ಬೆಂಗಳೂರು ಮೂರನೇ ಶ್ರೀಮಂತರ ತವರು
ಮೈಸೂರು

ಬೆಂಗಳೂರು ಮೂರನೇ ಶ್ರೀಮಂತರ ತವರು

September 29, 2018

ಮುಂಬೈ: ಸಿಲಿಕಾನ್ ಸಿಟಿ ಬೆಂಗಳೂರು ಅತಿ ಹೆಚ್ಚು ಶ್ರೀಮಂತರು ವಾಸವಾಗಿರುವ ದೇಶದ ಮೂರನೇ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ.

ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2018 ಪ್ರಕಾರ ಅತಿ ಹೆಚ್ಚು ಶ್ರೀಮಂತರು ವಾಸವಾಗಿರುವ ಭಾರತದ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನ ಪಡೆದಿದ್ದು, ದೆಹಲಿ ಎರಡನೇ ಸ್ಥಾನ ಪಡೆದಿದೆ.

ಮೊದಲ ಸ್ಥಾನದಲ್ಲಿರುವ ಮುಂಬೈನಲ್ಲಿ 233 ಮಂದಿ ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯರಿದ್ದು, ದೆಹಲಿಯಲ್ಲಿ 163 ಹಾಗೂ ಬೆಂಗಳೂರಿನ 70 ವ್ಯಕ್ತಿಗಳ ಆಸ್ತಿಯ ನಿವ್ವಳ ಮೌಲ್ಯ ಕನಿಷ್ಠ 1,000 ಕೋಟಿ ರೂಪಾಯಿ ಇದೆ. ಭಾರತದ ಉದ್ಯಮ ವಲಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವವರ ಪಟ್ಟಿ ಡಬಲ್ ಆಗಿದೆ. 2016ರಲ್ಲಿ 339 ಇದ್ದ ಶ್ರೀಮಂತರ ಸಂಖ್ಯೆ ಈಗ 831ಕ್ಕೆ ಏರಿಕೆಯಾಗಿದೆ ಎಂದು ಹ್ಯುರುನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಅವರು ಹೇಳಿದ್ದಾರೆ. 3 ಲಕ್ಷ 71 ಸಾವಿರ ಕೋಟಿ ರೂ. ಆಸ್ತಿಯ ಒಡೆಯ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸತತ ಏಳನೆ ವರ್ಷವೂ ದೇಶದ ಅತ್ಯಂತ ಶ್ರೀಮಂತ ಸ್ಥಾನದಲ್ಲಿದ್ದಾರೆ.

Translate »