18 ವರ್ಷ ಮೇಲ್ಪಟ್ಟವರಿಗೆ ಲಸಿಕೆ; ಕೆ.ಆರ್.ಕ್ಷೇತ್ರ  ವ್ಯಾಪ್ತಿ ನಾಳೆಯಿಂದ ಮೆಗಾ ನೋಂದಣಿ
ಮೈಸೂರು

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ; ಕೆ.ಆರ್.ಕ್ಷೇತ್ರ ವ್ಯಾಪ್ತಿ ನಾಳೆಯಿಂದ ಮೆಗಾ ನೋಂದಣಿ

June 15, 2021

ಮೈಸೂರು, ಜೂ.14(ಎಂಟಿವೈ)- ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರ ವನ್ನು ಕೊರೊನಾ ಮುಕ್ತವಾಗಿಸಲು ಪೈಲಟ್ ಪ್ರಾಜೆಕ್ಟ್ ಮಾದರಿಯಲ್ಲಿ ಜೂ.16 ಮತ್ತು 17ರಂದು ಕ್ಷೇತ್ರದ ಎಲ್ಲಾ ಮತಗಟ್ಟೆಯಲ್ಲಿ ಕೋವಿಡ್ ಪರೀಕ್ಷೆಯೊಂದಿಗೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರು ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಕೆ.ಆರ್.ಕ್ಷೇತ್ರದಲ್ಲಿ ಸೋಂಕು ನಿಯಂತ್ರಣ ಹಾಗೂ ಸೋಂಕಿನ ಸಾವು ನಿಯಂತ್ರಿಸುವ ಸಂಬಂಧ ಮೇಯರ್ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಕೆ.ಆರ್. ಕ್ಷೇತ್ರವನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎರಡು ದಿನಗಳ ವಿಶೇಷ ಅಭಿಯಾನದ ಕಾರ್ಯಕ್ರಮ ರೂಪಿಸ ಲಾಗುತ್ತದೆ. ಎಲ್ಲಾ ಪಕ್ಷಗಳು, ಸಂಘ-ಸಂಸ್ಥೆಗಳ ಸಹಕಾರದಿಂದ ಕ್ಷೇತ್ರದಲ್ಲಿರುವ 19 ವಾರ್ಡ್‍ನ 270 ಮತಗಟ್ಟೆಗಳಲ್ಲಿ ಜೂ.16 ಮತ್ತು 17ರಂದು 1 ಲಕ್ಷ ಮಂದಿಗೆ ಕೊರೊನಾ ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಕ್ಷೇತ್ರದಲ್ಲಿ 3 ಲಕ್ಷ ಜನಸಂಖ್ಯೆಯಿದ್ದು, ಅವರಲ್ಲಿ ಈಗಾಗಲೇ 80 ಸಾವಿರ ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಉಳಿದವ ರಿಗೆ ಕೊರೊನಾ ಪರೀಕ್ಷೆಯೊಂದಿಗೆ ಲಸಿಕೆ ಹಾಕಿಸಲು ಹೆಸರು ನೋಂದಾಯಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.
ಕೆ.ಆರ್.ಕ್ಷೇತ್ರದಲ್ಲಿ 6386 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 169 ಮಂದಿ ಸಾವೀಗೀಡಾಗಿದ್ದಾರೆ. ಪ್ರಸ್ತುತ 103 ಮಂದಿ ಆಸ್ಪತ್ರೆಯಲ್ಲಿ, 667 ಮಂದಿ ಹೋಮ್ ಐಸೋಲೇಷನ್‍ನಲ್ಲಿ 8 ಮಂದಿ ಸೇರಿ ದಂತೆ 778 ಮಂದಿ ಸಕ್ರಿಯ ಪ್ರಕರಣ ವಿದೆ. ಕ್ಷೇತ್ರದಲ್ಲಿ 970 ಮಂದಿ ಹೋಮ್ ಕ್ವಾರಂಟೇನ್‍ನಲ್ಲಿದ್ದಾರೆ. 43 ಮೈಕ್ರೋ ಕಂಟೈ ನ್ಮೆಂಟ್ ಜೋóóನ್‍ಗಳಿವೆ. ಕ್ಷೇತ್ರದ ಒಟ್ಟು 270 ಮತಗಟ್ಟೆಗಳು 100(ಶಾಲಾ ಕಟ್ಟಡ ದಲ್ಲಿ) ಕೇಂದ್ರದಲ್ಲಿವೆ. ಪ್ರತಿಯೊಂದು ಕೇಂದ್ರ ಗಳಿಂದ ಕೊರೊನಾ ಪರೀಕ್ಷೆ ಮಾಡಿಸಲು ಜನರನ್ನು ಕರೆತರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ ಪ್ರಾಯೋ ಗಿಕವಾಗಿ ಮತಗಟ್ಟೆವಾರು ನಡೆಸುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾದರೆ ನಗರ ವ್ಯಾಪ್ತಿಗೆ ಒಳಪಡುವ ಮೂರು ಕ್ಷೇತ್ರಗಳಲ್ಲೂ ಚಾಲನೆಗೆ ತರಲು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ. ಜೂ. 16ರಂದು ಕೋವಿಡ್ ಪರೀಕ್ಷೆ, ಲಸಿಕೆಗಾಗಿ ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾ ಟಿಸಲಿದ್ದಾರೆ. ಈ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಕೋವಿಡ್ ಪರೀಕ್ಷೆ ಹಾಗೂ ಲಸಿಕೆಗಾಗಿ ಹೆಸರು ನೋಂದಣಿ ಕಾರ್ಯಕ್ರಮ ಜರುಗಲಿದೆ. ಹೆಚ್ಚಿನ ಬೇಡಿಕೆ ವ್ಯಕ್ತವಾದರೆ ಜೂ. 18ರಂದು ಮುಂದು ವರೆಸಲಾಗುವುದು ಎಂದು ಹೇಳಿದರು.

`ಸಂಪೂರ್ಣ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ-ನಿಮ್ಮ ಆರೋಗ್ಯದ ಕಡೆಗೆ ನಮ್ಮ ಹೆಜ್ಜೆ’ ಹೆಸರಲ್ಲಿ ನಡೆಸುತ್ತಿರುವ ಈ ಅಭಿ ಯಾನದಲ್ಲಿ ಸ್ವ್ಯಾಬ್ ಮಾದರಿ ಮತ್ತು ಡಾಟಾ ಸಂಗ್ರಹಿಸುವ ಸಿಬ್ಬಂದಿ, ನರ್ಸ್‍ಗಳೊಂ ದಿಗೆ 40 ಆಶಾ ಕಾರ್ಯಕರ್ತೆಯರು, 40 ಆರೋಗ್ಯ ಕಾರ್ಯಕರ್ತರು, ಪ್ರತಿ ಬೂತ್‍ಗೆ ತಲಾ 4 ಶಿಕ್ಷಕರು, ಬಿಎಲ್‍ಆರ್ ಇನ್ನಿತರ ಸಿಬ್ಬಂದಿ ಸೇವೆ ಸಲ್ಲಿಸಲಿದ್ದಾರೆ. ಇದರೊಂ ದಿಗೆ ಪ್ರತಿ ಬೂತ್‍ಗೆ ತಲಾ ಓರ್ವ ಪೆÇಲೀಸ್ ಪೇದೆ, ವಿಭಾಗಕ್ಕೆ ನೋಡಲ್ ಅಧಿಕಾರಿ ಯಾಗಿ ಒಬ್ಬ ಪೆÇಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. 400 ಸ್ವಯಂಸೇವಕ ರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ವಿಶ್ವ ಯೋಗ ದಿನವಾದ ಜೂ. 21ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಲಸಿಕೆ ಖರೀದಿಸಲು 600 ಕೋಟಿ ರೂ. ಮೀಸಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಕ್ಷೇತ್ರದಲ್ಲಿ ನೋಂದಣಿ ನಡೆಸಲಾಗು ತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಪಾಲಿಕೆ ಸದಸ್ಯರು, ವಿವಿಧ ಇಲಾಖೆ ಸಹಕಾರ, ಸಂಘ-ಸಂಸ್ಥೆಗಳಾದ ಸೇಫ್‍ವೀಲ್ಸ್, ಸಿಐಐ, ರಂಗರಾವ್ ಆ್ಯಂಡ್ ಸನ್ಸ್, ಎನ್‍ಎಸ್‍ಎಸ್, ಎನ್‍ಸಿಸಿ, ಖಾಸಗಿ ಆಸ್ಪತ್ರೆಗಳಾದ ಗೋಪಾಲ ಗೌಡ ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ, ಅಲ್ ಅನ್ಸರ್ ಆಸ್ಪತ್ರೆ, ಪೆನೇಸಿಯಾ ಆಸ್ಪತ್ರೆ, ಬಿಜಿಎಸ್ ನರ್ಸಿಂಗ್ ಕಾಲೇಜು, ರಾಮನ್ ನರ್ಸಿಂಗ್ ಕಾಲೇಜು, ಆದಿತ್ಯ ಆಸ್ಪತ್ರೆಗಳು ನೆರವು ನೀಡಲು ಮುಂದೆ ಬಂದಿವೆ ಎಂದರು.

ಈ ಸಂದರ್ಭದಲ್ಲಿ ಪ್ರಭಾರ ಮೇಯರ್ ಅನ್ವರ್ ಬೇಗ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತರೆಡ್ಡಿ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ. ಅಮರನಾಥ್, ಪಾಲಿಕೆ ಸದಸ್ಯರಾದ ಶಿವ ಕುಮಾರ್, ಬಿ.ವಿ.ಮಂಜುನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ಬೆಡ್‍ಮ್ಯಾನೇಜ್‍ಮೆಂಟ್ ನೋಡಲ್ ಅಧಿಕಾರಿ ಡಾ.ಪಿ.ರವಿ, ಲಸಿಕೆ ಅಭಿಯಾನದ ನೋಡಲ್ ಅಧಿಕಾರಿ ಡಾ.ಎಲ್.ರವಿ, ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ, ಲೆಟ್ಸ್ ಡೂ ಇಟ್ ಸಂಸ್ಥೆಯ ಮುಖ್ಯಸ್ಥ ಬಿ.ಎಸ್.ಪ್ರಶಾಂತ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »