ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಪತ್ನಿ  ಸೇರಿ ಮೂವರಿಗೆ ಜೀವಾವಧಿ ಜೈಲು ಶಿಕ್ಷೆ
News

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಪತ್ನಿ ಸೇರಿ ಮೂವರಿಗೆ ಜೀವಾವಧಿ ಜೈಲು ಶಿಕ್ಷೆ

June 10, 2021

ಉಡುಪಿ,ಜೂ.9-ಉಡುಪಿಯ ಇಂದ್ರಾಳಿಯ ಎನ್‍ಆರ್‍ಐ ಉದ್ಯಮಿ ಭಾಸ್ಕರ್ ಶೆಟ್ಟಿ (52) ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೃತರ ಪತ್ನಿ ಮತ್ತು ಮಗ ಸೇರಿದಂತೆ ಮೂವರನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳ ವಾರ ಅಪರಾಧಿಗಳೆಂದು ತೀರ್ಪು ನೀಡಿದೆ. ಅಲ್ಲದೆ ಮೂವರಿಗೂ ಜೀವಿ ತಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ನಂದಳಿಕೆ ಮೂಲದ ಜ್ಯೋತಿಷಿ ನಿರಂಜನ್ ಭಟ್ ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪ ಹೊತ್ತಿದ್ದ ರಾಘವೇಂದ್ರ ಭಟ್ ಅವ ರನ್ನು ನ್ಯಾಯಾಲಯ ಖುಲಾಸೆ ಮಾಡಿದೆ. ಪ್ರಸ್ತುತ, ಮುಖ್ಯ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಹೊರಗಿದ್ದಾರೆ. ಮಗ ನವನೀತ್ ಶೆಟ್ಟಿ, ನಿರಂಜನ್ ಭಟ್ ಅವರನ್ನು ಬೆಂಗಳೂರು ಜೈಲಿನಲ್ಲಿ ಇರಿಸಲಾಗಿದೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪ ವಿದ್ದ ರಂಜನ್ ಭಟ್ ಅವರ ತಂದೆ ಶ್ರೀನಿವಾಸ್ ಭಟ್ ವಿಚಾರಣೆಯ ಬಾಕಿ ಇರುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ರಾಘವೇಂದ್ರ ಅವರಿಗೆ ಜಾಮೀನು ನೀಡಲಾಗಿದೆ.

ಪ್ರಕರಣದ ಹಿನ್ನೆಲೆ: ಜುಲೈ 28, 2016ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾಸ್ಕರ್ ಶೆಟ್ಟಿ ಅವರನ್ನು ಇಂದ್ರಾಳಿಯ ಅವರ ಮನೆಯಲ್ಲಿ ಕೊಲೆ ಮಾಡಲಾಯಿತು. ಬಳಿಕ ಅವರ ದೇಹವನ್ನು ಹೋಮದ ಬೆಂಕಿಯಲ್ಲಿ ಸುಟ್ಟುಹಾಕಲಾಗಿದೆ ಎಂದು ವರದಿ ಯಾಗಿದೆ ಮತ್ತು ಪೆÇಲೀಸರಿಗೆ ಅದರ ಪುರಾವೆಗಳು ದೊರೆತಿವೆ. ಜುಲೈ 31 ರಂದು ಭಾಸ್ಕರ್ ಶೆಟ್ಟಿಯ ತಾಯಿ ಮಣಿಪಾಲ್ ಪೆÇಲೀಸ್ ಠಾಣೆಯಲ್ಲಿ ತನ್ನ ಮಗ ಕಾಣೆಯಾದ ದೂರನ್ನು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೆÇಲೀಸರಿಗೆ ಭಾಸ್ಕರ್ ಶೆಟ್ಟಿ ಕೊಲೆ ಆಗಿರುವುದು ತಿಳಿದುಬಂದಿದೆ. ಆ.7ರಂದು ರಾಜೇಶ್ವರಿ ಮತ್ತು ನವನೀತ್ ಅವರನ್ನು ಬಂಧಿಸಲಾಯಿತು. ನಿರಂಜನ್ ಭಟ್ ಅವರನ್ನು ಮರುದಿನ ಬಂಧಿಸಲಾಗಿತ್ತು.

Translate »