ಮೇಯರ್ ಚುನಾವಣೆ; ಬಿಜೆಪಿ ಪೂರ್ವಭಾವಿ ಸಭೆ
ಮೈಸೂರು

ಮೇಯರ್ ಚುನಾವಣೆ; ಬಿಜೆಪಿ ಪೂರ್ವಭಾವಿ ಸಭೆ

June 10, 2021

ಮೈಸೂರು, ಜೂ.9(ಎಸ್‍ಪಿಎನ್)- ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಂಬಂಧ ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಎಂ.ವಿ.ರವಿ ಶಂಕರ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು ಮತ್ತಿತರೆ ಮುಖಂಡರು ಬುಧವಾರ ಪೂರ್ವ ಭಾವಿ ಸಭೆ ಸೇರಿ ಮಾತುಕತೆ ನಡೆಸಿದರು.
ಜೂ.11ರಂದು ನಡೆಯಲಿರುವ ಪಾಲಿಕೆ ಮೇಯರ್ ಚುನಾವಣೆ ಸಂಬಂಧ ಚಾಮ ರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಯಲ್ಲಿ ಸಭೆ ಸೇರಿ ಯಾರನ್ನು ಅಭ್ಯರ್ಥಿ ಯಾಗಿಸಬೇಕು ಎಂಬುದೂ ಸೇರಿದಂತೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆ ಯಿತು ಎಂದು ಪಕ್ಷದ ಮುಖಂಡರೊಬ್ಬರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಜೆಡಿಎಸ್‍ನ ಜಿಲ್ಲಾ ಮುಖಂಡರೊಂ ದಿಗೆ ಮಾತುಕತೆ ನಡೆಸಿ, ಮೇಯರ್ ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹಾಗೂ ನಗರಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಜೂ.10ರ ಬೆಳಗ್ಗೆ ಪುನಃ ಸಭೆ ಸೇರಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಸುನಂದಾ ಪಾಲ ನೇತ್ರ, ಮಾ.ವಿ.ರಾಮಪ್ರಸಾದ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸೋಮ ಸುಂದರ್, ಗಿರಿಧರ್, ವಾಣೀಶ್ ಕುಮಾರ್, ಪಾಲಿಕೆ ವಿಪಕ್ಷ ನಾಯಕ ಶಿವಕುಮಾರ್, ಪಾಲಿಕೆಯ 23 ಸದಸ್ಯರು, ಐವರು ನಾಮ ನಿರ್ದೇಶಿತ ಸದಸ್ಯರು ಸಭೆಯಲ್ಲಿದ್ದರು.

Translate »