ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಚಾರ
ಹಾಸನ

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಚಾರ

April 9, 2019

ಬೇಲೂರು: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸೋಮವಾರ ಹಾಸನ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಹೆಬ್ಬಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ 1.5 ಕೋಟಿ ಅನುದಾನ ನೀಡಲಾಗಿದೆ. ಅಲ್ಲದೆ ಸುತ್ತ್ತಲ ಗ್ರಾಮಗಳಿಗೂ ವಿಶೇಷ ಅನುದಾನ ನೀಡಲಾ ಗಿದೆ. ಎತ್ತಿನಹೊಳೆ ಹಾಗೂ ಯಗಚಿ ಯೋಜನೆಗೆ 10 ಕೋಟಿ ರೂ. ನೀಡಲಾಗಿದೆ ಎಂದರು.

ಗ್ರಾಮದಲ್ಲಿ ಅರೆಬರೆ ಕಾಮಗಾರಿ ನಡೆದಿರುವ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆಗೊಳಿಸಲಾಗುವುದು. ಪ್ರಜ್ವಲ್ ಯುವಕನಾಗಿದ್ದು, ಕೆಲಸ ಮಾಡುವ ಉತ್ಸಾಹ ದಲ್ಲಿದ್ದಾರೆ. ಅವರಿಗೆ ನಾವುಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಕಡಿದಾಳ ಮಂಜಪ್ಪ, ಲತಾ, ದಿಲೀಪ್, ಹಾಲಿನ ಡೈರಿ ಅಧ್ಯಕ್ಷ ರೇಣುಕಯ್ಯ, ಮುಖಂಡರಾದ ಶಿವಗಂಗಾ, ರಾಜಶೇಖರ್, ದೊಡ್ಡವೀರೇ ಗೌಡ, ವೈ.ಎಂ.ಕೃಷ್ಣೇಗೌಡ ಇತರರಿದ್ದರು.

Translate »