ಜೆಡಿಎಸ್ ಎಲ್ಲಾ ಹಂತದ ಸಮಿತಿಗಳ ವಿಸರ್ಜನೆ
ಮೈಸೂರು

ಜೆಡಿಎಸ್ ಎಲ್ಲಾ ಹಂತದ ಸಮಿತಿಗಳ ವಿಸರ್ಜನೆ

January 19, 2021

ಏಳು ವಿಭಾಗದಲ್ಲಿ ಉಸ್ತುವಾರಿ ಸಮಿತಿ ರಚನೆ
ಬೆಂಗಳೂರು, ಜ.18- ಜೆಡಿಎಸ್‍ನ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ವಿಸರ್ಜನೆಗೆ ತೀರ್ಮಾನ ಮಾಡಲಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಏಳು ವಿಭಾಗಗಳಲ್ಲಿ ಉಸ್ತುವಾರಿ ಸಮಿತಿಗಳ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದರು. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲಾ, ತಾಲೂಕು ಚುನಾವಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸಲಹೆ ಮಾಡಲಾಗಿದೆ. ಆಯಾ ಭಾಗದ ಜವಾಬ್ದಾರಿಯನ್ನು ಕೊಟ್ಟಿದ್ದೇವೆ. ಇಂದಿನ ಪ್ರಮುಖ ಸಭೆಗೆ 32 ಜನರನ್ನು ಕರೆದಿದ್ದೆವು. ಕೆಲವರು ಒಪ್ಪಿಗೆ ಪಡೆದು ಗೈರಾಗಿದ್ದಾರೆ. ಮೈಸೂರು, ಬೆಂಗಳೂರು, ಕೋಲಾರ- ಚಿಕ್ಕಬಳ್ಳಾಪುರ, ಕರಾವಳಿ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾ ಟಕ ವಿಭಾಗಗಳ ರಚನೆ ಮಾಡಲಾಗಿದೆ. ಎಲ್ಲಾ ತಂಡಗಳು ಆಯಾ ಜಿಲ್ಲೆಗಳಲ್ಲಿ ಜನರ ಪರ ಹೋರಾಟ ಮಾಡಬೇಕು. ನಿರಂತರವಾಗಿ ಸಭೆಗಳನ್ನು ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಗ್ರಾಪಂ ಚುನಾವಣೆಯಲ್ಲಿ ಯಾವ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ನಮ್ಮ ಪಕ್ಷದ ಅಸ್ತಿತ್ವ ಗಟ್ಟಿಯಾಗಿದೆ. ಬಿಜೆಪಿಯವರು ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ಗೆದ್ದಿದ್ದೇವೆ ಅಂತಿದ್ದಾರೆ. ಜಿಲ್ಲಾ, ತಾಲೂಕು ಪಂಚಾಯ್ತಿಗಳಲ್ಲಿ ಗೆದ್ದೇಬಿಟ್ಟಿದ್ದೇವೆ ಅಂತಿದ್ದಾರೆ. ಆದರೆ, ಅದೆಲ್ಲಾ ಆಗೋದಿಲ್ಲ. ಕೊರೊನಾ ಕಾರಣ ಪ್ರವಾಸ ಸಾಧ್ಯವಾಗ ಲಿಲ್ಲ. ಇದೇ ತಿಂಗಳ ಕೊನೆಯಲ್ಲಿ ಮೊದಲನೇ ಹಂತದ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.

`ಪಂಚರತ್ನ’ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇನೆ. ನನ್ನ ಯೋಜನೆಗಳನ್ನು ಬೇರೆ ಯವರು ಹೈಜಾಕ್ ಮಾಡಲು ಸಾಧ್ಯವಿಲ್ಲ.ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಕ್ಷೇತ್ರಗಳ ಜೊತೆಗೆ ಸಾಲ ರಹಿತ ರೈತನ ಬದುಕು ರೂಪಿಸುವುದೇ ನನ್ನ ಪಂಚರತ್ನ. ಯುಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ. ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವುದು. ಹದಿನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಕಾಪಿ ಮಾಡಿಲ್ಲ. ನನ್ನದೇ ಯೋಜನೆಗಳನ್ನು ಕೊಟ್ಟಿದ್ದೇನೆ ಎಂದರು. ಪ್ರಧಾನಿ ಮೋದಿಯವರ ಆತ್ಮನಿರ್ಭರ ನನ್ನ ಕಾರ್ಯಕ್ರಮ. ನನ್ನ ಪಕ್ಷಕ್ಕೆ ಅವಕಾಶ ಕೊಟ್ಟರೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ಜನರ ಮುಂದೆ ಹೋಗುತ್ತೇವೆ. ಸ್ವೀಕರಿಸುತ್ತಾರೋ ಇಲ್ಲವೋ ನೋಡೋಣ ಎಂದು ಹೇಳಿದರು.

ನಾನು ರಾಜಕೀಯಕ್ಕೆ ಬರುವ ಮೊದಲೇ ಖರೀದಿ ಮಾಡಿರುವ ಜಮೀನು ಇದೆ. ನಾನೇನು ಲ್ಯಾಂಡ್ ಡೆವಲಪ್‍ಮೆಂಟ್ ಮಾಡುತ್ತಿದ್ದೇನಾ? ನಾನೇನು ಸೈಟ್ ಮಾಡಿದ್ದೇನಾ? ಕಷ್ಟಪಟ್ಟು ರೈತನ ಕೆಲಸ ಮಾಡುತ್ತಿದ್ದೇನೆ. ಅಕ್ರಮ ಮಾಡಿದ್ದರೆ ಸರ್ಕಾರ ಇದೆಯಲ್ಲ ಕ್ರಮಕೈಗೊಳ್ಳುತ್ತದೆ ಬಿಡಿ. ಮೂವತ್ತು ವರ್ಷವಾದರೂ ಇನ್ನೂ ಜೀವಂತವಾಗಿ ಇಟ್ಟುಕೊಂಡಿ ದ್ದಾರೆ ಎಂದರು. ನಿನ್ನೆ ಗೃಹ ಸಚಿವ ಅಮಿತ್ ಶಾ ಭಾಷಣ ನೋಡಿ ನನಗೆ ನಗು ಬರುತ್ತಿತ್ತು. ಕೊಪ್ಪಳದಲ್ಲಿ ಆಟಿಕೆ ತಯಾರಿಕೆಗೆ ನಾನು ಯೋಜನೆ ತಂದಿದ್ದೆ. ಕಾಂಪಿಟ್ ವಿತ್ ಚೈನಾ ಎಂಬ ಯೋಜನೆಯಡಿ ಆಟಿಕೆ ತಯಾರಿಕೆ ಕೇಂದ್ರ ತಂದಿದ್ದು ನಾನು. ಆದರೆ ಬಿಜೆಪಿ ನಿನ್ನೆ ಅಡಿಗಲ್ಲು ಹಾಕಿದ್ದಾರೆ. ಸೌಜನ್ಯಕ್ಕೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಮಾನ ವೀಯತೆ ಇಲ್ಲದ ಸರ್ಕಾರ ಇದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

 

 

 

Translate »