ಮೋದಿ-ಬಿಎಸ್‍ವೈ ಡಬಲ್ ಇಂಜಿನ್
ಮೈಸೂರು

ಮೋದಿ-ಬಿಎಸ್‍ವೈ ಡಬಲ್ ಇಂಜಿನ್

January 18, 2021

ಬೆಳಗಾವಿ, ಜ.17-ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷಗಳ ಕಾಲ ಬಿಜೆಪಿಯದ್ದೇ ಆಡಳಿತ. ಮುಂದಿನ ಐದು ವರ್ಷವೂ ಬಿಜೆಪಿ ಸರ್ಕಾರವೇ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ಹೇಳಿದರು.

ಬೆಳಗಾವಿಯ ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಜನತೆ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಡಬಲ್ ಇಂಜಿನ್‍ನಂತೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಆಟೋಚಾಲಕ ರಿಗೆ, ರೈತರಿಗೆ ಸಹಾಯಧನ ನೀಡಿ ನೆರವಿಗೆ ನಿಂತಿದ್ದಾರೆ ಎಂದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ಶ್ರಮ ಮತ್ತು ಒಗ್ಗಟ್ಟಿನಿಂದ ಬಿಜೆಪಿ ಶೇ.60ರಷ್ಟು ಗೆಲುವು ಸಾಧಿಸಿದೆ. ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಶೇ.75ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ವಿಧಾನಸಭೆ ಚುನಾ ವಣೆಯಲ್ಲೂ ನೀವು ಮತ ನೀಡಿ ನಮ್ಮನ್ನು ಗೆಲ್ಲಿಸಿದ್ದೀರಿ. ವಿರೋಧ ಪಕ್ಷದವರು ವಿರೋಧಿಸಿದ್ದರೂ ಕೆಲವೇ ತಿಂಗಳಿ ನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ದ್ದೇವೆ. 2014ರ ತನಕ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡು ತ್ತಿತ್ತು. ದೇಶದ ಸುರಕ್ಷತೆ ಯಾವ ರೀತಿ ಇತ್ತು ಎಂದು ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ವಿರುದ್ಧ
ಟೀಕೆ ಮಾಡಿದರು. 70 ವರ್ಷಗಳಿಂದ ಜೀವಂತವಾಗಿದ್ದ ಸಮಸ್ಯೆಗಳನ್ನು ಯಾರು ಸರಿ ಮಾಡಿರಲಿಲ್ಲ. ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಸಮಸ್ಯೆ ಬಗೆಹರಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಆದರೆ ಮೋದಿ ಸರ್ಕಾರ ಬಂದ ನಂತರ ಕಾಶ್ಮೀರ ಈಗ ಭಾರತದ ಅಂಗವಾಗಿದೆ. ಕಾಶ್ಮೀರವನ್ನು ನೆಹರು ಅವರಿಂದ ಮನಮೋಹನ ಸಿಂಗ್ ಅವರ ವರೆಗೆ ಯಾರು ಮುಟ್ಟುವ ಪ್ರಯತ್ನ ಮಾಡಿರಲಿಲ್ಲ ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಮುಂಬೈ ಕರ್ನಾಟಕ ಕನ್ನಡಿಗರು ಮತ್ತು ಮರಾಠಿಗರ ಬಾಂಧವ್ಯ ಭಾರತದ ಏಕತೆಯನ್ನ ತೋರಿಸುತ್ತದೆ. ವಿರೋಧ ಪಕ್ಷದವರು ವಿರೋಧಿಸಿದ್ದರೂ ಕೆಲವೇ ತಿಂಗಳಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ. 2014ರ ತನಕ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ದೇಶದ ಸುರಕ್ಷತೆ ಯಾವ ರೀತಿ ಇತ್ತು ಎಂದು ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದರು.

2014ರಿಂದ 2019ರವರೆಗೆ ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿತು. ಆ ಸಂದರ್ಭ ಪಾಕಿಸ್ತಾನ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಭಾವಿಸಿತ್ತು. ಆದರೆ ಆ ವೇಳೆ ಬಿಜೆಪಿ ಸರ್ಕಾರ ಬಂದಿತ್ತು. ನಾವು ಪಾಕಿಸ್ತಾನದ ಮನೆಗಳಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರತ್ಯುತ್ತರ ನೀಡಿದ್ದೇವೆ. ಮನೆ ಮನೆಗಳಿಗೆ ವಿದ್ಯುತ್, ನಿರಾಶ್ರಿತರಿಗೆ ಸೂರು ಕೊಡುವ ಯೋಜನೆಯನ್ನ ಮೋದಿ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರ ಮನೆಗೆ ಗ್ಯಾಸ್ ಮತ್ತು ವಿದ್ಯುತ್ ಯಾಕೆ ಸಿಗಲಿಲ್ಲ ಎಂದರೆ ಕಾಂಗ್ರೆಸ್‍ಗೆ ಗರೀಬ್ ಹಟಾವೋ ಬೇಕಿರಲಿಲ್ಲ. ಅವರಿಗೆ ಗರೀಬ್‍ರನ್ನು ಹಟಾವೋ ಮಾಡಬೇಕಾಗಿತ್ತು ಎಂದು ಕಾಂಗ್ರೆಸ್‍ನ್ನು ಮಾತಿನ ಮೂಲಕ ವ್ಯಂಗ್ಯವಾಡಿದರು. ಆತ್ಮನಿರ್ಭರ ಯೋಜನೆ ಮೂಲಕ ಮೋದಿಯವರು ಸ್ವದೇಶಿ ವಸ್ತುಗಳಿಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೂ ಬ್ರಾಂಡ್ ಬ್ಯಾಂಡ್ ಸೇವೆ ಒದಗಲಿದೆ. ಮೋದಿಯವರೊಂದಿಗೆ ನಾವು ಸರ್ಮರ್ಥವಾಗಿ ಕೊರೊನಾ ಸಂಕ್ರಾಮಿಕ ರೋಗವನ್ನು ನಿಭಾಯಿಸಿದ್ದೇವೆ. ಲಸಿಕೆಯ ಬಗ್ಗೆಯೂ ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ತಯಾರಾದ 2 ಲಸಿಕೆಗಳು ಸುರಕ್ಷಿತವಾಗಿವೆ ಎಲ್ಲರೂ ಶಿಸ್ತುಬದ್ಧವಾಗಿ ಲಸಿಕೆ ಪಡೆಯಿರಿ. ಕೊರೊನಾದಿಂದ ದೇಶ ಮುಕ್ತವಾಗಲಿ ಎಂದು ಮನವಿ ಮಾಡಿಕೊಂಡರು.

ಅತೃಪ್ತ ಶಾಸಕರ ವಿರುದ್ಧ ಶಾ ಗರಂ
ಬೆಂಗಳೂರು,ಜ.17-ಬಿಜೆಪಿಯಲ್ಲಿನ ಸಚಿವಾಕಾಂಕ್ಷಿಗಳು ಅಶಿಸ್ತು ಮತ್ತು ಸಾರ್ವಜನಿಕವಾಗಿ ಟೀಕೆ ಟಿಪ್ಪಣಿಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮೊದಲು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಸಚಿವ ಹುದ್ದೆ ವಂಚಿತ ಬಿಜೆಪಿ ನಾಯಕರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. 2 ದಿನಗಳ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಮಾತನಾಡಿ ದರು. ಸಭೆಯಲ್ಲಿ ಅಮಿತ್ ಶಾ ಅವರು ಯಾವೊಬ್ಬ ನಾಯಕರ ಹೆಸರನ್ನು ಪ್ರಸ್ತಾಪ ಮಾಡದಿದ್ದರೂ ಕೂಡ, ಸಚಿವ ಹುದ್ದೆ ವಂಚಿತರು ಮಾಧ್ಯಮಗಳ ಮುಂದೆ ಸಿಎಂ ಯಡಿಯೂರಪ್ಪನವರ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವುದಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಕ್ಷದಲ್ಲಿ ನಾಯಕರು ಅಶಿಸ್ತಿನ ಕೆಲಸ ಮಾಡುವುದನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದರು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕರ್ನಾಟಕ ಉಸ್ತುವಾರಿ ಅರುಣ್‍ಸಿಂಗ್, ಸಿಎಂ ಯಡಿಯೂರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ, ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಷಿ, ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಅರುಣ್‍ಕುಮಾರ್, ಸಚಿವರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ ಭಾಗವಹಿಸಿದ್ದರು.

ಕುಟುಂಬ ರಾಜಕಾರಣ, ಅಧಿಕಾರದ ವ್ಯಾಮೋಹ  ಬಿಟ್ಟು ನಿಷ್ಠೆಯಿಂದ ಕೆಲಸ ಮಾಡಿ: ಅಮಿತ್ ಶಾ
ಬೆಳಗಾವಿ: ಕುಟುಂಬ ರಾಜಕಾರಣದಿಂದಲೇ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ನಮ್ಮ ಪಕ್ಷದ ಸಚಿವರು, ಶಾಸಕರು ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಅಧಿಕಾರದ ವ್ಯಾಮೋಹ ಬಿಟ್ಟು ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಜನಸೇವಕ ಸಮಾರಂಭದ ಬಳಿಕ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಚಿಕ್ಕೋಡಿ ಬಿಜೆಪಿ ಸಂಘಟನಾತ್ಮಕ ಜಿಲ್ಲೆ ಕಾರ್ಯಕರ್ತರ ಸಭೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವ ದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರಿಗೆ ಮಾತನಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಈ ವೇಳೆ ಅನೇಕ ಪ್ರಮುಖ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹೇಳಿದರು. ಈ ವೇಳೆಯಲ್ಲಿ ದೂರು ನೀಡಲು ಮುಂದಾದ ಶಾಸಕರಿಗೆ ತಮ್ಮ ಸಮಸ್ಯೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಇತ್ಯರ್ಥ ಮಾಡಿಕೊಳ್ಳು ವಂತೆ ಸೂಚನೆ ನೀಡಿದರು. ಸಮಾವೇಶಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಇತ್ತೀಚೆಗೆ ನಿಧನರಾದ ದಿ. ಸುರೇಶ ಅಂಗಡಿ ನಿವಾಸಕ್ಕೆ ಭೇಟಿ ನೀಡಿದರು. ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 15 ನಿಮಿಷಕ್ಕೂ ಅಂಗಡಿ ನಿವಾಸದಲ್ಲಿ ಇದ್ದ ಷಾ, ಅಂಗಡಿ ಅನಾರೋಗ್ಯದ ಮಾಹಿತಿ ಪಡೆದರು. ಈ ವೇಳೆಯಲ್ಲಿ ದಿ.ಸುರೇಶ ಅಂಗಡಿ ಪತ್ನಿ ಮಂಗಳಾ, ಡಾ.ಸ್ಪೂರ್ತಿ ಪಾಟೀಲ್, ರಾಹುಲ್ ಪಾಟೀಲ್, ಶ್ರದ್ಧಾ ಶೆಟ್ಟರ್, ಸಂಕಲ್ಪ ಶೆಟ್ಟರ್ ಇದ್ದರು. ಲೋಕಸಭಾ ಉಪಚುನಾವಣೆ ಟಿಕೆಟ್ ಬಗ್ಗೆ ಎಲ್ಲವೂ ಚರ್ಚೆ ಆಗಲಿಲ್ಲ. ನಂತರ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಮನೆಗೆ ಭೇಟಿ ನೀಡಿದರು. ರಾಜು ಚಿಕ್ಕನಗೌಡರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

 

Translate »