ವಿಜಯ ವಿಠಲದಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ
ಮೈಸೂರು

ವಿಜಯ ವಿಠಲದಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

September 16, 2018

ಮೈಸೂರು: ವಿಜಯ ವಿಠಲ ಕಾಲೇಜಿನಲ್ಲಿ ಸರ್. ಎಂ.ವಿಶ್ವೇಶ್ವರಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏಖಇಆಐ ಪ್ರಾಜೆಕ್ಟ್ ಇಂಜಿನಿ ಯರ್ ಡಿ.ಕೆ. ದಿನೇಶ್‍ಕುಮಾರ್ ಮಾತ ನಾಡಿ, “ಭಾರತದ ಅಭಿವೃದ್ಧಿಗಾಗಿ ಶ್ರಮಿ ಸಿದ ಅತ್ಯಂತ ಸರಳ ಹಾಗೂ ಸಜ್ಜ ನಿಕೆಯ ಮೇರು ವ್ಯಕ್ತಿತ್ವದ ಮೋಕ್ಷಗುಂಡಂ ವಿಶ್ವೇ ಶ್ವರಯ್ಯನವರ ಜನ್ಮದಿನವನ್ನು ಅರ್ಥ ಪೂರ್ಣವಾಗಿ ನಾವು ಆಚರಿಸಬೇಕು. ‘ಭಾರತ ರತ್ನ’ ಸರ್ ಎಂ.ವಿ ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಅವರ ವ್ಯಕ್ತಿತ್ವ ಮತ್ತು ಜೀವನಶೈಲಿಯನ್ನು ವಿದ್ಯಾರ್ಥಿ ಗಳು ತಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡಲ್ಲಿ ಶಕ್ತಿಶಾಲಿ ಭಾರತದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇ ಜಿನ ಪ್ರಾಂಶುಪಾಲ ಹೆಚ್.ಸತ್ಯಪ್ರಸಾದ್, ಸರ್ ಎಂ.ವಿ ಅವರ ಶಿಸ್ತು ಮತ್ತು ಸರ ಳತೆಯನ್ನು ವಿದ್ಯಾರ್ಥಿಗಳು ತಮ್ಮ ಬದು ಕಲ್ಲಿ ಅನುಸರಿಸಬೇಕು. ಅವರ ಜೀವನ ಶೈಲಿಯಿಂದ ವಿದ್ಯಾರ್ಜನೆಗಾಗಿ ಅವರು ಶ್ರಮಿಸಿದ್ದನ್ನು ಮರೆಯುವಂತಿಲ್ಲ. ಇಂತಹ ಸಾಧಕರನ್ನು ಮತ್ತು ದೇಶದ ಔನ್ನತ್ಯಕ್ಕಾಗಿ ಶ್ರಮಿಸಿದ ಅವರ ಮೌಲ್ಯಗಳನ್ನು ಅರಿತು ಅದನ್ನು ಪಾಲಿಸಬೇಕು. ಬದುಕಿನಲ್ಲಿ ಯಾವುದೇ ಸಮಸ್ಯೆಗಳಾಗಲೀ, ಸುಖವಾಗಲೀ ಶಾಶ್ವತವಲ್ಲ. ಅಸಾಧ್ಯವಾದುದನ್ನು ಸಾಧಿಸು ವಲ್ಲಿ ನಮ್ಮ ಛಲ ನಿರಂತರವಾಗಿರಬೇಕು, ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗಿ ಗುರಿ ತಲುಪಬೇಕು ಎಂದರು. ಉಪ ನ್ಯಾಸಕಿಯರಾದ ಶ್ರೀಮತಿ ಕೆ.ಎಸ್. ಶೈಲಜಾ, ಶ್ರೀಮತಿ ಪಿ.ಆರ್.ಸುಷ್ಮಾ ಮತ್ತು ಶ್ರೀಮತಿ ಅನಿತಾ ಎನ್. ಉಪಸ್ಥಿತರಿದ್ದರು.

Translate »