ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ
ಮೈಸೂರು

ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ

June 14, 2021

ಮೈಸೂರು,ಜೂ.13- ಬಿಜೆಪಿ ಸರ್ಕಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿಸು ವುದರೊಂದಿಗೆ ದೇಶ ಹಾಗೂ ರಾಜ್ಯದ ಖಜಾನೆಗಳನ್ನು ಲೂಟಿ ಮಾಡಿ ಬಂಡವಾಳಶಾಹಿಗಳನ್ನು ಶ್ರೀಮಂತರನ್ನಾಗಿ ಮಾಡಲು ಹೊರಟಿದೆ. ಬಿಜೆಪಿ ಪಕ್ಷವನ್ನು ರಾಜ್ಯ ಹಾಗೂ ದೇಶದಿಂದ ಕಿತ್ತೊಗೆ ಯಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಕರೆ ನೀಡಿದರು.

ತಾಲೂಕಿನ ಕಡಕೊಳ ಹಾಗೂ ನಾಚನಹಳ್ಳಿ ಪಾಳ್ಯದ ಬಳಿ ಇರುವ ಪೆಟ್ರೋಲ್ ಬಂಕ್‍ಗಳ ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೈಕಲ್ ಸವಾರಿ ಮಾಡುವ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮೂಲ ಬೆಲೆಗಿಂತ ಎರಡು ಪಟ್ಟು ತೆರಿಗೆ ವಿಧಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19ರ ಸಮಯದಲ್ಲಿ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು. ಮೋದಿಯವರು 7 ವರ್ಷದ ಅಧಿಕಾರದ ಅವಧಿಯಲ್ಲಿ ದೇಶವನ್ನು 20 ವರ್ಷ ಹಿಂದಕ್ಕೆ ತಳ್ಳಿದ್ದಾರೆ, ಇದಲ್ಲದೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಂಡವಾಳಶಾಹಿಗಳಿಗೆ ಮಾರುತ್ತಿದ್ದು ಇದರಿಂದ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಯುವ ಜನತೆ ಕೆಲಸವಿಲ್ಲದೆ ಕಂಗಾಲಾಗಿ ದ್ದಾರೆ, ಇಂತಹವರನ್ನು ಈ ದೇಶವನ್ನು ಆಳಲು ಬಿಟ್ಟರೆ ದೇಶ ವನ್ನೇ ಮಾರಿಬಿಡುತ್ತಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಗುರುಪಾದ ಸ್ವಾಮಿ, ಜೇಸುದಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ತಾಪಂ ಮಾಜಿ ಸದಸ್ಯ ಶ್ರೀಕಂಠತೊಂಡೇಗೌಡ, ಜಿ.ಪಂ ಮಾಜಿ ಸದಸ್ಯ ನಾರಾಯಣ, ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್, ದೂರ ನಾಗರಾಜು, ರಮಾಬಾಯಿ ನಗರದ ಪ್ರಗತಿಪರ ಒಕ್ಕೂಟದ ಅಧ್ಯಕ್ಷ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉಮಾಶಂಕರ್, ಸಿದ್ದರಾಜು, ಯುವ ಕಾಂಗ್ರೆಸ್ ಕಾರ್ಯದರ್ಶಿ ಶಿವಲಿಂಗ, ಮುಖಂಡರಾದ ಶಿವಲಿಂಗೇಗೌಡ, ಶಿವಕುಮಾರ್, ಚೂಡಾಮಣಿ, ಕುಮಾರ್, ರಫೀಕ್, ಪ್ರಶಾಂತ್, ಸುರೇಶ್, ಮಲ್ಲೇಶ್, ಮನೋಹರ್, ಮರಂಕಯ್ಯ, ಚಂದ್ರು, ಸಂತೋಷ್, ರಾಘವೇಂದ್ರ, ವಿಜಿಕುಮಾರ್, ಚಿನ್ನಸ್ವಾಮಿ ಹಾಜರಿದ್ದರು.

Translate »