ಖಾಸಗಿ ಕೋವಿಡ್ ಕ್ಲಿನಿಕ್ ಆರಂಭ
ಮೈಸೂರು

ಖಾಸಗಿ ಕೋವಿಡ್ ಕ್ಲಿನಿಕ್ ಆರಂಭ

June 10, 2021

ಮೈಸೂರು,ಜೂ.9(ಪಿಎಂ)- ಲಕ್ಷಣ ರಹಿತ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಕಲ್ಪಿಸಲು ಹಿನಕಲ್ ಗ್ರಾಪಂ ವ್ಯಾಪ್ತಿ ಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಜಿಲ್ಲೆಯ ಮೊದಲ ಖಾಸಗಿ ಕೋವಿಡ್ ಕ್ಲಿನಿಕ್ ಆರಂಭಿಸಲಾಗಿದೆ.

ಹಿನಕಲ್‍ನ ಹುಣಸೂರು ಮುಖ್ಯ ರಸ್ತೆ ಯಲ್ಲಿ `ಶ್ರೀ ಸಿದ್ದರಾಮಯ್ಯ ಕೋವಿಡ್ ಪ್ರಾಥ ಮಿಕ ಉಚಿತ ಚಿಕಿತ್ಸಾ ಕೇಂದ್ರ’ ಶೀರ್ಷಿಕೆ ಯಡಿ ಜಿಪಂ ಸದಸ್ಯ ರಾಕೇಶ್ ಪಾಪಣ್ಣ ನೇತೃತ್ವದಲ್ಲಿ ಆರಂಭಿಸಿರುವ ಈ ಕ್ಲಿನಿಕ್ ಅನ್ನು ಬುಧವಾರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬಡವ ರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶ ದಿಂದ ವಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿನಲ್ಲಿ ಕ್ಲಿನಿಕ್ ಆರಂಭಿಸಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋ ಲೇಷನ್‍ನಲ್ಲಿರುವ ಸೋಂಕಿತರಲ್ಲಿ ಬಹುತೇ ಕರು ಆಸ್ಪತ್ರೆಗಳಿಗೆ ತೆರಳಲು ಆತಂಕ ಹೊಂದಿ ರುತ್ತಾರೆ. ಜೊತೆಗೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದುಬಾರಿ ವೆಚ್ಚ ಭರಿಸಲು ಬಡವರಿಂದ ಸಾಧ್ಯವಾಗುತ್ತಿಲ್ಲ. ಚಾಮುಂ ಡೇಶ್ವರಿ ಕ್ಷೇತ್ರದಲ್ಲಿರುವ ಇಂತಹ ಜನತೆಗೆ ಅನುಕೂಲ ಕಲ್ಪಿಸಲು ಕ್ಲಿನಿಕ್ ಆರಂಭಿಸಿ ರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ರಾಕೇಶ್ ಪಾಪಣ್ಣ ಅವರ ನೇತೃತ್ವದಲ್ಲಿ ಈ ಕ್ಲಿನಿಕ್ ಆರಂಭಿಸಲಾಗಿದೆ. ಈ ಸೇವಾ ಕಾರ್ಯಕ್ಕೆ ಬೇಕಾದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಔಷಧ, ಕಟ್ಟಡ ಸೇರಿದಂತೆ ಸಂಪೂರ್ಣ ಸೌಲಭ್ಯ ವನ್ನು ಅವರು ಒದಗಿಸಿದ್ದಾರೆ. ಕ್ಷೇತ್ರದ ಜನತೆ ಈ ಸೌಲಭ್ಯ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಕೋರಿದರು.

ರಾಕೇಶ್ ಪಾಪಣ್ಣ ಮಾತನಾಡಿ, ದೇಶ ವನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್ ಜನರ ಪ್ರಾಣ ಬಲಿಪಡೆಯುತ್ತಿದೆ. ಹಾಗಾಗಿ ಸೋಂಕಿತರಿಗೆ ಶೀಘ್ರ ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಕ್ಷೇತ್ರದಲ್ಲಿ ಸಾವಿನ ಪ್ರಮಾಣ ಇಳಿಸುವ ಉದ್ದೇಶದೊಂದಿಗೆ ಈ ಕ್ಲಿನಿಕ್ ಆರಂಭಿಸ ಲಾಗಿದೆ ಎಂದು ತಿಳಿಸಿದರು.
ಸೋಂಕು ಹರಡುತ್ತದೆ ಎಂಬ ಆತಂಕ ದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಗ್ರಾಮೀಣ ಜನತೆ ಹಿಂದೇಟು ಹಾಕುತ್ತಿ ದ್ದಾರೆ. ಬಡವರು ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಹಾಗೂ ಖಾಸಗಿ ಆಸ್ಪತ್ರೆಗಳ ವೆಚ್ಚ ಭರಿಸಲಾಗದೇ ಪ್ರಾಣ ಕಳೆದುಕೊಳ್ಳುತ್ತಿ ದ್ದಾರೆ. ಹೀಗಾಗಿ ಲಕ್ಷಣರಹಿತ ಸೋಂಕಿ ತರಿಗಾಗಿ ಉಚಿತ ಕೋವಿಡ್ ಕ್ಲಿನಿಕ್ ತೆರೆಯಲಾಗಿದೆ. ಈ ಕ್ಲಿನಿಕ್ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಕಾರ್ಯ ನಿರ್ವಹಿ ಸಲಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯು ವವರು ಏನಾದರೂ ಅನುಮಾನಗಳಿದ್ದರೆ ಈ ಕ್ಲಿನಿಕ್‍ಗೆ ಭೇಟಿ ನೀಡಬಹುದು ಎಂದರು.

ಜಿಪಂ ಸದಸ್ಯ ರವಿಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಮುಖಂಡರಾದ ಕೆ.ಜಿ.ನಾಗರಾಜು, ಹೊನ್ನಪ್ಪ, ದೇವರಾಜು, ಶ್ರೀನಿವಾಸ್, ಚಂದ್ರು, ಪ್ರಕಾಶ್, ರಮೇಶ್, ವೆಂಕಟೇಶ್, ಕೀರ್ತಿ, ರಾಜಣ್ಣ, ಸೋಮಣ್ಣ, ಭೈರನಾಯಕ, ಹಿನಕಲ್ ಗ್ರಾಪಂ ಪಿಡಿಓ ಮೊಹಮ್ಮದ್ ಇಸಾಕ್, ಕ್ಲಿನಿಕ್‍ನ ವೈದ್ಯೆ ಡಾ.ರಕ್ಷಿತಾ ಇತರರು ಹಾಜರಿದ್ದರು.

Translate »