ಮೈಸೂರು, ಜೂ. 15-ಖ್ಯಾತ ಚಿತ್ರನಟಿ, ರಾಜ್ಯ ಬಿಜೆಪಿ ವಕ್ತಾರರಾದ ಶ್ರೀಮತಿ ಮಾಳವಿಕ ಅವಿನಾಶ್ ಅವರ ನೇತೃತ್ವದಲ್ಲಿ ಭಾನುವಾರ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬ್ರಾಹ್ಮಣರ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಯಿತು.
ಬೃಂದಾವನ ಬಡಾವಣೆಯ ಗಾಯತ್ರಿ ವಿಪ್ರ ವೃಂದದ ಆಶ್ರಯದಲ್ಲಿ ನಡೆದ ಸಮಾ ರಂಭದಲ್ಲಿ ಸುಮಾರು 150ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಹಲವು ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ಅನ್ನು ವಿತರಿಸಿ ಮಾತ ನಾಡಿ, ಕೋವಿಡ್ ಟಾಸ್ಕ್‍ಫೋರ್ಸ್‍ನ ಮುಖ್ಯಸ್ಥರೂ ಆದ ಮಾಳವಿಕ ಅವಿನಾಶ್ ಕೋವಿಡ್ ಲಾಕ್‍ಡೌನ್‍ನಿಂದ ನಿಜವಾಗಿ ಸಂತ್ರಸ್ತರಾದವರು ಬಡ ಬ್ರಾಹ್ಮಣರು. ಈಗ ಲಾಕ್‍ಡೌನ್ ತೆರವಾಗಿ ಎಲ್ಲಾ ರೀತಿಯ ವ್ಯವಹಾರಗಳು ಆರಂಭವಾಗಿದ್ದರೂ ಪೂಜಾ ಕಾರ್ಯ ಹಾಗೂ ಇತರೆ ಧಾರ್ಮಿಕ ಕಾರ್ಯಗಳನ್ನು ಮಾಡಿಸುವ ಬ್ರಾಹ್ಮಣರು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಅವರ ನೆರವಿಗೆ ನಿಲ್ಲ ಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ತಾವು ಕೋವಿಡ್ ಟಾಸ್ಕ್ ಫೋರ್ಸ್‍ನ ಮುಖ್ಯಸ್ಥರಾದ ನಂತರದಿಂದ ರಾಜ್ಯಾ ದ್ಯಂತ ಇದುವರೆವಿಗೂ ಸುಮಾರು ಒಂದು ಕೋಟಿಗೂ ಹೆಚ್ಚು ಜನಕ್ಕೆ ಆಹಾರ ವಿತರಿ ಸುವ ಕಾರ್ಯವನ್ನು ಮಾಡಲಾಗಿದೆ ಎಂದ ರಲ್ಲದೆ ಈ ಸಂದರ್ಭದಲ್ಲಿ ಆದ ಅನುಭವ ಗಳು ಮನ ಕಲಕುವಂತಿತ್ತು ಎಂದರು. ಉದ್ಯಮಿ ಸುಬ್ರಹ್ಮಣ್ಯ, ಸಿಮನ್ಸ್ ಕಂಪನಿಯ ವೀರೇಶ್, ವಿಪ್ರ ಮುಖಂಡ ನಂ.ಶ್ರೀಕಂಠಕುಮಾರ್, ಗಾಯತ್ರಿ ವಿಪ್ರ ವೃಂದದ ಅಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ಎ.ಕುಮಾರ್, ಹೆಚ್.ಎಸ್. ಹರೀಶ್, ಡಿ.ಎನ್. ಶಂಕರನಾರಾಯಣ ಇತರರು ಈ ಸಂದರ್ಭದಲ್ಲಿದ್ದರು