ಬೆಳಂದೂರು ಡಿ.ನೋಟಿಫಿಕೇಷನ್: ಬಿಎಸ್‍ವೈಗೆ ರಿಲೀಫ್
ಮೈಸೂರು

ಬೆಳಂದೂರು ಡಿ.ನೋಟಿಫಿಕೇಷನ್: ಬಿಎಸ್‍ವೈಗೆ ರಿಲೀಫ್

January 19, 2021

ಬೆಂಗಳೂರು, ಜ.18- ಬೆಳಂದೂರು ಡಿ.ನೋಟಿಫಿಕೇಷನ್ ಪ್ರಕರಣ ದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪನವರ ಪಾತ್ರವಿಲ್ಲವೆಂದು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾ ಲಯಕ್ಕೆ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯವೂ ದೂರುದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿದೆ.

Translate »