ ಆಸ್ಪತ್ರೆಗೆ ಸೇರಿಸಲು ಅಂದು ರಾತ್ರಿಯೇ ಹೋಗಬೇಕಿತ್ತು. ಹಾಗಾಗಿ ವಿಜಿ ಕುಮಾರ್ ಹಾಗೂ ವನಜಾಕ್ಷಿ ಇಬ್ಬರೂ ಮನೆಗೆ ಬೀಗ ಹಾಕಿಕೊಂಡು, ಕೀಯನ್ನು ಕಿಟಕಿಯ ಒಳಭಾಗದಲ್ಲಿಟ್ಟು ಹೋಗಿದ್ದರು. ಆ ವೇಳೆ ಅವರ ಪುತ್ರಿ ಮನೆಯಲ್ಲಿದ್ದರು. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಯಾವುದೇ ಸುಳಿವು ಲಭ್ಯ ವಾಗದಿದ್ದರಿಂದ ಪ್ರಕರಣ ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು.
ಅಂದು ರಾತ್ರಿ ಕಳ್ಳತನಕ್ಕಿಳಿದಿದ್ದ ಸೈಯದ್ ಶಾಹೀದ್ ಹಾಗೂ ಸೈಯದ್ ನವಾಬ್, ವಿಜಿ ಕುಮಾರ್ ಮನೆಯ ತೆರೆದ ಕಿಟಕಿಯಲ್ಲಿ ಕೈ ಹಾಕಿದಾಗ ಕೀ ಸಿಕ್ಕಿದೆ. ಇದರಿಂದ ಸುಲಭವಾಗಿ ಮನೆಯೊಳಗೆ ಪ್ರವೇ ಶಿಸಿ, ಮನೆಯನ್ನೆಲ್ಲಾ ಪರಿಶೀಲಿಸಿದಾಗ ಕೊಠಡಿಯಲ್ಲಿ ಬೀರುವಿನ ಬೀಗವೂ ಸಿಕ್ಕಿದ್ದ ರಿಂದ ಅಲ್ಲಿದ್ದ ಚಿನ್ನಾಭರಣವನ್ನು ದೋಚಿ ಕೊಂಡು, ಮತ್ತೆ ಬೀಗ ಹಾಕಿ, ಕೀಗಳು ಎಲ್ಲಿದ್ದವೋ ಅಲ್ಲಿಯೇ ಇಟ್ಟು, ಪರಾರಿ ಯಾಗಿದ್ದಾರೆ. ಕೇವಲ 20 ನಿಮಿಷದಲ್ಲೇ ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾಗಿ ಪೊಲೀ ಸರ ಬಳಿ ತಿಳಿಸಿದ್ದಾರೆ.

ಕಿಟಕಿಯಲ್ಲೇ ಎಗರಿಸಿದ್ದ: ಬನ್ನಿಮಂಟಪ `ಸಿ’ ಲೇಔಟ್, 4ನೇ ಮುಖ್ಯರಸ್ತೆಯ ಮೊಹ ಮದ್ ರೂಮನ್ ಖಾನ್ ಅವರ ಮನೆಯಲ್ಲಿ 2018ರ ನವಂಬರ್ 6ರಂದು ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳ ತನವಾಗಿತ್ತು. ಖದೀಮನೊಬ್ಬ ಕೊಂಡಿ ಅಳವಡಿಸಿದ್ದ ಪೈಪ್ ಅನ್ನು ಬಾಗಿಲು ತೆರೆ ದಿದ್ದ ಕಿಟಕಿಯಲ್ಲಿ ತೂರಿಸಿ, ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ನರಸಿಂಹರಾಜ ಠಾಣೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದರಾದರೂ ಸಿಸಿಟಿವಿ ದೃಶ್ಯಾವಳಿ ಸ್ಪಷ್ಟವಾಗಿರದ ಕಾರಣ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಅಂದು ಕೃತ್ಯ ನಡೆಸಿದ್ದು ಸೈಯದ್ ನವಾಬ್ ಎಂಬುದು ಈಗ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

20ಕ್ಕೂ ಹೆಚ್ಚು ಪ್ರಕರಣ: ಮೈಸೂರಿನ ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳು ಮೈಸೂರು, ಹುಬ್ಬಳ್ಳಿ, ತುಮಕೂರು, ಬೆಂಗಳೂರಿಗೆ ವಿಲೇವಾರಿ ಮಾಡಿದ್ದ 1 ಕೆ.ಜಿ. 439 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಅರ್ಧ ಕೆಜಿಯಷ್ಟು ಚಿನ್ನಾಭರಣ ವಶಪಡಿಸಿಕೊಳ್ಳಬೇಕಿದೆ. ಮೈಸೂರು ಸೇರಿದಂತೆ ವಿವಿಧೆಡೆ ಒಂದನೇ ಆರೋಪಿ ಲಿಂಗರಾಜು ಅಲಿಯಾಸ್ ಸೈಯದ್ ಶಾಹಿದ್ ವಿರುದ್ಧ 28 ಹಾಗೂ ಸೈಯದ್ ನವಾಬ್ ಅಲಿಯಾಸ್ ರಾಜು ವಿರುದ್ಧ 22 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.

ಎಸಿಪಿ ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಆರ್.ಜಗದೀಶ್, ಎಎಸ್‍ಐ ಗಳಾದ ಯು.ಉಮೇಶ್, ಡಿ.ಜಿ.ಚಂದ್ರೇಗೌಡ, ಅಲೆಕ್ಸಾಂಡರ್, ಸಿಬ್ಬಂದಿ ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮೀಕಾಂತ, ಎಂ.ಆರ್.ಗಣೇಶ್, ಯಾಕೂಬ್ ಷರೀಪ್, ಸಲೀಂ ಪಾಷ, ಶ್ರೀನಿವಾಸ ಪ್ರಸಾದ್, ಆನಂದ್, ಅನಿಲ್, ಚಂದ್ರಶೇಖರ್, ಸಿ.ಎಂ.ಮಂಜು, ಕುಮಾರ್ ಮಹಿಳಾ ಸಿಬ್ಬಂದಿ ರಾಜಶ್ರೀ, ಗೌತಮ್, ಸೋಮು ತಾಂತ್ರಿಕ ಕೋಶದ ಪೆÇಲೀಸ್ ಇನ್ಸ್‍ಪೆಕ್ಟರ್ ಟಿ.ಎಸ್.ಲೋಲಾಕ್ಷಿ, ಸಿಬ್ಬಂದಿ ಗುರುದೇವಾ ರಾಧ್ಯ, ಸಿ.ಎಂ.ಮಂಜು, ಶ್ಯಾಂ ಸುಂದರ್, ಪಿ.ಕುಮಾರ್ ಕಾರ್ಯಾಚರಣೆ ನಡೆಸಿ, ಜನರ ನೆಮ್ಮದಿ ಕೆಡಿಸಿದ್ದ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

Translate »