ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

September 28, 2021

ಶ್ರೀರಂಗಪಟ್ಟಣ, ಸೆ.27(ವಿನಯ್ ಕಾರೇಕುರ)- ತಾಲೂಕಿನಲ್ಲಿ ಭಾರತ್ ಬಂದ್ ಬಿಸಿ ಜೋರಾ ಗಿತ್ತು. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿ ತಡೆದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಮತ್ತು ಬೆಂಗಳೂರು ರಾಜ್ಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ವಿವಿಧ ಕನ್ನಡ ಪರ ಹಾಗೂ ಪ್ರಗತಿಪರ ಸಂಘ ಟನೆಗಳ ಒಕ್ಕೂಟದೊಂದಿಗೆ ರೈತ ಸಂಘ ಮುಖಂಡರು ಜಮಾಯಿಸಿ ಕೇಂದ್ರ ಸರ್ಕಾ ರದ ಧೋರಣೆಯನ್ನು ಖಂಡಿಸಿದರು.

ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮಂಜೇಶ್ ಗೌಡ, ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಮುಕುಂದ ನೇತೃತ್ವದಲ್ಲಿ ಪ್ರತಿಭಟನೆಗೆ ಚಾಲನೆ ನೀಡಿದರು.

ಸುಮಾರು 30 ನಿಮಿಷಗಳ ಕಾಲ ರಸ್ತೆ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಿರಂತರ ಘೋಷಣೆ ಕೂಗುತ್ತಾ. ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿ ದರು. ಈ ವೇಳೆ ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಮುನ್ನೆಚ್ಚರಿಕೆಯಾಗಿ ನೂರಾರು ಪೆÇಲೀಸರು ಭದ್ರತೆಯೊಂದಿಗೆ ಪ್ರತಿಭಟನಾ ಕಾರರ ಸುತ್ತಲೂ ಆವರಿಸಿದರು ನಂತರ ಮಾತನಾಡಿದ ತಾಲೂಕು ರೈತ ಸಂಘದ ಮಂಜೇಶ್ ಗೌಡ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ರೈತಾಪಿ ವರ್ಗಕ್ಕೆ ಮಾರಕವಾಗುವ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಶತಸಿದ್ಧ. ಈಗಲೇ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ದಿನ ಪದಾರ್ಥಗಳ ಬೆಲೆ ಇಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ ಕಾಂಗ್ರೆಸ್ ಮುಖಂಡ ದರ್ಶನ್ ಲಿಂಗರಾಜು, ದಲಿತ ಸಂಘಟನೆಯ ಕುಬೇರಪ್ಪ, ವಕೀಲ ವೆಂಕಟೇಶ್, ಕರವೇ ಸ್ವಾಮೀಗೌಡ, ಮಹದೇವಸ್ವಾಮಿ ನಗುವನಹಳ್ಳಿ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಮೋಹನ, ರವಿ ಚಂದ್ರ, ಕೆ.ಟಿ.ರಂಗಯ್ಯ, ಕೆಂಪೇಗೌಡ ಯುವ ಒಕ್ಕಲಿಗ ವೇದಿಕೆ ಮಹೇಶ್, ಪುಟ್ಟೇಗೌಡ, ರೈತ ಸಂಘ ಹಿರಿಯ ಮುಖಂಡರಾದ ಪಾಂಡು, ನಾಗೇಂದ್ರಸ್ವಾಮಿ, ಮೇಳಾಪುರ ಸ್ವಾಮೀ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »