ನಾಗಮಂಗಲ, ಸೆ.27(ಮಹೇಶ್)- ಪಟ್ಟ ಣದ ಟಿ.ಬಿ ಬಡಾವಣೆಯಿಂದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರವೇ ಕಾರ್ಯಕರ್ತರು, ಸಿಪಿಎಂ ಹಾಗೂ ಹಲವು ಸಂಘ ಸಂಸ್ಥೆಗಳು ಮೆರವಣಿಗೆ ಯಲ್ಲಿ ಸಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಪಟ್ಟಣದ ಮರಿಯಪ್ಪ ವೃತ್ತದಲ್ಲಿ ಕೆಲ ಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಕೃಷಿ ಕಾಯ್ದೆಯನ್ನು ವಿರೋಧಿಸಿ ಕರೆ ನೀಡಲಾಗಿದ್ದ ಭಾರತ ಬಂದ್‍ಗೆ ನಾಗ ಮಂಗಲದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾ ಗಿದ್ದು, ಎಂದಿನಂತೆ ಜನಜೀವನ, ಸಾರಿಗೆ ಸಂಚಾರ, ಅಂಗಡಿಗಳು, ಹೋಟೆಲ್, ಬಸ್, ಆಟೋ ಸಂಚಾರ ಸರಾಗವಾಗಿತ್ತು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ರಂಗೇಗೌಡ, ಎಪಿ ಎಂಸಿ ಸೇರಿ ರೈತಾಪಿ ವರ್ಗಕ್ಕೆ ಮಾರಕವಾ ಗುವ ಕಾಯ್ದೆಗಳನ್ನು ಕೂಡಲೇ ರದ್ದು ಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನ ಗಳಲ್ಲಿ ಉಗ್ರ ಹೋರಾಟ ಮಾಡಲಾಗು ವುದು. ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಪ್ರತಿನಿತ್ಯ ಬಳಸುವ ಆಹಾರ ಪದಾರ್ಥ ಗಳ ಬೆಲೆ ಏರಿಕೆ ರೈತರನ್ನು ಬೀದಿಗೆ ಬರು ವಂತಾಗಿದ್ದು, ಜನಸಾಮಾನ್ಯರು ಬದು ಕುವುದೇ ಕಷ್ಟವಾಗಿದೆ ಎಂದರು.
ಇಷ್ಟು ದಿನ ಶಾಂತಿಯುತವಾಗಿ ಸತ್ಯಾ ಗ್ರಹ ಮಾಡಿದ್ದರೂ ಸರ್ಕಾರ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇದುವರೆಗೂ 11 ಬಾರಿ ಸರ್ಕಾರ ಮಾತುಕತೆ ನಡೆಸಿದ್ದರೂ ಯಾವುದೇ ತೀರ್ಮಾನ ಆಗಿಲ್ಲ ಎಂದರು.
ಮುಂಜಾಗೃತ ಕ್ರಮವಾಗಿ ಡಿವೈಎಸ್ಪಿ ನವೀನ್ ಕುಮಾರ್, ಪಟ್ಟಣ ಪೆÇಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ರವಿಶಂಕರ್ ಹಾಗೂ ಬೆಳ್ಳೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ರಾಮ ಚಂದ್ರ ಹಾಗೂ ಸಿಬ್ಬಂದಿಗಳು ಬಂದೋ ಬಸ್ತ್ ಏರ್ಪಡಿಸಿದ್ದರು.
ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಹರಳ ಕೆರೆ ಗೋಪಾಲಕೃಷ್ಣ, ಪ್ರಧಾನ ಕಾರ್ಯ ದರ್ಶಿ ಸತೀಶ್ ದಡಗ, ಸಹ ಕಾರ್ಯ ದರ್ಶಿ ಶ್ರೀಕಂಠೇಗೌಡ ಹಾಗೂ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.