ಮೈಸೂರು, ಜೂ.14(ಆರ್‍ಕೆಬಿ)- ಕರ್ನಾಟಕ ನೋಂದಾಯಿತ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು ಘಟಕ ಮತ್ತು ರೋಟರ್ಯಾಕ್ಟ್ ಮೈಸೂರು ಪರಿಸರ ದಿನದ ಅಂಗವಾಗಿ ಮೈಸೂರಿನ ವಿಜಯನಗರ 3ನೇ ಹಂತದ ಎ ಬ್ಲಾಕ್ ಉದ್ಯಾನವನದಲ್ಲಿ ವಿವಿಧ ಜಾತಿಯ 25ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಹಿನಕಲ್ ಗ್ರಾಪಂ ಸದಸ್ಯ ವಿಜಯ ನಗರ ಮಂಜು ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವ ಗುರಿ ಇದೆ. ಸಸಿಗಳ ರಕ್ಷಣೆಗಾಗಿ ರಘುಲಾಲ್ ಅಂಡ್ ಕಂಪನಿಯ ರಾಘವನ್ ಟ್ರೀಗಾರ್ಡ್‍ಗಳನ್ನು ನೀಡಿದ್ದಾರೆ ಎಂದರು. ಫಾರ್ಮಾಸಿಸ್ಟ್‍ಗಳ ಸಂಘದ ರಾಜ್ಯ ಅಧ್ಯಕ್ಷ ಡಾ.ಕೌಶಿಕ್ ದೇವರಾಜು, ಡಾ.ಟಿ.ಎಂ.ಪ್ರಮೋದ್‍ಕುಮಾರ್, ಡಾ.ಎಂ.ಡಿ. ಸಲಾಹುದ್ದೀನ್, ಡಾ.ಅರುಣ್, ನಾಗರಾಜ್, ಸಂಜೀವ್‍ಕುಮಾರ್, ಅಭಿಜಿತ್ ಇದ್ದರು
