ತಿ.ನರಸೀಪುರ, ಏ.7-ಕೋವಿಡ್-19 ನಿಯಂತ್ರಣಕ್ಕಾಗಿ ವಿಧಿಸ ಲಾಗಿರುವ ಲಾಕ್‍ಡೌನ್ ಉಲ್ಲಂಘಿಸಿ ಅನಾವಶ್ಯಕವಾಗಿ ಪಟ್ಟಣ ಸುತ್ತಲು ಬಂದ ಬೈಕ್‍ಗಳನ್ನು ಇಂದು ಪಟ್ಟಣ ಪೆÇಲೀಸರು ವಶಕ್ಕೆ ಪಡೆದರು.
ಲಾಕ್‍ಡೌನ್ ವಿಧಿಸಿದ್ದ ದಿನದಿಂದಲೂ ಪಟ್ಟಣದಲ್ಲಿ ಅನಾವಶ್ಯಕ ವಾಗಿ ದ್ವಿಚಕ್ರ ವಾಹನಗಳಲ್ಲಿ ಬಂದು ಸುತ್ತಾಡುತ್ತಿದ್ದವರ ಮೇಲೆ ಕಣ್ಣಿಟ್ಟಿದ್ದ ಪೆÇಲೀಸರು ಇಂದು ಅವರನ್ನು ಗುರುತಿಸಿ ಸುಮಾರು 70ಕ್ಕೂ ಹೆಚ್ಚು ಬೈಕ್‍ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಬೆಳ್ಳಂಬೆಳಿಗ್ಗೆಯೇ ಕಾರ್ಯಾಚರಣೆಗಿಳಿದ ಪೆÇಲೀಸರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತು ಅನಾವಶ್ಯಕವಾಗಿ ಪಟ್ಟಣ ಸುತ್ತಲು ಬಂದ ಬೈಕ್‍ಗಳನ್ನು ವಶಕ್ಕೆ ಪಡೆಯುವ ಮೂಲಕ ಸವಾರರಿಗೆ ಬಿಸಿ ಮುಟ್ಟಿಸಿದರು. ಪೆÇಲೀಸರ ಕಾರ್ಯಾ ಚರಣೆ ಅರಿವಿಲ್ಲದೆ ಎಂದಿನಂತೆ ಪಟ್ಟಣಕ್ಕೆ ಆಗಮಿಸಿದ ಸವಾರರು ಪೆÇಲೀಸರ ಲಾಠಿ ರುಚಿಯೊಂದಿಗೆ ಬೈಕ್‍ನ್ನು ಅವರ ವಶಕ್ಕೆ ನೀಡಬೇಕಾಯಿತು. ಸಬ್‍ಇನ್ಸ್‍ಪೆಕ್ಟರ್ ಷಬ್ಬೀರ್ ಹುಸೇನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಲಾಕ್‍ಡೌನ್ ತೆರವಾಗುವವರೆಗೂ ವಶಕ್ಕೆ ಪಡೆದಿರುವ ವಾಹನಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಮುಖ್ಯಪೇದೆ ಪಚ್ಚೇಗೌಡ ತಿಳಿಸಿದ್ದಾರೆ. ಮುಖ್ಯಪೇದೆ ಪುಟ್ಟಸ್ವಾಮಿ ಪೆÇಲೀಸ್ ಮಾಹಿತಿದಾರ ಮಾದೇಶ್, ವೆಂಕಟೇಶ್, ಪರಶುರಾಮೇಗೌಡ, ಚಾಲಕ ದಯಾನಂದ್ ಕಾರ್ಯಾಚರಣೆಯಲ್ಲಿದ್ದರು.