ಮೈಸೂರಲ್ಲಿ ವರನಟ ಡಾ.ರಾಜ್ ಹುಟ್ಟುಹಬ್ಬ ಆಚರಣೆ
ಮೈಸೂರು

ಮೈಸೂರಲ್ಲಿ ವರನಟ ಡಾ.ರಾಜ್ ಹುಟ್ಟುಹಬ್ಬ ಆಚರಣೆ

April 25, 2022

ಮೈಸೂರು, ಏ.24(ಎಂಟಿವೈ)- ವರನಟ ಡಾ.ರಾಜ್‍ಕುಮಾರ್ ಜನ್ಮ ದಿನದ ಹಿನ್ನೆಲೆ ಯಲ್ಲಿ ಮೈಸೂರಿನ ಹಲವೆಡೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಮೈಸೂರಿನ ಡಾ.ರಾಜ್‍ಕುಮಾರ್ ಉದ್ಯಾ ನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ ಅವರು ಡಾ.ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಾಣೆ ಮಾಡಿ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸತೀಶ್, ಡಾ.ರಾಜ್‍ಕುಮಾರ್ ಸಂಘದ ಜಿಲ್ಲಾಧ್ಯಕ್ಷರಾದ ಮಹಾದೇವ ಸ್ವಾಮಿ, ವಾರ್ತಾ ಇಲಾಖೆಯ ಸಹಾ ಯಕ ನಿರ್ದೇಶಕ ಹರೀಶ್ ಹಾಗೂ ಇತರೆ ಗಣ್ಯರು ಉಪಸ್ಧಿತರಿದ್ದರು.

ಕನ್ನಡ ಸೇನೆ: ಮೈಸೂರಿನ ಕೆ.ಆರ್. ವೃತ್ತದಲ್ಲಿ ಡಾ.ರಾಜಕುಮಾರ್ ಕನ್ನಡ ಸೇನೆ ವತಿಯಿಂದ ಡಾ. ರಾಜ್‍ಕುಮಾರ್ ಜನ್ಮ ದಿನವನ್ನು ಆಚರಿಸಲಾಯಿತು. ಡಾ. ರಾಜ್ ಮಂಟಪದಲ್ಲಿ ಅಭಿಮಾನಿಗಳಿಗೆ ಸಿಹಿಯನ್ನು ವಿತರಿಸಿ ಡಾ.ರಾಜ್‍ಕುಮಾರ್ ಅಭಿನಯದ ಚಿತ್ರದ ಕ್ಯಾಲೆಂಡರ್‍ಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಡಾ. ರಾಜ್ ಸಂಬಂಧಿ ಎಸ್.ಎ.ಶ್ರೀನಿವಾಸ್, ನಟ ಜೈಪ್ರಕಾಶ್, ಡಾ.ರಾಜಕುಮಾರ್ ಕನ್ನಡ ಸೇನೆ ಅಧ್ಯಕ್ಷ ಮಹದೇವಸ್ವಾಮಿ, ನಟ ನಾಗ ರಾಜ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಡಾ. ರಾಜ್ ಎಲ್‍ಐಸಿ ಕುಟುಂಬದ ಸಿದ್ದಪ್ಪ, ಗೋವಿಂದರಾಜ್, ಪ್ಯಾಲೆಸ್ ಬಾಬು, ಪಾಲ್ಗೊಂಡಿದ್ದರು.

Translate »