ಮೈಸೂರು,ಜೂ.15-ರಾಜ್ಯದಲ್ಲಿ ಭೋವಿ, ಕೊರಚ, ಕೊರಮ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅಸಂವಿಧಾನಿಕ ಅರ್ಜಿ ತಿರ ಸ್ಕರಿಸಲು ಆಗ್ರಹಿಸಿ ಶ್ರೀ ಶ್ರೀ ಶಿವಯೋಗಿ ಸಿದ್ಧರಾಮೇ ಶ್ವರ ಭೋವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ನಾಗ ರಾಜು ಜಿಲ್ಲಾ ವ್ಯಾಪ್ತಿ ಪತ್ರ ಚಳವಳಿಗೆ ಚಾಲನೆ ನೀಡಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನಿಕ ಮೀಸಲಾತಿಯ ಹಕ್ಕನ್ನು ಭೋವಿ, ಕೊರಚ, ಕೊರಮ, ಲಂಬಾಣಿ ಜಾತಿಗೆ ನೀಡಿದೆ. ಇದನ್ನು ಸರ್ಕಾರ ಸಂರ ಕ್ಷಣೆ ಮಾಡಬೇಕಾಗಿದೆ. ಈ ಸಮುದಾಯಗಳನ್ನು ಮೀಸಲಾತಿಯಿಂದ ಕೈಬಿಡಬೇಕೆಂದು ಆಯೋಗಕ್ಕೆ ಸಲ್ಲಿಸಿರುವ ಕೆಲವು ಅರ್ಜಿಗಳ ಬಗ್ಗೆ ಸರ್ಕಾರ ಪತ್ರ ಬರೆದಿದೆ. ಆದರೆ ಸರ್ಕಾರ ಈ ಜಾತಿ ಕೈಬಿಡುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಪತ್ರ ಚಳವಳಿ ರಾಜ್ಯವ್ಯಾಪ್ತಿ ನಡೆಯಲಿದ್ದು, 25 ಲಕ್ಷ ಪತ್ರಗಳು ಸರ್ಕಾರವನ್ನು ಮುಟ್ಟಲಿದೆ. ಮುಖ್ಯಮಂತ್ರಿಗಳು ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಯವರನ್ನು ಪರಿಶಿಷ್ಟ ಜಾತಿಯಿಂದ ಕೈಬಿಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರು ವವರ ವಿರುದ್ಧ ಕ್ರಮ ಜರುಗಿಸಿ ಪರಿಶಿಷ್ಟ ಜಾತಿಯ ಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಂಜುನಾಥಪುರ ಭೋವಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಎಸ್.ಶ್ರೀನಿವಾಸು, ಸುಬ್ರ ಮಣ್ಯ, ಕೆ.ನಾರಾಯಣ, ಕಿರಣ್‍ಕುಮಾರ್, ಟಿ.ವಿ. ಹರೀಶ್, ಎಂ.ವಿ. ಗಂಗಾಧರ, ಹೇಮಂತಕುಮಾರ್, ಆರ್.ನಂಜುಂಡ, ಎಸ್.ಮಂಜುನಾಥ್, ರಮೇಶ್ ಬಾಬು, ಅನಿಲ್ ಎಂ. ಮತ್ತಿತರರು ಹಾಜರಿದ್ದರು