ಮೈಸೂರು, ಸೆ.9(ಆರ್‍ಕೆಬಿ)- ಮೈಸೂರು ಸಮೀ ಪದ ಉದ್ಬೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯದ ಭೂಮಿಪೂಜೆ ಸೆ.15ರಂದು ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಅಂದು ಬೆಳಗ್ಗೆ 10.30ರ ನಂತರ ಆನ್‍ಲೈನ್ ಮೂಲಕವೇ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದರು.
ಹುಟ್ಟುಹಬ್ಬ: ಸೆ. 18, ವಿಷ್ಣುವರ್ಧನ್ ಜನ್ಮದಿನ. ಸೆ.15ರಂದೇ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡ ಲಾಗುತ್ತಿದೆ. ಆದರೆ, ಕೋವಿಡ್-19 ಕಾರಣಕ್ಕಾಗಿ ಹೆಚ್ಚು ಮಂದಿಯನ್ನು ಆಹ್ವಾನಿಸಿಲ್ಲ. ಕೆಲವು ಪ್ರಮುಖ ರಿಗಷ್ಟೆ ಆಹ್ವಾನ ನೀಡಲಾಗಿದೆ ಎಂದು ಭಾರತಿ ವಿಷ್ಣುವರ್ಧನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಹಾಲಾಳು ಸರ್ವೆ ನಂ.8ರಲ್ಲಿ 6.5 ಎಕರೆ ಭೂಮಿ ಯಲ್ಲಿ 5 ಎಕರೆಯಲ್ಲಿ ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗುತ್ತಿದೆ. ಈಗಾಗಲೇ ಸ್ಥಳದ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಬೋರ್‍ವೆಲ್ ಸಹ ಕೊರೆಯಲಾಗಿದ್ದು, ಚೆನ್ನಾಗಿ ನೀರು ಬಂದಿದೆ ಎಂದರು.
11 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಯಲ್ಲಿ 16 ಅಡಿ ಎತ್ತರದ ವಿಷ್ಣು ಸ್ಮಾರಕ, ಧ್ಯಾನ ಮಂದಿರ, ಯೋಗ ಕೇಂದ್ರ, ವಿಷ್ಣುವರ್ಧನ್ ಬಳಸು ತ್ತಿದ್ದ ವಸ್ತುಗಳ ಮ್ಯೂಸಿಯಂ ಎಲ್ಲವೂ ಸುಂದರ ವಾಗಿ ರೂಪುಗೊಳ್ಳಲಿದೆ. ಆಸಕ್ತರಿಗಾಗಿ ಚಲನಚಿತ್ರ ಮತ್ತು ನಾಟಕ ತರಬೇತಿ ಶಾಲೆ ತೆರೆಯುವ ಉದ್ದೇ ಶವೂ ಇದೆ ಎಂದು ವಿವರಿಸಿದರು. ಅಭಿಮಾನಿ ನಟನ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಶೀಘ್ರ ಸ್ಮಾರಕ ನಿರ್ಮಾಣಗೊಂಡು ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿದೆ.
7 ವರ್ಷಗಳ ಅವಿರತ ಹೋರಾಟ: `ವಂಶವೃಕ್ಷ’ದಿಂದ `ಆಪ್ತರಕ್ಷಕ’ನವರೆಗೆ 200ಕ್ಕೂ ಹೆಚ್ಚು ಯಶಸ್ವಿ ಚಿತ್ರಗಳ ನಾಯಕ ನಟರಾಗಿದ್ದ ವಿಷ್ಣುವರ್ಧನ್ 2009ರ ಡಿ.3ರಂದು ನಿಧನರಾದರು. 2013ರಲ್ಲಿ ಬೆಂಗಳೂರಿನಲ್ಲಿ ಮೈಲಸಂದ್ರದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರಾಯಿತು. ನಂತರ ಹುಟ್ಟೂರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಗೊಳ್ಳಬೇಕೆಂದು ಪತ್ನಿ ಭಾರತಿ 2016ರಲ್ಲಿ ಪ್ರಸ್ತಾಪಿಸಿದ್ದರು. 2017ರಲ್ಲಿ ಸರ್ಕಾರದಿಂದ ಮೈಸೂರಿನಲ್ಲಿ ಭೂಮಿ ಮಂಜೂರಾಯಿತು. ಅದಕ್ಕೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ, ಆತಂಕ ಎದುರಾಗಿದ್ದವು. ಕಳೆದ ವರ್ಷ ಜು.1ರಂದು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆಯೂ ಆಗಿತ್ತು. 7 ವರ್ಷಗಳ ಸತತ ಹೋರಾಟದ ಫಲದಿಂದಾಗಿ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯುತ್ತಿದೆ.