ಮೈಸೂರು ಜಿಲ್ಲೆಯಲ್ಲಿ ಸೋಮವಾರ 35 ಮಂದಿಗೆ ಕೊರೊನಾ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಸೋಮವಾರ 35 ಮಂದಿಗೆ ಕೊರೊನಾ ಸೋಂಕು

January 19, 2021

ಮೈಸೂರು, ಜ.18(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 35 ಮಂದಿಗೆ ಕೊರೊನಾ ಸೋಂಕು ತಗುಲಿದೆ. 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 53,039ಕ್ಕೆ ಏರಿಕೆಯಾದರೆ, 51,773 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,022 ಮಂದಿ ಸಾವನ್ನಪ್ಪಿದ್ದು, 244 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿಂದು 435 ಮಂದಿಗೆ ಸೋಂಕು ತಗುಲಿದ್ದು, 973 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,32,432ಕ್ಕೆ ಏರಿಕೆಯಾಗಿದ್ದು, 9,12,205 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು 9 ಮಂದಿ ಸಾವನ್ನಪ್ಪಿದ್ದು, ಈವರೆಗೆ 12,175 ಮಂದಿ ಮೃತಪಟ್ಟಿದ್ದಾರೆ. 8033 ಮಂದಿ ಯಲ್ಲಿ ಸೋಂಕು ಸಕ್ರಿಯವಾಗಿದೆ. ಮೈಸೂರು 35, ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 193, ಬೀದರ್ 4, ಚಾ.ನಗರ 1, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 7, ಚಿತ್ರದುರ್ಗ 17, ದಕ್ಷಿಣಕನ್ನಡ 13, ದಾವಣಗೆರೆ 8, ಧಾರವಾಡ 6, ಗದಗ 1, ಹಾಸನ 7, ಕಲಬುರಗಿ 11, ಕೊಡಗು 14, ಕೋಲಾರ 16, ಕೊಪ್ಪಳ 1, ಮಂಡ್ಯ 5, ರಾಯಚೂರು 5, ರಾಮನಗರ 1, ಶಿವಮೊಗ್ಗ 15, ತುಮಕೂರು 26, ಉಡುಪಿ 1, ಉತ್ತರಕನ್ನಡ 7, ವಿಜಯಪುರ 2, ಯಾದಗಿರಿ 4 ಪ್ರಕರಣಗಳು ವರದಿಯಾಗಿವೆ.

Translate »