ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನಿಧಿ ಸಮರ್ಪಣಾ ಅಭಿಯಾನಕ್ಕೆ ಶಾಸಕ ಚಾಲನೆ
ಮೈಸೂರು

ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನಿಧಿ ಸಮರ್ಪಣಾ ಅಭಿಯಾನಕ್ಕೆ ಶಾಸಕ ಚಾಲನೆ

January 19, 2021

ಮೈಸೂರು, ಜ.18(ವೈಡಿಎಸ್)- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ `ಶ್ರೀರಾಮ ಜನ್ಮಭೂಮಿ ಟ್ರಸ್ಟ್’ ಹಮ್ಮಿಕೊಂಡಿರುವ `ನಿಧಿ ಸಮ ರ್ಪಣಾ ಅಭಿಯಾನ’ಕ್ಕೆ ಶಾಸಕ ಎಲ್. ನಾಗೇಂದ್ರ ಅವರು ಒಂಟಿಕೊಪ್ಪಲು ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಚಾಲನೆ ನೀಡಿದರು.

ಬಳಿಕ ಶಾಸಕ ಮಾತನಾಡಿ, ಎಲ್ಲ ಕಾರ್ಯಕರ್ತರು ಹಾಗೂ ಸಂಘ ಪರಿ ವಾರದವರು ಪ್ರಾಮಾಣಿಕವಾಗಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸಿ ಧನ ಸಹಾಯದ ಅಭಿಯಾನವನ್ನು ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿ ದರು. ಈ ವೇಳೆ ಆರ್‍ಎಸ್‍ಎಸ್‍ನ ಶಿವಪ್ಪ, ಪುನೀತ್, ಪಾಲಿಕೆ ಮಾಜಿ ಸದಸ್ಯ ಮೇಟಗಳ್ಳಿ ದೇವರಾಜ್, ಮುಖಂಡರಾದ ನರೇಂದ್ರಬಾಬು, ಚಿಕ್ಕವೆಂಕಟು, ಶ್ರೀನಾಥ್, ಶಿಂಧೆ, ರಾಜು, ಗೋಪಾಲ್, ವೇಣು, ದೇವರಾಜ್, ಮಧು, ಯಜಮಾನರಾದ ಸತೀಶ್, ಸೋಮಣ್ಣ ಮತ್ತಿತರರಿದ್ದರು.

 

Translate »