ಬಿಜೆಪಿ ಯುವ ಮೋರ್ಚಾ ನಗರ ಘಟಕ ಪದಾಧಿಕಾರಿಗಳ ನೇಮಕ
ಮೈಸೂರು

ಬಿಜೆಪಿ ಯುವ ಮೋರ್ಚಾ ನಗರ ಘಟಕ ಪದಾಧಿಕಾರಿಗಳ ನೇಮಕ

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಬಿಜೆಪಿ ಯುವ ಮೋರ್ಚಾ ಮೈಸೂರು ನಗರ (ಜಿಲ್ಲಾ) ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಮೋರ್ಚಾ ನಗರ ಘಟಕ ಅಧ್ಯಕ್ಷ ಎಂ.ಜೆ.ಕಿರಣ್‍ಗೌಡ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಕೆ.ಎಂ.ನಿಶಾಂತ್, ಕಾರ್ತಿಕ್‍ಕುಮಾರ್, ಎಲ್.ದೀಪಕ್ (ಉಪಾಧ್ಯಕ್ಷರು), ಎಸ್.ಭರತ್, ಸಂತೋಷ್‍ಕುಮಾರ್  (ಪ್ರಧಾನ ಕಾರ್ಯದರ್ಶಿ), ಎಸ್.ಮಧು, ಎಸ್.ಹರ್ಷಿತ್‍ಕುಮಾರ್, ಸಂದೀಪ್ (ಕಾರ್ಯದರ್ಶಿ), ಟಿ.ಎಸ್.ಅರುಣ್, ಜೆ.ಸಚಿನ್, ಆರ್.ನಾಗೇಶ್, ಅಭಿಷೇಕ್, ಪಿ.ಅಭಿಷೇಕ್, ಜೆ.ಆನಂದ್, ರಾಘವೇಂದ್ರ, ಚಂದನ್, ಕಿರಣ್, ಜಗದೀಶ್, ಎಂ.ರಾಘ ವೇಂದ್ರ, ಕೀರ್ತಿಕುಮಾರ್ (ಕಾರ್ಯಕಾರಿ ಸದಸ್ಯರು) ನೇಮಕಗೊಂಡಿದ್ದಾರೆ ಎಂದರು.

ನಮ್ಮ ಘಟಕವು ಲಾಕ್‍ಡೌನ್ ಸಂದರ್ಭ 4 ಸಾವಿರ ಜನರಿಗೆ ಎನ್95 ಮಾಸ್ಕ್‍ಗಳನ್ನು ವಿತರಿಸಿದೆ. ಬಡ, ಕೂಲಿಕಾರ್ಮಿಕ ಕುಟುಂಬಗಳಿಗೆ ಶಾಸಕರು ಮತ್ತು ಮುಖಂಡರ ಮೂಲಕ ದಿನಸಿ ಕಿಟ್ ಕೊಡಿಸುವ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಪಕ್ಷದ ನಗರಾಧ್ಯಕ್ಷರು, ಶಾಸಕರು ಮತ್ತು ಸಂಸದರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಎಸ್.ಭರತ್, ಮೋರ್ಚಾ ಚಾಮರಾಜ ಕ್ಷೇತ್ರ ಅಧ್ಯಕ್ಷ ಸಚಿನ್, ಎನ್.ಆರ್.ಕ್ಷೇತ್ರ ಅಧ್ಯಕ್ಷ ಡಿ.ಲೋಹಿತ್ ಗೋಷ್ಠಿಯಲ್ಲಿದ್ದರು.

Translate »