ಕೊರೊನಾ ಕಾಲದಲ್ಲಿ ಶಾಲಾ ಶುಲ್ಕದ ಮೇಲೆ ನಿಯಂತ್ರಣ ಅತ್ಯಗತ್ಯ
ಮೈಸೂರು

ಕೊರೊನಾ ಕಾಲದಲ್ಲಿ ಶಾಲಾ ಶುಲ್ಕದ ಮೇಲೆ ನಿಯಂತ್ರಣ ಅತ್ಯಗತ್ಯ

June 14, 2021

ಮೈಸೂರು,ಜೂ.13(ಆರ್‍ಕೆಬಿ)-ಪ್ರಸಕ್ತ ಶೈಕ್ಷಣಿಕ ಸಾಲಿ ನಲ್ಲಿ ಕೊರೊನಾ ಕಾರಣದಿಂದಾಗಿ ಶಾಲೆಗಳಲ್ಲಿನ ಒಟ್ಟಾರೆ ಅಂಶಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿ ಯೊಂದು ಶಾಲೆಗೂ ಆಗುತ್ತಿರುವ ಅದ ರದ್ದೇ ಆದ ಖರ್ಚು ವೆಚ್ಚಗಳ ಆಧಾರದ ಮೇಲೆ ಪ್ರತ್ಯೇಕವಾಗಿಯೇ ಶುಲ್ಕ ನಿಗದಿ ಪಡಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಸಚಿವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಕೊರೊನಾ ಕಾರಣಕ್ಕಾಗಿ ಬಹುತೇಕ ಎಲ್ಲಾ ಶಾಲೆ ಗಳಲ್ಲಿ ಆನ್‍ಲೈನ್ ತರಗತಿಗಳು ನಡೆಸುತ್ತಿರುವುದರಿಂದ ಸಹಜವಾಗಿಯೇ ಶಾಲೆಗಳ ನಿರ್ವಹಣಾ ವೆಚ್ಚವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಗಮನಿಸ ಬೇಕಾ ಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆಯುವುದು ಬಹುತೇಕ ನಿಶ್ಚಿತವಾಗಿದೆ. ಈ ನಿಟ್ಟಿನಲ್ಲಿ ಅನೇಕ ಶಾಲೆಗಳು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಯಾವ ಪ್ರಮಾಣದಲ್ಲಿ ಕಡಿತ ಮಾಡಿ ದ್ದಾರೆ. ಯಾವ ಪ್ರಮಾಣದಲ್ಲಿ ಸಂಬಳ ಇನ್ನಿತರೆ ಸೌಲಭ್ಯ ಗಳನ್ನು ನೀಡುತ್ತಿದ್ದಾರೆ ಎಂಬ ಅಂಶಗಳನ್ನು ಗಣನೆಗೆ ತೆಗೆದು ಕೊಂಡು ಹಾಗೂ ಬ್ಯಾಂಕಿನಿಂದ ಶಾಲಾಭಿವೃದ್ಧಿಗಾಗಿ ಸಾಲ ಪಡೆದಿರುವುದನ್ನು ಗಮನಿಸಬೇಕಾಗಿರುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾನದಂಡವನ್ನು ನಿಗದಿಪಡಿಸಿ, ಪ್ರತಿಯೊಂದು ಶಾಲೆಗೂ ಅದರ ನಿರ್ವ ಹಣೆಯ ವೆಚ್ಚದ ಆಧಾರದ ಮೇಲೆ ಕೊರೊನಾ ತುರ್ತು ಕಾಲದ ಪ್ರವೇಶ ಶುಲ್ಕವನ್ನು ನಿಗದಿ ಮಾಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ನ್ಯಾಯಾ ಲಯದ ಮೊರೆ ಹೋಗಿದ್ದಲ್ಲಿ, ನ್ಯಾಯಾಲಯಕ್ಕೂ ಕೂಡ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಪೆÇೀಷಕರ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಾ ಗಿದೆ. ಶಿಕ್ಷಣ ಸಂಸ್ಥೆಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ವೆಚ್ಚವಂತೂ ತಗ್ಗಿರುವುದು ವಾಸ್ತವ ಸಂಗತಿ. ಈ ಹಿನ್ನೆಲೆಯಲ್ಲಿ ಪೋಷಕ ರಿಗೂ ಶುಲ್ಕದ ಹೊರೆ ತಗ್ಗಿಸುವುದು ಶಾಲಾ ಆಡಳಿತ ಮಂಡಳಿಗಳ ಕರ್ತವ್ಯವಾಗಿರುತ್ತದೆ. ಎಷ್ಟೋ ಶಾಲೆಗಳಲ್ಲಿ ಶೇ.100ರಷ್ಟು ಶುಲ್ಕ ಪಾವತಿಸಿಕೊಂಡು ಶಿಕ್ಷಕರು ಹಾಗೂ ಸಿಬ್ಬಂದಿಗೆ ಶೇ.50ರಷ್ಟು ವೇತನ ನೀಡುತ್ತಿರುವ ಉದಾ ಹರಣೆಗಳಿವೆ. ಒಂದು ವೇಳೆ ಶಾಲಾ ಆಡಳಿತ ಮಂಡಳಿಗಳು ಇಂತಹ ಪರಿಸ್ಥಿತಿಯನ್ನು ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಅವರ ಮೇಲೆ ನಿಯಂತ್ರಣ ಹೇರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇಂತಹ ಅಂಶಗಳನ್ನು ಘನ ನ್ಯಾಯಾಲಯಕ್ಕೆ ದಾಖಲೆ ಸಮೇತ ಒದಗಿಸಿ ಕೊಡುವ ಮೂಲಕ ಲಕ್ಷಾಂತರ ಪೋಷಕರ ನೆರವಿಗೆ ಸರ್ಕಾರ ನಿಲ್ಲಬೇಕಿದೆ ಎಂದು ತಿಳಿಸಿದ್ದಾರೆ.

ಪರಿಸ್ಥಿತಿಯ ದುರ್ಲಾಭವನ್ನು ಯಾರೂ ಪಡೆಯು ವಂತಾಗಬಾರದು. ಸದ್ಯದ ಸಂಕಷ್ಟ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿ, ಪೆÇೀಷಕರು ಸಮನ್ವಯತೆಯಿಂದ ನಡೆದು ಕೊಳ್ಳಬೇಕಾಗುತ್ತದೆ. ಪೆÇೀಷಕರೂ ಸಹ ಶುಲ್ಕ ಪಾವತಿಸು ವುದೇ ಇಲ್ಲ ಎನ್ನುವ ಹಠಕ್ಕೆ ಬೀಳಬಾರದು. ಅದೇ ರೀತಿ ಶಾಲಾ ಮಂಡಳಿಗಳೂ ಕೂಡ ಕೇವಲ ಆನ್‍ಲೈನ್ ತರಗತಿ ಗಳ ನಿರ್ವಹಣೆಯ ಆಧಾರದ ಮೇಲೆ ಶುಲ್ಕ ಪಡೆದುಕೊಳ್ಳ ಬೇಕಾಗಿರುತ್ತದೆ. ಈ ಹಿಂದಿನ ವ್ಯವಸ್ಥೆಯ ಶುಲ್ಕವನ್ನೇ ಪಾವತಿಸುವಂತೆ ಪೋಷಕರಿಗೆ ಒತ್ತಾಯ ಹೇರುವುದು ಸರ್ವತಾ ಒಪ್ಪಲಾಗದು. ಈ ಎಲ್ಲಾ ಅಂಶಗಳ ಸಮಗ್ರ ಅಧ್ಯಯನ ಮಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಂದು ಶಾಲೆಗೂ ಆಗುತ್ತಿರುವ ಅದರದ್ದೇ ಆದ ಖರ್ಚು ವೆಚ್ಚಗಳನ್ನು ಆಧರಿಸಿ ಅದರ ಆಧಾರದ ಮೇಲೆ ಪ್ರತ್ಯೇಕವಾಗಿಯೇ ಶುಲ್ಕ ನಿಗದಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪೆÇೀಷಕರೂ ಕೇವಲ ಸರ್ಕಾರದ ಕ್ರಮವನ್ನೇ ಕಾಯದೇ ಜಾಗೃತ ನಾಗರಿಕರಾಗಿ ತಮಗಾಗಬಹುದಾದ ಅನಾನು ಕೂಲವನ್ನು ನಿಯಮಾನುಸಾರ ಪ್ರಶ್ನಿಸುವಂತಹ ಹಕ್ಕನ್ನು ಪ್ರದರ್ಶಿಸಬೇಕು. ಆಡಳಿತ ಮಂಡಳಿಗಳೂ ಕೂಡ ಉದಾ ರತೆಯಿಂದ ನಡೆದುಕೊಳ್ಳಬೇಕು. ಶಿಕ್ಷಣ ಎಂಬುದು ದೇಶ ಕಟ್ಟುವ ಹಾಗೂ ಸಮಾಜವನ್ನು ವ್ಯವಸ್ಥಿತವಾಗಿ ರೂಪಿ ಸುವ ವ್ಯವಸ್ಥೆಯಾಗಿದೆ. ಇದಕ್ಕೆ ಅಪವಾದದ ಕಪ್ಪುಚುಕ್ಕೆ ಹಚ್ಚಿಸಿಕೊಳ್ಳಬಾರದು ಎಂಬ ದೃಷ್ಟಿಯಿಂದ, ಸಂಕಷ್ಟ್ಟದಲ್ಲಿ ರುವ ಪೆÇೀಷÀಕರ ಹಾಗೂ ಪ್ರಾಮಾಣಿಕವಾಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಆಡಳಿತ ಮಂಡಳಿಗಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಈ ಸಲಹೆಗಳನ್ನು ನೀಡುತ್ತಿರುವುದಾಗಿ ರಘು ಕೌಟಿಲ್ಯ ಪತ್ರದಲ್ಲಿ ತಿಳಿಸಿದ್ದಾರೆ.

Translate »