ಮೈಸೂರು, ಸೆ.29(ಆರ್‍ಕೆಬಿ)- ಜಿಲ್ಲಾ ಧಿಕಾರಿ ಬಿ.ಶರತ್ ಅವರನ್ನು ಅಧಿಕಾರ ವಹಿಸಿಕೊಂಡ ಕೇವಲ 29 ದಿನಗಳಲ್ಲಿ ವರ್ಗಾಯಿಸಿ ಪರಿಶಿಷ್ಟ ಜಾತಿಯ ಜಿಲ್ಲಾ ಧಿಕಾರಿಗೆ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ಕೆ.ಆರ್. ನಗರ ಶಾಸಕ ಸಾ.ರಾ.ಮಹೇಶ್ ಆಕ್ಷೇಪಿಸಿದರು.
ಮೈಸೂರಿನ ರಮಾವಿಲಾಸ ರಸ್ತೆಯಲ್ಲಿ ರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಆಂಧ್ರಪ್ರದೇಶ ಮೂಲದÀ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿ ಕಾರಿಯಾಗಿ ಇಲ್ಲಿಗೆ ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಕನ್ನಡದ ಐಎಎಸ್ ಅಧಿಕಾರಿಯನ್ನು ಕಡೆಗಣಿಸಿದೆ. ಆ ಮೂಲಕ ಕನ್ನಡಿಗರಿಗೆ, ಎಸ್‍ಸಿ ಸಮುದಾಯದವರಿಗೆ ಅನ್ಯಾಯ ಮಾಡಲಾಗಿದೆ ಎಂದು ಕಿಡಿಕಾರಿದರು.
ಒಮ್ಮೆ ಜಿಲ್ಲಾಧಿಕಾರಿ ಬದಲಾವಣೆಯಾ ದರೆ ಒಂದಷ್ಟು ದಿನ ಯಾವುದೇ ಕಾಮ ಗಾರಿಯ ಬಿಲ್‍ಗಳೂ ಆಗುವುದಿಲ್ಲ. ಅವರ ಡಿಜಿಟಲ್ ಸಹಿ ಅಧಿಕೃತವಾಗುವವರೆಗೂ ಜಿಲ್ಲಾಧಿಕಾರಿ ಯಾವುದೇ ಬಿಲ್‍ಗಳನ್ನೂ ಪಾಸ್ ಮಾಡಲಾಗುವುದಿಲ್ಲ. 29 ದಿನಗಳ ಹಿಂದಷ್ಟೇ ವರ್ಗಾವಣೆಯಾಗಿ ಬಂದ ಬಿ.ಶರತ್ ಅವರ ಡಿಜಿಟಲ್ ಸಹಿ ನಿನ್ನೆಯಷ್ಟೇ ಬಂದಿದೆ. ಅದೇ ದಿನ ಅವರ ಎತ್ತಂಗಡಿಯಾಗಿದೆ. ಈಗ ಹೊಸ ಡಿಸಿಯ ಡಿಜಿಟಲ್ ಸಹಿ ಸಿದ್ಧವಾಗಿ ಬರುವವರೆಗೂ ಯಾವುದೇ ಬಿಲ್ ಪಾಸ್ ಆಗುವುದಿಲ್ಲ ಎಂದು ಸಮ ಸ್ಯೆಯ ಚಿತ್ರಣ ನೀಡಿದರು.
ಯಾವುದೇ ತಪ್ಪು ಮಾಡದ ಡಿಸಿಯನ್ನು ಏಕಾಏಕಿ ವರ್ಗಾವಣೆ ಮಾಡಿದ್ದೇಕೆ? ಇದರ ಹಿಂದೆ ಯಾರಿದ್ದಾರೆ? ವರ್ಗಾವಣೆಗೆ ಕಾರಣ ವೇನು? ಎಂಬುದು ಬಹಿರಂಗವಾಗಬೇಕಿದೆ. ರಾಜ್ಯದಲ್ಲಿ ವರ್ಗಾವಣೆ ದಂಧೆಯಾಗಿರು ವುದು ಸ್ಪಷ್ಟ ಎಂದು ಆರೋಪಿಸಿದರು.
ವರ್ಗಾವಣೆಗೆ ಹಿಂದಿನ ದಿನವಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆ. ಮರುದಿನವೇ ಜಿಲ್ಲಾಧಿಕಾರಿ ವರ್ಗಾವಣೆ ಆಗಿದೆ. ಈ ವರ್ಗಾವಣೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿಲ್ಲದೇ ಆಗಿದೆಯೇ? ಎಂದು ಪ್ರಶ್ನಿಸಿದರು.
ಈಗ ನಿಯುಕ್ತಿಗೊಂಡಿರುವ ಹೊಸ ಜಿಲ್ಲಾ ಧಿಕಾರಿ, ಈಗಾಗಲೇ 3 ಬಾರಿ ತಮ್ಮ ವರ್ಗಾ ವಣೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ಅಂಥ ಜಿಲ್ಲಾಧಿಕಾರಿಯ ನಿಯೋಜನೆಯ ತುರ್ತು ಅಗತ್ಯ ಏನಿತ್ತು? ಬಿ.ಶರತ್ ಅವರ ಲೋಪ ಏನಿತ್ತು?
ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿಯ ಒತ್ತ ಡವೂ ಇದೆ ಎಂಬ ಮಾತು ಕೇಳಿ ಬರುತ್ತಿವೆ. ಮುಖ್ಯ ಮಂತ್ರಿ ಯಡಿಯೂರಪ್ಪ, ಆಂಧ್ರ ಸಿಎಂ ಒತ್ತಡಕ್ಕೆ ಮಣಿದು ಕನ್ನಡದ ಜಿಲ್ಲಾ ಧಿಕಾರಿ ಯನ್ನು ಅಪಮಾನಿಸಿದ್ದಾರೆ. ಸಹಜ ವರ್ಗಾ ವಣೆ ಆಗಿದ್ದರೆ ತಾವು ಪ್ರಶ್ನಿಸುತ್ತಿರಲಿಲ್ಲ. ಆದರೆ ಇದರ ಹಿಂದೆ ದೊಡ್ಡ ಲಾಬಿಯೇ ನಡೆ ದಿದೆ ಎಂದು ಸಾರಾ ಆರೋಪಿಸಿದರು.
ಬಿ.ಶರತ್ ಯಾವ ಒತ್ತಡಕ್ಕೂ ಮಣಿಯ ಬಾರದು. ವರ್ಗಾವಣೆ ಪ್ರಶ್ನಿಸಿ ನ್ಯಾಯಾಂ ಗದ ಮೊರೆ ಹೋಗಬೇಕು ಎಂದು ಸಲºನೀಡಿದರು. ಕೋವಿಡ್-19 ಪ್ರಕರಣ ಹೆಚ್ಚು ತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್‍ಗಳೇ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ಹಣ ನೀಡ ಲಾಗದೆ ಬಡವರು, ಹಳ್ಳಿ ಮತ್ತು ನಗರದ ಜನರ ಸಾವು ಸಂಭವಿಸುತ್ತಲೇ ಇವೆ. ಕೊರೊನಾ ಸೋಂಕಿತರಲ್ಲಿ ಜಾತಿ, ಮತ, ಪಕ್ಷ, ಶಾಸಕ, ಸಂಸದ ಎಂಬ ಭೇದವಿಲ್ಲ. ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಇಂಥ ಸಂದರ್ಭ ಡಿಸಿ ವರ್ಗಾವಣೆ ಅಗತ್ಯವಿತ್ತೇ? ಸರ್ಕಾರ ವರ್ಗಾವಣೆ ದಂಧೆ ಕೈ ಬಿಟ್ಟು ಬಡಜನರ ಜೀವ ಉಳಿಸುವತ್ತ ಗಮನ ಹರಿಸಲಿ ಎಂದು ವಾಗ್ದಾಳಿ ನಡೆಸಿದರು. ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಪಾಲಿಕೆ ಸದಸ್ಯೆ ಪ್ರೇಮಾ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.