ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಮೈಸೂರು

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

June 10, 2021

ಮೈಸೂರು, ಜೂ.9(ಎಂಟಿವೈ)- ಕೊರೊನಾ ಹಾವಳಿ ಹಾಗೂ ಲಾಕ್‍ಡೌನ್‍ನಿಂದ ಜನರು ತತ್ತರಿಸಿರುವ ಸಂದರ್ಭದಲ್ಲೇ ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೂಡಿವೆ ಎಂದು ಆರೋಪಿಸಿ ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ ಪ್ರತಿಭಟನೆ ನಡೆಸಿದರು. ಮೈಸೂರಿನ ನ್ಯಾಯಾಲಯ ಮುಂಭಾಗದ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಪೆಟ್ರೋಲ್ ದರ ಹೆಚ್ಚಳ ಸಂಬಂಧ ಭಿತ್ತಿಪಲಕ ಪ್ರದರ್ಶಿಸುವ ಮೂಲಕ ಇಂಧನ ಬೆಲೆ ಹೆಚ್ಚಳವನ್ನು ಖಂಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಹಿತಕಾಯಲು ವಿಫಲವಾಗಿವೆ. ಲಾಕ್‍ಡೌನ್‍ನಿಂದಾಗಿ ಕೂಲಿ ಸಿಗದೇ, ಆದಾಯವಿಲ್ಲದೆ ಜನರು ಸಂಕಷ್ಟಕ್ಕೀ ಡಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಿರಂತರವಾಗಿ ಇಂಧನ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಸ್ಥಿರವಾಗಿದ್ದರೂ 1 ವರ್ಷದಿಂದ ತೆರಿಗೆ ಹೆಚ್ಚಿಸಿ ಪೆಟ್ರೋಲ್ ಲೀ. 100 ರೂ. ಮುಟ್ಟುವಂತೆ ಮಾಡಲಾಗಿದೆ. ಕೂಡಲೆ ತೈಲ ಬೆಲೆ ಕಡಿಮೆ ಮಾಡುವಂತೆ ಆಗ್ರಹಿಸಿದರು.

Translate »