ಸರ್.ಎಂ.ವಿಗೆ ಗೂಗಲ್ ಡೂಡಲ್ ಗೌರವ
ಮೈಸೂರು

ಸರ್.ಎಂ.ವಿಗೆ ಗೂಗಲ್ ಡೂಡಲ್ ಗೌರವ

September 16, 2018

ನವದೆಹಲಿ:  ಸರ್.ಎಂ.ವಿಶ್ವೇಶ್ವರಯ್ಯ ಅವರ 158ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ತನ್ನ ಡೂಡಲ್ ಅನ್ನು ಸರ್.ಎಂ.ವಿ ಅವರಿಗೆ ಅರ್ಪಿಸುವ ಮೂಲಕ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಮಹಾನ್ ಚೇತನಕ್ಕೆ ಗೌರವ ತೋರಿದೆ.

ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದ್ದ ವಿಶ್ವೇಶ್ವರಯ್ಯ ಅವರನ್ನು ತಂತ್ರಜ್ಞಾನಿಗಳ ಪಿತಾಮಹ ಎಂದೇ ಕರೆಯಲಾಗುತ್ತದೆ.

1924 ರಲ್ಲಿ ದೇಶದಲ್ಲಿಯೇ ಅತೀ ದೊಡ್ಡ ಜಲಾಶಯ ನಿರ್ಮಾಣದ ಯೋಜನೆ ರೂಪಿಸಿದ ಸರ್.ಎಂ.ವಿ ಅವರ ಕೊಡುಗೆಯಾದ ಕನ್ನಂಬಾಡಿ ಅಣೆಕಟ್ಟು ಈಗಲೂ ಹಲವು ನಗರಗಳಿಗೆ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ ಈ ಭಾಗದ ರೈತರ ಜೀವನಾಡಿಯಾಗಿದೆ.

ಗೂಗಲ್ ತನ್ನ ಈ ದಿನದ ಡೂಡಲ್‍ನಲ್ಲಿ ಸರ್.ಎಂ.ವಿ ಅವರ ಬಣ್ಣದ ರೇಖಾ ಚಿತ್ರದ ಜೊತೆಗೆ ಹಿಂಬದಿಯಲ್ಲಿ ಅಣೆಕಟ್ಟನ್ನು ಚಿತ್ರಿಸಲಾಗಿದೆ. ಈ ಹಿಂದೆ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಗೋಗಲ್ ತನ್ನ ಡೂಡಲ್ ಅನ್ನು ವಿಶ್ವಮಾನವನಿಗೆ ಅರ್ಪಿಸಿದ್ದನ್ನು ಇದೇ ಸಮಯದಲ್ಲಿ ಸ್ಮರಿಸಬಹುದು.

Translate »