ಮೈಸೂರಲ್ಲಿ ಸೆ.30ರಿಂದ 2 ದಿನ ವಿಂಟೇಜ್ ಕಾರ್‍ಗಳ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಸೆ.30ರಿಂದ 2 ದಿನ ವಿಂಟೇಜ್ ಕಾರ್‍ಗಳ ಪ್ರದರ್ಶನ

September 29, 2018

ಮೈಸೂರು:  ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಸೆ.30 ರಂದು ಬೆಂಗಳೂರಿನಿಂದ ಮೈಸೂರಿಗೆ ವಿಂಟೇಜ್ ಕಾರ್ ರ್ಯಾಲಿ ಏರ್ಪಡಿಸಿದ್ದು, ಅಂದು ಸಂಜೆ ಮೈಸೂರಿನ ವಿವಿಧ ರಸ್ತೆ ಗಳಲ್ಲಿ ಸಂಚರಿಸಿ, ನಂತರ ಮೈಸೂರು ಅರಮನೆ ಮುಂಭಾಗ ಸಾರ್ವಜನಿಕರು ಈ ಹಳೆ ಕಾರುಗಳನ್ನು ವೀಕ್ಷಿಸಬಹುದಾ ಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ ಹಾಗೂ ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಂಸ್ಥೆಗಳ ಸಂಯುಕ್ತಾಶ್ರಯ ದಲ್ಲಿ ಈ ರ್ಯಾಲಿ ನಡೆಸಲಾಗುತ್ತಿದ್ದು, ಸೆ.30 ರಂದು ಬೆಳಿಗ್ಗೆ 8ಕ್ಕೆ ಬೆಂಗಳೂರಿನ ವಿಧಾನ ಸೌಧದ ಮುಂಭಾಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿ ದ್ದಾರೆ. ಅಂದು ಮಧ್ಯಾಹ್ನ ವಿಂಟೇಜ್ ಕಾರುಗಳ ರ್ಯಾಲಿ ಮೈಸೂರು ತಲುಪಲಿದೆ. ರ್ಯಾಲಿಯಲ್ಲಿ 1925ರಿಂದ 1975ರವರೆಗೆ ತಯಾರಾಗಿರುವ ವಿವಿಧ ಕಂಪನಿಗಳ 50 ಕಾರ್‍ಗಳು ಪಾಲ್ಗೊಳ್ಳುತ್ತಿವೆ. ಇಂಗ್ಲೆಂಡ್, ಪ್ರಾನ್ಸ್, ಶ್ರೀಲಂಕಾದಿಂದ 14 ಕಾರ್, ಭಾರತದ ವಿವಿಧ ರಾಜ್ಯಗಳಿಂದ 22 ಕಾರ್, ಕರ್ನಾ ಟಕದಿಂದ 16 ವಿಂಟೇಜ್ ಕಾರುಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿವೆ ಎಂದರು.

ಸೆ.30ರಂದು ಸಂಜೆ 4.15ಕ್ಕೆ ಲಲಿತ ಮಹಲ್ ಪ್ಯಾಲೇಸ್ ಆವರಣದಿಂದ ಹೊರ ಡಲಿರುವ ವಿಂಟೇಜ್ ಕಾರುಗಳು, ಮಾಲ್ ಆಫ್ ಮೈಸೂರು, ಜೆಎಸ್‍ಎಸ್ ಆಸ್ಪತ್ರೆ, ಅಗ್ರಹಾರ, ಸಿದ್ದಪ್ಪ ವೃತ್ತ, ಆರ್‍ಟಿಒ ವೃತ್ತಕ್ಕೆ ಬಂದು ಜೆಎಲ್‍ಬಿ ರಸ್ತೆಯಲ್ಲಿ ಎಡಕ್ಕೆ ತಿರುಗಿ ಅದ್ವೈತ್ ಹುಂಡೈ ಷೋ ರೂಮ್‍ಗೆ ತೆರಳಲಿವೆ. ಈ ಷೋ ರೂಮ್‍ನಲ್ಲಿ ವಿಂಟೇಜ್ ಕಾರಿ ನಲ್ಲಿ ಬಂದವರಿಗೆ ಚಹ ವ್ಯವಸ್ಥೆ ಮಾಡ ಲಾಗಿದೆ. 10 ನಿಮಿಷಗಳ ವಿರಾಮದ ನಂತರ ಮತ್ತೆ ಆರ್‍ಟಿಓ ವೃತ್ತಕ್ಕೆ ಬಂದು ನ್ಯಾಯಾಲಯ ಮುಂಭಾಗದಿಂದ ಬುಲೇ ವಾರ್ಡ್ ರಸ್ತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಬಳಸಿಕೊಂಡು ಮೆಟ್ರೊಪೋಲ್ ವೃತ್ತ , ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆಯ ಮೂಲಕ ಸಯ್ಯಾಜಿರಾವ್ ರಸ್ತೆಯಿಂದ ಕೆ.ಆರ್.ವೃತ್ತಕ್ಕೆ ಬಂದು ಪುರಭವನ ತಲುಪಲಿವೆ. ನಂತರ ಹಾರ್ಡಿಂಜ್ ವೃತ್ತಕ್ಕೆ ಬಂದು ನೀಲಗಿರಿ ರಸ್ತೆಯಲ್ಲಿ ಸಾಗಿ ಗನ್‍ಹೌಸ್ ವೃತ್ತದಿಂದ ಮತ್ತೆ ಹಾರ್ಡಿಂಗ್ ರಸ್ತೆ ಕಡೆ ಸಾಗಿ, ಜಯಮಾರ್ತಾಂಡ ದ್ವಾರದಿಂದ ಅರಮನೆ ಆವರಣ ಪ್ರವೇಶಿಸಲಿವೆ. ಸಂಜೆ 5.45ರಿಂದ 7.15ರವರೆಗೆ ಅರಮನೆಯ ಆವರಣದಲ್ಲಿ ನಿಂತಿರುತ್ತವೆ. ಅರಮನೆಯ ಲೈಟಿಂಗ್‍ನಲ್ಲಿ ಸಾರ್ವಜನಿಕರು ಹಳೆಯ ಕಾರುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಅಂದು ರಾತ್ರಿ 7.30ಕ್ಕೆ ಅರಮನೆಯಿಂದ ಲಲಿತಮಹಲ್ ಪ್ಯಾಲೇಸ್ ಆವರಣವನ್ನು ತಲುಪಿ, ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು. ಮರುದಿನ ಅ.1ರಂದು ಬೆಳಗ್ಗೆ 7.15ಕ್ಕೆ ಲಲಿತಮಹಲ್‍ನಿಂದ ಚಾಮುಂಡಿಬೆಟ್ಟಕ್ಕೆ ತೆರಳಲಿದೆ. ದೇವಿಯ ದರ್ಶನ ಪಡೆದ ನಂತರ ಮತ್ತೆ ಮೈಸೂರಿನತ್ತ ಆಗಮಿಸಲಿವೆ.

ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ದಸರಾ ಆನೆಗಳು ನಡೆಸುವ ತಾಲೀಮಿನಲ್ಲಿ ಕಾರುಗಳು ಪಾಲ್ಗೊಳ್ಳಲಿವೆ. ಆನೆಗಳ ಮುಂದೆ 6 ಮತ್ತು ಆನೆಗಳ ಹಿಂದೆ 6 ಕಾರುಗಳು ತಾಲೀಮಿನಲ್ಲಿ ಸಂಚರಿಸಿ, ಮೆರಗು ನೀಡಲಿವೆ. ಅಂದು ಮಧ್ಯಾಹ್ನ ವಿಂಟೇಜ್ ಕಾರ್ ರ್ಯಾಲಿಯಲ್ಲಿ ಬಂದಿ ರುವವರನ್ನು ಬಸ್‍ನಲ್ಲಿ ಕೆಆರ್‍ಎಸ್‍ಗೆ ಕರೆದೊಯ್ಯಲಾಗುತ್ತದೆ. ಮೈಸೂರು ನಗರದಲ್ಲಿ ವಿಂಟೇಜ್ ಕಾರುಗಳು ನಿಧಾನಗತಿಯಲ್ಲಿ ಸಾಗುತ್ತವೆ. ಇದರಿಂದ ಸಾರ್ವಜನಿಕರು ಇವುಗಳ ವೀಕ್ಷಿಸುವುದರೊಂದಿಗೆ ಫೋಟೊ ಹಾಗೂ ವಿಡಿಯೋ ಮಾಡಿ ಕೊಳ್ಳಬಹುದಾಗಿದೆ ಎಂದು ಡಿಸಿ ವಿವರಿಸಿದರು.

Translate »