ಮೈಸೂರು, ಸೆ.29(ಆರ್‍ಕೆಬಿ)- ಮೈಸೂರು ದಸರಾ ಮಹೋತ್ಸವ ಸಂದರ್ಭ ಕೆಲವು ಸಂಘಟನೆಗಳು ಮಹಿಷ ದಸರಾ ಆಚರಣೆಗೆ ಮುಂದಾಗಿರುವುದನ್ನು ಬಿಜೆಪಿ ಎಸ್‍ಸಿ ಮೋರ್ಚಾ ನಗರ ಘಟಕ ಖಂಡಿಸಿದೆ.
ವಿಶ್ವಕ್ಕೆ ಧಾರ್ಮಿಕ ಗರಿಮೆ ಸಾರುವ ದಸರಾ ಮಹೋತ್ಸವ ಸಂದರ್ಭ ದೈವೀಶಕ್ತಿಯನ್ನು ಪೂಜಿಸುವುದು ಸಂಪ್ರದಾಯ. ಆದರೆ ಕೆಲ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಹಿಂಸೆಯ ಪ್ರತಿರೂಪವಾದ ರಾಕ್ಷಸಗಣವನ್ನು ಪೂಜಿ ಸುವ ಕೆಲಸಕ್ಕೆ ಕೈಹಾಕಿವೆ. ಆ ಮೂಲಕ ಎಸ್‍ಸಿ ಸಮುದಾಯವನ್ನು ದಾರಿ ತಪ್ಪಿ ಸಲು ಮುಂದಾಗಿವೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಹಿಷ ರಾಜನಾಗಿದ್ದ ಎಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಹಾಗೂ ಸಂಶೋ ಧಿಸಿದ ಅಧ್ಯಯನ ಗ್ರಂಥಗಳಲ್ಲಿಯೂ ಅದರ ಉಲ್ಲೇಖವಿಲ್ಲ. ಕವಿ ಕಾದಂಬರಿಕಾರರು ಕಪೋಲಕಲ್ಪಿತ ರೀತಿ ಬರೆದಿರುವ ವಿಚಾರ ವನ್ನೇ ಇಟ್ಟುಕೊಂಡು ಮಹೇಶ್‍ಚಂದ್ರ ಗುರು, ಕೆ.ಎಸ್.ಭಗವಾನ್ ಪರಿಶಿಷ್ಟ ಜಾತಿ ಯವರ ಮುಖವಾಣಿಯಂತೆ ವರ್ತಿಸುತ್ತಿದ್ದಾರೆ. ಶೋಷಿತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಪರಿಶಿಷ್ಟ ಜಾತಿಯ ಪ್ರತಿಯೊಬ್ಬರ ಮನೆ ಯಲ್ಲೂ ಚಾಮುಂಡೇಶ್ವರಿ ಚಿತ್ರಗಳಿವೆ. ಇವರ ಬೀದಿಗೆ ಹೋದರೂ ಚಾಮುಂಡೇಶ್ವರಿ ತಾಯಿಯ ದೇವಾಲಯ ಕಾಣುತ್ತದೆ. ಮಹಿಷಾ ಸುರನನ್ನು ವಧೆ ಮಾಡುತ್ತಿರುವ ಚಿತ್ರಪಟ ಗಳು ಎಸ್‍ಸಿ ಸಮುದಾಯದ ಪ್ರತಿಯೊಬ್ಬರ ಮನೆಗಳಲ್ಲೂ ಇವೆ. ಹೀಗಿರುವಾಗ ಎಸ್‍ಸಿ ಸಮುದಾಯದಿಂದ ನಾಡಹಬ್ಬ ದಸರಾ ಆಚರಣೆಗೆ ವಿರೋಧüವಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಖಂಡಿಸಿದರು. ಬಿಜೆಪಿ ಎಸ್‍ಸಿ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಜಯರಾಮ್, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಪ್ರಸಾದ್, ಮುಖಂಡ ಕೇಬಲ್ ಮಹೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.